ದಲಿತ CM ಯಾವಾಗ ?  ಡಾ. ಕೋದಂಡ ರಾಮ್. ರಾಜ್ಯಾಧ್ಯಕ್ಷರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ

Nov 28, 2025 - 17:37
 0  6
ದಲಿತ CM ಯಾವಾಗ ?  ಡಾ. ಕೋದಂಡ ರಾಮ್. ರಾಜ್ಯಾಧ್ಯಕ್ಷರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ

    ಕರ್ನಾಟಕ ರಾಜ್ಯದ ಜನಸಂಖ್ಯೆಯ ಶೇ35% ಕ್ಕಿಂತ ಹೆಚ್ಚು ಜನ ಸಂಖ್ಯೆ ಇರುವ ಎಸ್ ಸಿ ಎಸ್ ಟಿ ಸಮುದಾಯಗಳಿಗೆ ರಾಜ್ಯವನ್ನಾಳಿದ ಸರ್ಕಾರಗಳು ಏನು ನೀಡಿವೆ ? 
ಈ ಸಮುದಾಯಗಳ ನಾಯಕರುಗಳು ರಾಜಕೀಯ ಪಕ್ಷಗಳ ಚಾಕರಿ ಮಾಡಿಕೊಂಡು ಆಧುನಿಕ ಗುಲಾಮಗಿರಿಯನ್ನ ಪಾಲಿಸಿಕೊಂಡು ಬರುತ್ತಿರುವುದು ದುರಂತವೇ ಸರಿ !!!!

ಈ ರಾಜ್ಯದ ಎಸ್ ಸಿ ಎಸ್ ಟಿ ಸಮುದಾಯದ ನಾಯಕರುಗಳು ಇನ್ನೊಬ್ಬ ನಾಯಕನ ಗೇಟ್ ಕಾಯುತ್ತಿರುವ ಬದುಕನ್ನೇ ಬದುಕುತ್ತಿದ್ದಾರೆ ಅವರುಗಳಿಗೆ ದ್ವನಿ ಇಲ್ಲ , ಉಸಿರು ಇಲ್ಲದ ಜೀವಂತ ಶವಗಳಂತೆ ಬದುಕುತ್ತಿದ್ದಾರೆ. 

ಪ್ರಸ್ತುತ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲು ಈ ರಾಜ್ಯದ ಎಸ್ ಸಿ ಎಸ್ ಟಿ ಸಮುದಾಯದ ನಿರ್ಣಾಯಕ ಪಾತ್ರ ವಹಿಸಿ ಅತೀ ಹೆಚ್ಚು ಶಾಸಕರನ್ನು ಗೆಲ್ಲಿಸಿ ಅಭೂತಪೂರ್ವ ಸಾಧನೆ ಯೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತಂದರೂ ಕೂಡ ಈ ಸರ್ಕಾರಕ್ಕೆ ಎಸ್ ಸಿ ಎಸ್ ಟಿ ಜನಾಂಗಕ್ಕೆ ಏನು ಮಾಡಿದೆ ????
ಈ ಹಿಂದೆ ಇದ್ದ BJP  ಸರ್ಕಾರ ಎಸ್ ಸಿ ಎಸ್ ಟಿ ಸಮುದಾಯಕ್ಕೆ ಹೇಳಿಕೊಳ್ಳುವಂತ ಯಾವುದೇ ಮಹತ್ವಪೂರ್ಣ ಕಾರ್ಯಗಳನ್ನು ಮಾಡಲಿಲ್ಲ. ಅದೇ ರೀತಿ ಹಿಂದಿನ ಸರ್ಕಾರಗಳು ನಡೆದುಕೊಂಡ ಅದೇ ಜಾಡಿನಲ್ಲಿ ನಡೆದುಕೊಂಡಿತ್ತು. 

ಒಂದು ಕೋಟಿ ಐವತ್ತು ಲಕ್ಷಕಿಂತ ಮೇಲಟ್ಟು ಜನಸಂಖ್ಯೆ ಇರುವ ಈ ಸಮುದಾಯ ಹೇಳಿದಂತೆ ಸರ್ಕಾರಗಳು ನಡೆದು ಕೊಳ್ಳಬೇಕಿತ್ತು.  ಆದ್ರೆ ನಮ್ಮಲ್ಲಿ ಕಾಲು ಬಾಗದ ಜನಸಂಖ್ಯೆ ಇರುವ ಸಮುದಾಯದವರು ಹೇಳಿದಂತೆ ನಡೆಯುತ್ತಿರುವುದು ಲಜ್ಜಗೇಡಿ ರಾಜಕಾರಣ ಪ್ರಶ್ನಿಸುವ ತಾಕತ್ತು ಇಲವೇ ಈ ಸಮುದಾಯದ ರಾಜಕಾರಣಿಗಳಿಗೆ ????
ಕಾಂಗ್ರೇಸ್ ನ್ನು ಬಹುಮತದಿಂದ ಗೆಲ್ಲಿಸಿದ ಎಸ್ ಸಿ ಎಸ್ ಟಿ ಸಮುದಾಯಕ್ಕೆ ಏನು ನೀಡಿದೆ ? ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಜನ ಸಂಖ್ಯೆಯಲ್ಲಿ  ಶೇ 35% ಕಿಂತ ಹೆಚ್ಚಿದ್ದರೂ ರಾಜಕೀಯ ಪ್ರಾಶಸ್ತ್ಯ ಸಿಗದಿರುವುದು ನಮ್ಮೆಲ್ಲರ ದುರಂತ. 

ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ನವರಿಗೆ ಒಂದು ಸಮುದಾಯ ಬೆಂಬಲ ಸೂಚಿಸಿ ಮಾತ್ನಾಡಲು ಶುರು ಮಾಡಿಕೊಂಡಿದೆ. ಅದೇ ರೀತಿ ಉಪ ಮುಖ್ಯಮಂತ್ರಿ ಯಾಗಿರುವ ಡಿ ಕೆ ಶಿವಕುಮಾರ್ ರವರಿಗೆ ಒಂದು ಸಮುದಾಯ ಬೆಂಬಲಕ್ಕೆ ನಿಂತು ಸಿಎಂ ಪಟ್ಟ ಕೊಡಬೇಕು ಕೊಡಲಿಲ್ಲ ಅಂದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸರಿಯಾದ ಪಾಠ ಕಳಿಸುತ್ತೇವೆ ಎಂದು ಬಹಿರಂಗವಾಗಿ ಎಚ್ಚರಿಕೆಯ ಮಾತುಗಳನ್ನು ಆಡುತ್ತಿವೆ. 

ಆದರೆ ಸರ್ಕಾರ ರಚಿಸಲು ಬಹುಮುಖ್ಯ ಪಾತ್ರ ವಹಿಸಿರುವ ಎಸ್ ಸಿ ಎಸ್ ಟಿ ಸಮುದಾಯದ ಯಾವ ನಾಯಕರು ಸಹ ಸಿಎಂ ಸ್ಥಾನ ನಮಗೆ ಕೊಡಿ ಎಂದು ಹೇಳಿಕೆ ಕೂಡ ಕೊಡದಿರುವುದು ಲಜ್ಜೆಗೇಡಿತನವಾಗಿದೆ. 

ಆದರೂ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಥ್ ನೀಡಿದ ಎಸ್ ಸಿ ಎಸ್ ಟಿ ಸಮುದಾಯದ ಒಲವನ್ನು ಕಾಯುವ ಯಾರೊಬ್ಬರಿಗಾದರೂ ಸಿ ಎಂ ಸ್ಥಾನವನ್ನು ಬಿಟ್ಟು ಕೊಟ್ಟು 75 ವರ್ಷಗಳಿಂದ ಸಿಗದ ಪ್ರಾತಿನಿಧ್ಯವನ್ನು ನೀಡಲು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯು ಆಗ್ರಹಿಸುತ್ತದೆ.  

*ಈಗಲದೇ ಮತ್ತೆ ಯಾವಾಗ ಎಂಬ ಯಕ್ಷ ಪ್ರಶ್ನೆಗೆ ಕಾಂಗ್ರೇಸ್ ಸರ್ಕಾರ ಉತ್ತರಿಸಬೇಕಿದೆ 
ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹಿಸುತ್ತದೆ*.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456