ಗೋಲ್ಡನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಅದ್ದೂರಿ ವಾರ್ಷಿಕೋತ್ಸವ ಆಚರಣೆ
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿ ಚಿಕ್ಕತಿರುಪತಿ ಸಮೀಪದ ಬಾಗೂರು ಸೋಣ್ಣೆನ್ನಹಳ್ಳಿಯಲ್ಲಿ ಗೋಲ್ಡನ್ ಇಂಡಿಪೆಂಡೆಂಟ್ ಪಿಯು ಹಾಗೂ ಡಿಗ್ರಿ ಕಾಲೇಜಿನ ಜಾವಸ ಸಿಟಿ ಮೈದಾನದಲ್ಲಿ ನಡೆದ ನೆಕ್ಸಾ-2026 ರ ಕಾಲೇಜು ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಲಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ಶ್ರೀಮತಿ ಶೃತಿ.ಎನ್.ಸಿ ರವರು ಮಾತನಾಡುತ್ತಾ "ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಅವಮಾನ, ಅನುಮಾನ, ಸಮ್ಮಾನಗಳಿಲ್ಲದೆ ಸಾಧನೆ ಸಾಧ್ಯವಿಲ್ಲ. ಜೀವನಪ್ರೀತಿಯಿಂದ ಅಂತರಂಗ ಗಟ್ಟಿಗೊಳ್ಳುತ್ತದೆ. ವಿದ್ಯಾರ್ಥಿಗಳು ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ನಾಶ ಮಾಡಿಕೊಳ್ಳದೇ, ತಂದೆ-ತಾಯಿ-ಗುರುಗಳ ಆಶೀರ್ವಾದ ಸಲಹೆ ಸೂಚನೆ ಮೂಲಕ ಗುರಿ ಮುಟ್ಟಿ" ಎಂದರು.
ಕಾರ್ಯಕ್ರಮದ ಪ್ರಮುಖ ಮುಖ್ಯ ಅತಿಥಿಯಾಗಿ ಭಾಗವಾಹಿಸಿದ್ದ ಚೈತನ್ಯ ಕಲಾನೀಕೆತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಕವಿಗಳಾದ ಡಾ.ಜ.ಮು.ಚಂದ್ರ ರವರು ಮಾತನಾಡುತ್ತಾ "ಮನಸ್ಸಿನ ಧೀಶಕ್ತಿಯನ್ನು ಎಂದಿಗೂ ತ್ಯಜಿಸಬಾರದು. ಒದಗಿ ಬರುವ ಅವಕಾಶಗಳನ್ನು ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ" ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೈಯದ್ ನಿಖತ್ ರವರು ಮಾತನಾಡುತ್ತಾ "ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ. ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೋಲ್ಡನ್ ಗ್ರೂಫ್ ಆಫ್ ಇನ್ಸ್ಟಿಟ್ಯೂಟ್ಸ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಅಹಮದ್ ರವರು ಮಾತನಾಡುತ್ತಾ "ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಗುಣ ಮತ್ತು ಹವ್ಯಾಸಗಳನ್ನು ಕಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು" ಎಂದರು.
ಕಾರ್ಯಕ್ರಮದಲ್ಲಿ ಗೋಲ್ಡನ್ ಸಂಸ್ಥೆಯಲ್ಲಿ ಸುಮಾರು ವರ್ಷಗಳು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು ಹಾಗೇ ವಿದ್ಯಾರ್ಥಿಗಳು ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಲ್ಡನ್ ಸಂಸ್ಥೆಯ ಸುಲೇಮಾನ್ ಖಾನ್, ಮುಖ್ಯೋಪಾಧ್ಯಾಯರದ ಲಕ್ಷ್ಮಮ್ಮ, ಹುಸ್ನ ಅಹ್ಮದ್, ಉಪನ್ಯಾಸಕರಾದ ಅಕ್ಬರ್ ಆಲಿ, ಷರೀಫ್, ಹುಜ್ರ, ಆಯೇಷಾ, ದಿವ್ಯ, ನಿರುಪಮಾ, ವೆಂಕಟೇಶ್, ನವೀನ್, ಪ್ರಮೀಳ, ಸಾಯಿರಾಂ, ಶಾಜೀಯಾ, ಹೀನಾ, ಸಲಾಹುದ್ದೀನ್, ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
