ಗುರುರಾಯರ ಸನ್ನಿಧಿಯಲ್ಲಿ ರಚನಾ ಗಾಯನ
ಬೆಂಗಳೂರಿನ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಫೆ. 26, ಗುರುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಹರಿನಾಮ ಸ್ಮರಣೆ" ಶೀರ್ಷಿಕೆಯಲ್ಲಿ ಕು|| ರಚನಾ ಶರ್ಮಾ ಅವರು ಹರಿದಾಸರ ಕೀರ್ತನೆಗಳನ್ನು ಹಾಡಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀ ಸೀತಾರಾಮ್ ಗೋಪಿನಾಥ್ ಮತ್ತು ಮೃದಂಗ ವಾದನದಲ್ಲಿ ಶ್ರೀ ಮಹಂತ್ ಸಹಕರಿಸಿದರು ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರು ತಿಳಿಸಿದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
