ಗ್ರಾಮ ದೇವತೆ ಶ್ರೀಪಾತಕೋಟ ಗಂಗಮ್ಮ ದೇವಿ4ನೇ ವರ್ಷದ ಹೂವಿನ ಕರಗ ಮಹೋತ್ಸವ-ಎಸ್.ಎಸ್.ರಮೇಶ್ ಬಾಬು
ಬಾಗೇಪಲ್ಲಿ: ತಾಲೂಕಿನ ಗೂಳೂರು ಗ್ರಾಮದ ಗ್ರಾಮ ದೇವತೆ ಪಾತಕೋಟ ಶ್ರೀಗಂಗಮ್ಮ ದೇವಿಯ ಸನ್ನಿಧಿಯಲ್ಲಿ ಶ್ರೀಧರ್ಮರಾಯರಸ್ವಾಮಿಯ 4ನೇ ಹೂವಿನ ಕರಗ ಮಹೋತ್ಸವ ಇಂದು ನಡೆಯಲಿದೆ ಎಂದು ಕರಗ ಸಮಿತಿ ಮುಖ್ಯಸ್ಥ ಹಾಗೂ ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಹೂವಿನ ಕರಗ ಮಹೋತ್ಸವ ಅಂಗವಾಗಿ ಮೇ 22ರಂದು ಹಸಿ ಕರಗ ನಡೆಯಲಿದ್ದು, ಇಂದು ಶ್ರೀಪಾತಕೋಟ ಗಂಗಮ್ಮ ದೇವಿಗೆ ಮದ್ಯಾಹ್ನ 1ಗಂಟೆಗೆ ಜ್ಯೋತಿಗಳ ಕಾರ್ಯಕ್ರಮ ನಡೆಯಲಿದೆ. ಹೂವಿನ ಕರಗವನ್ನು ಪ್ರತಿ ಸಲದಂತೆ ಈ ಸಲವೂ ಎಸ್.ಅಗ್ರಹಾರದ ಪಿ.ಶಿವರಾಜ್ ಹೂವಿನ ಕರಗ ಹೊರೆಯಲಿದ್ದು.
ಶುಕ್ರವಾರ ರಾತ್ರಿ 8ಗಂಟೆಗೆ ಬಳೆ ತೊಡಿಸುವ ಕಾರ್ಯಕ್ರಮದ ಮುಗಿದ ಕೂಡಲೇ ತಮಟೆ ವಾದ್ಯಗಳೊಡನೆ ವೀರಕುಮಾರರೊಂದಿಗೆ ಪಾತಕೋಟ ಶ್ರೀಗಂಗಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಗಳು ನಡೆಯಲಿವೆ ನಂತರ ಕರಗ ಹೊತ್ತ ಶಿವರಾಜ್ ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಭಕ್ತರಿಂದ ಪೂಜೆ ಸ್ವೀಕರಿಸುವರು ಈ ಸಂದರ್ಭದಲ್ಲಿ ಇಡೀ ರಾತ್ರಿ ಆರ್ಕೆಸ್ಟಾç,ದಾಸೋಹ ಡೊಳ್ಳು ಕುಣಿತ ಕಾರ್ಯಕ್ರಮಗಳು ನಡೆಯಲಿದ್ದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೂವಿನ ಕರಗಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
