ಬೇತಮಂಗಲ: ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಜುಲೈ 27ಕ್ಕೆ ಬೇತಮಂಗಲದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಒಕ್ಕಲಿಗ ಸಮುದಾಯದಿಂದ ಒಮ್ಮತದಿಂದ ನಿರ್ಧಾರವನ್ನು ಕೈಗೊಳ್ಳಲಾಯಿತು.
ಬೇತಮಂಗಲ ಗ್ರಾಮದ ಪ್ರವಾಸಿ ಮಂದಿರದಲ್ಲಿ ಕೆಜಿಎಫ್ ತಾಲೂಕಿನ ವಿವಿಧ ಗ್ರಾಮಗಳ ಒಕ್ಕಲಿಗ ಸಮುದಾಯದ ಮುಖಂಡರು ಹಾಗೂ ಯುವಕರಿಂದ ಪೂರ್ವಭಾವಿ ಸಭೆ ನಡೆಸಿ ನಿರ್ಧರಿಸಲಾಯಿತು.
ಪ್ರತಿ ಗ್ರಾಮದಿಂದ ಪುಪ್ಪ ಪಲ್ಲಕ್ಕಿ:
ಕೆಜಿಎಫ್ ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಜನಾಂಗದವರು ವಾಸಿಸುತ್ತಿರುವ ಪ್ರತಿಯೊಂದು ಗ್ರಾಮದಿಂದಲ್ಲೂ ಪುಪ್ಪ ಪಲ್ಲಕ್ಕಿ ಉತ್ಸವದ ಮೂಲಕ ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲು ಸೂಚಿಸಿದರು. ಅದೇ ರೀತಿ ಪಲ್ಲಕ್ಕಿಯ ಜೊತೆಗೆ ಸಮುದಾಯದವರು ಕುಟುಂಬ ಸಮೇತರಾಗಿ ಭಾಗವಹಿಸಲು ತಿಳಿಸಿದರು.
ಕಲಾ ತಂಡಗಳು, ತಮಟೆ ಮೆರುಗು:
ರಾಜ್ಯದ ರಾಜಧಾನಿ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರು ಜಯಂತಿ ಆಚರಣೆಯಲ್ಲಿ ಪುಪ್ಪ ಪಲ್ಲಕ್ಕಿ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ತಮಟೆ ವಾದ್ಯ ಹಾಗೂ ಚೆಂಡಿ ವಾದ್ಯಗಳ ಮೂಲಕ ಮೆರುಗು ತರುವುದಾಗಿ ಹೇಳಿದರು.
ಆರ್ಕೆಸ್ಟ್ರಾ ಮನರಂಜನಾ ಕಾರ್ಯಕ್ರಮ:
ಭಾನುವಾರ ಬೆಳಗ್ಗೆ ಯಿಂದಲೂ ಪಲ್ಲಕ್ಕಿ ಉತ್ಸವ ಮೆರವಣಿಗೆ ಮುಂಗಿದ ನಂತರ ಸಂಜೆಗೆ ಬೇತಮಂಗಲ ಬಸ್ ನಿಲ್ದಾಣದಲ್ಲಿ ಮನರಂಜನಾ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಗ್ರಾಪಂ ಮಾಜಿ ಅಧ್ಯಕ್ಷ ಕಾರಿ ಪ್ರಸನ್ನ, ಮುಖಂಡರಾದ ನಲ್ಲೂರು ಶಂಕರ್, ವಿಜೇಂದ್ರ, ರಾಜಣ್ಣ, ಡೈರಿ ಮಂಜುನಾಥ್, ಲಕ್ಷ್ಮೀನಾರಾಯಣ, ಸೀನಪ್ಪ, ವಿಶ್ವನಾಥ್, ರವಿ, ಚೌಡಪ್ಪ, ಮುರಳಿ, ವೇಣು, ವೆಂಕಟಾಚಲಪತಿ, ಶಂಕರಪ್ಪ, ಪ್ರೆಸ್ ಮಂಜು, ನಂದೀಶ್, ಚಂದು, ಯಶ್ವಂತ್, ಸಾಗರ್, ಶ್ರೀನಾಥ್, ತರುಣ್, ಬಾಲಾಜಿ, ಚೌಡಪ್ಪ, ಪ್ರವೀಣ್ ಸೇರಿದಂತೆ ಮುಖಂಡರು, ಯುವಕರು ಪಾಲ್ಗೊಂಡಿದ್ದರು.
ಚಿತ್ರ 01 ಬೇತಮಂಗಲ ಗ್ರಾಮದ ಪ್ರವಾಸಿ ಮಂದಿರದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ ನಡೆಸಿದರು.