ತೆಳ್ಳನೂರು ಗ್ರಾಮದಲ್ಲಿ ಶನೇಶ್ವರನ ಉತ್ಸವ ಬಹಳ ವಿಗ್ರಹಣೆಯಿಂದ ಜರುಗಿತು
ಸಂತೆಮರಹಳ್ಳಿ : ಸಮೀಪದ ತೆಳ್ಳನೂರು ಗ್ರಾಮದಲ್ಲಿ ಶ್ರಾವಣ ಮಾಸದ ಮೂರನೇ ಶನಿವಾರದಲ್ಲಿ ಶ್ರೀ ಶನೇಶ್ವರನ ಉತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಶ್ರೀ ಶನಿಮಹಾತ್ಮನ ಫೋಟೋ ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ವಿವಿಧ ಹೂಗಳಿಂದ ಶೃಂಗಾರಮಾಡಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ಪಲ್ಲಕ್ಕಿಯ ಮೇಲೆ ಶನಿಮಹಾತ್ಮನ ದರ್ಶನ ಪಡೆಯಲು ಭಕ್ತಾದಿಗಳು ಸಾಲುಸರದಿಯಲ್ಲಿ ನಿಂತಿರುವುದು ಬಹಳ ವಿಶೇಷವಾಗಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಹಾಗೂ ಡೋಲು ವಾದ್ಯಗಳ ಸಮೇತ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತಾದಿಗಳು ಮೆರವಣಿಗೆ ಮುಖಾಂತರ ಸಾಗಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಗ್ರಾಮದ ಮುಖಂಡ ಪೂಜಾರಿ ಕುಮಾರ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಮೂರನೇ ಶನಿವಾರದಲ್ಲಿ ಶನಿ ಮಹಾತ್ಮನ ಫೋಟೋ ಇಟ್ಟು ಪೂಜೆ ಮಾಡುವುದು ವಿಶೇಷವಾಗಿದೆ ಈ ವರ್ಷ ಮಳೆರಾಯ ಅನುಗ್ರಹದಿಂದ ಅಧಿಕ ಮಳೆಯಾಗಿದ್ದು ಗ್ರಾಮದ ರೈತರು ಸಂತೋಷದಿಂದ ಇರುವುದು ಬಹಳ ವಿಶೇಷವಾಗಿದೆ.
ಹಾಗಾಗಿ ಆ ದೇವರ ಮಹಿಮೆಗೆ ಎಲ್ಲರೂ ಪಾತ್ರರಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ತಿ
ಳಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
