ದ್ವಿಚಕ್ರ ವಾಹನ ಕಳವು, ಓರ್ವ ಆರೋಪಿ ಬಂಧನ, ಮಾಲು ವಶ
ಕೆಜಿಎಫ್,ಜೂ.೦೩:ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ರೂ.೧೮,೬೦,೦೦೦/- (ರೂಪಾಯಿ ಹದಿನೆಂಟು ಲಕ್ಷದ ಅರವತ್ತು ಸಾವಿರ ಮಾತ್ರ) ಬೆಲೆ ಬಾಳುವ ೧೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬಂಗಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂ. ೦೧ ರಂದು ದೂರುದಾರರಾದ ಹರಿಕೃಷ್ಣ ಎಂಬುವರು ಬಂಗಾರಪೇಟೆ ರೈಲ್ವೇ ನಿಲ್ದಾಣದ ಬಳಿ ಇರುವ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಟ್ಯಾಂಡ್ನಲ್ಲಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನವು ಕಳ್ಳತನವಾಗಿರುವ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಡಿವೈಎಸ್ಪಿ ಎಸ್.ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪಿಐ ಆರ್.ದಯಾನಂದ್ ರವರ ನೇತೃತ್ವದಲ್ಲಿ ಪಿಎಸ್ಐ ಎಸ್.ವಿ.ರಾಜಣ್ಣ ರವರನ್ನು ಒಳಗೊಂಡಂತೆ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.ಕಾರ್ಯಾಚರಣೆ ನಡೆಸಿದ ಪೊಲೀಸರು ಆಂದ್ರಪ್ರದೇಶ ರಾಜ್ಯ ಜಿತ್ತೂರು ಜಿಲ್ಲೆಯ ವಾಸಿ ಚಂದ್ರಚಾರಿ (೩೮ ವರ್ಷ) ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಬಂಗಾರಪೇಟೆ, ಬೇತಮಂಗಲ, ಕಮ್ಮಸಂದ್ರ, ಮುಳಬಾಗಿಲು, ಹೊಸಕೋಟೆ ಹಾಗೂ ಆಂದ್ರಪ್ರದೇಶದ ಕುಪ್ಪಂ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಈಗಾಗಲೇ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿ ಕಡೆಯಿಂದ ರೂ.೧೮,೬೦,೦೦೦/- ಬೆಲೆ ಬಾಳುವ ೧೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ದ ಕಾನೂನು ಕ್ರಮ ವಹಿಸಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪಿಐ ಆರ್.ದಯಾನಂದ್, ಪಿ.ಎಸ್.ಐ ಎಸ್.ವಿ.ರಾಜಣ್ಣ ಸಿಬ್ಬಂದಿಗಳಾದ ಮಂಜುನಾಥ್, ಗಜೇಂದ್ರ, ವಿಜಯ್ ಕುಮಾರ್, ಮಧುಕುಮಾರ್, ಸುನೀಲ್, ಸಂತೋಷ್ ಸಿದ್ದಾಪೂರ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.
ಚಿತ್ರ ಶೀರ್ಷಿಕೆ:೦೩ಕೆಜಿಎಫ್೦೧: ವಶಪಡಿಸಿಕೊಂಡ ೧೭ ದ್ವಿಚಕ್ರ ವಾಹನಗಳೊಂದಿಗೆ ಬಂಗಾರಪೇಟೆ ಪೊಲೀಸರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
