ಕೆಜಿಎಫ್ ಶಾಸಕರಿಗೆ ಸಾಧನೆಗಳ ನಾಯಕಿ ಪ್ರಶಸ್ತಿ ನೀಡಿ ಸನ್ಮಾನ
ಕೆಜಿಎಫ್,ಮೇ. ೧೩: ಕೆಜಿಎಫ್ ಕ್ಷೇತ್ರದ ಶಾಸಕರಾದ ಡಾ|| ಎಂ.ರೂಪಕಲಾ ಶಶಿಧರ್ ಅವರಿಗೆ ಶ್ರೀ ವಾಣಿ ನಿಲಯಂ ಉಚಿತ ವಾಚನಾಲಯ ಮತ್ತು ಗ್ರಂಥಾಲಯ ಸಂಘದ ವತಿಯಿಂದ ಸಾಧನೆಗಳ ನಾಯಕಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಕ್ಷೇತ್ರದ ಶಾಸಕಿ ಡಾ|| ಎಂ.ರೂಪಕಲಾ ಶಶಿಧರ್ ಅವರು ಕಳೆದ ೭ ವರ್ಷಗಳಿಂದ ಕೆಜಿಎಫ್ನಲ್ಲಿ ನಿರಂತರವಾಗಿ ಹಲವಾರು ಅಭಿವೃದ್ದಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ, ಹತ್ತು ಹಲವು ಬಗೆಯ ಸಾಧನೆಗಳನ್ನು ಮಾಡಿರುತ್ತಾರೆ. ಶಾಸಕರ ಜನ್ಮ ದಿನೋತ್ಸವದ ಅಂಗವಾಗಿ ಸಾಧನೆಗಳ ನಾಯಕಿ ಎಂಬ ಪ್ರಶಸ್ತಿಯನ್ನು ಶ್ರೀ ವಾಣಿ ನಿಲಯಂ ಉಚಿತ ವಾಚನಾಲಯ ಮತ್ತು ಗ್ರಂಥಾಲಯ ಸಂಘದ ವತಿಯಿಂದ ಶಾಸಕಿ ಡಾ|| ಎಂ.ರೂಪಕಲಾ ಶಶಿಧರ್ ಅವರಿಗೆ ನೀಡಿ, ಗೌರವಿಸಲಾಯಿತು.
ಕೆಜಿಎಫ್ ಉರಿಗಾಂ ವ್ಯಾಪ್ತಿಯ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ೮೩ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವಾಣಿ ನಿಲಯಂ ಉಚಿತ ವಾಚನಾಲಯ ಮತ್ತು ಗ್ರಂಥಾಲಯ ಕಟ್ಟಡವನ್ನು ನವೀಕರಿಸಿ ಹೊಸ ಉಜ್ವಲತೆಯ ವಾತಾವರಣವನ್ನು ನಿರ್ಮಿಸಿ, ಓದುಗರಿಗೆ ಸಾರ್ವಜನಿಕ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಟ್ಟಿದ್ದು, ಅಲ್ಲದೇ, ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಿ ಉತ್ತಮವಾದ ರೀತಿಯಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡುತ್ತಾ, ಸೇವೆ ಸಲ್ಲಿಸುತ್ತಿರುವ ಜನ ಮೆಚ್ಚಿದ, ಜನನಾಯಕಿ ಕ್ಷೇತ್ರದ ಶಾಸಕಿ ಡಾ|| ಎಂ.ರೂಪಕಲಾ ಶಶಿಧರ್ ಅವರಿಗೆ ಸಾಧನೆಗಳ ನಾಯಕಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಜರ್ಮನ್ ಜೂಲಿಯಸ್, ಶ್ರೀ ವಾಣಿ ನಿಲಯಂ ಉಚಿತ ವಾಚನಾಲಯ ಮತ್ತು ಗ್ರಂಥಾಲಯ ಸಂಘದ ಅಧ್ಯಕ್ಷ ಎಸ್. ವಿಶ್ವೇಶ್ವರಯ್ಯ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
