ನಮ್ಮ ಹಿರಿಯರೇ ನಮ್ಮ ಮನೆ ದೇವರು,ತಂದೆ ತಾಯಿಯನ್ನು ಪ್ರೀತಿಸಿ ಗೌರವಿಸಿ

Dec 17, 2025 - 08:44
 0  24
ನಮ್ಮ ಹಿರಿಯರೇ ನಮ್ಮ ಮನೆ ದೇವರು,ತಂದೆ ತಾಯಿಯನ್ನು ಪ್ರೀತಿಸಿ ಗೌರವಿಸಿ

ಭೂಮಿ ಮೇಲೆ ಹುಟ್ಟಿದ ಸಕಲ ಜೀವರಾಶಿಗೂ ತಂದೆ ತಾಯಿ ಇರಲೇಬೇಕು. ಜೀವರಾಶಿಗಳು ಉತ್ಪತ್ತಿ ಅದು ಪ್ರಕೃತಿಯ ಸಹಜ ಕ್ರಿಯೆ. ಅಂತೆ ಮಾನವರದು ಕೂಡ. ಮನುಷ್ಯರಾದ ನಾವು, ಮನುಷ್ಯರಿಂದಲೇ ಜನ್ಮ ತಾಳುತ್ತೇವೆ.ಮಾನವರು ಮಿಕ್ಕ ಎಲ್ಲಾ ಪಶು ಪಕ್ಷಿ ಪ್ರಾಣಿ ಗಿಂತಲೂ ಶ್ರೇಷ್ಠರು ಎನಿಸಿಕೊಳ್ಳುತ್ತೇವೆ ಬುದ್ಧಿಜೀವಿಗಳು ಎನಿಸಿಕೊಳ್ಳುತ್ತೇವೆ. ಪ್ರಾಪಂಚಿಕ ಜೀವನದಲ್ಲಿ ಕೆಲವು ಕಟ್ಟುನಿಟ್ಟುಪಾಡುಗಳನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.

ನಮ್ಮ ಸೃಷ್ಟಿಗೆ ಕಾರಣವಾದ ತಂದೆ ತಾಯಿಗಳನ್ನು ನಾವು ಗೌರವಿಸಬೇಕು. ಏಕೆಂದರೆ ಇಂಥ ಅದ್ಭುತವಾದ ಜಗತ್ತನ್ನು ನಮಗೆ ಪರಿಚಯಿಸಿದವರೇ ನಮ್ಮ ತಂದೆ ತಾಯಿಗಳು.

ತಾಯಿಯಾದವಳು ಮಕ್ಕಳನ್ನು ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತು , ನಂತರ ಹೆತ್ತು, ನಿಸ್ಸಹಾಯಕ ಪರಿಸ್ಥಿತಿಯಲ್ಲಿದ್ದ ಮಕ್ಕಳಿಗೆ ತನ್ನ ಮೊಲೆ ಹಾಲು ಕುಡಿಸುತ್ತಾ ಮಕ್ಕಳ ಹಸಿವನ್ನು ನೀಗಿಸಿದವಳು ತಾಯಿ.ತನ್ನ ಎದೆಗೆ ಹಚ್ಚಿಕೊಂಡು ಅಕ್ಕರೆ ಪ್ರೀತಿಯ ತೋರಿಸಿ ಮುದ್ದಿಸಿ ಪೋಷಿಸಿ ,ಚೆನ್ನಾಗಿ ಬೆಳೆಸಿ ನಮಗೆ ದೊಡ್ಡವರಾಗಿ ಮಾಡಿರುತ್ತಾರೆ.ತಾವು ಉಪವಾಸ ಬಿದ್ದು ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಹಾಕುತ್ತಾರೆ.ನಮ್ಮ ಮಕ್ಕಳು ಓದಿ ವಿದ್ಯಾವಂತರಾಗಿ ಸಮಾಜದಲ್ಲಿ ಕೀರ್ತಿವಂತರಾಗಲಿ ಎಂದು ತಾಯಿಯಾದವಳು ತನ್ನ ಗಲ್ಲ ಗಲ್ಲ ಹೊಡೆದುಕೊಂಡು ದೇವರಿಗೆ ಪ್ರಾರ್ಥಿಸುತ್ತಾಳೆ.

ನನ್ನ ಮಕ್ಕಳಿಗೆ ಎಲ್ಲಾ ಮಕ್ಕಳಿಗೆ ಸುಬುಧ್ಧಿ ಕೊಡಪ್ಪಾ ದೇವರೇ ಎಂದು.

ಮಕ್ಕಳು ಬೆಳೆಯುತ್ತಿರುವಾಗ ಎದ್ದಾಗ ಬಿದ್ದಾಗ ಸಂತೈಸಿ, ಉತ್ತೇಜಿಸಿ, ಪಾಲನೆ ಪೋಷಣೆ ಮಾಡುತ್ತಾ ಯಾವಾಗಲೂ ಮಕ್ಕಳಿಗೆ ಶುಭ ಹಾರೈಸುವವರೇ ತಂದೆ ತಾಯಿಗಳು.

ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸಿ, ಮಕ್ಕಳ ಭವಿಷ್ಯ ರೂಪಿಸಲು ಶಕ್ತಿ ಮೀರಿ ಪ್ರಯತ್ನ ಪಡುವವರೆ ಹೆತ್ತವರು.ತಾವು ನೋವು ದುಃಖಗಳನ್ನುಂಡು,ನನ್ನ ಮಕ್ಕಳು ಸದಾ ಸುಖವಾಗಿರಲಿ ಎಂದು ಬಯಸುವವರೇ ಹೆತ್ತವರು.ಹೆತ್ತವರ ಋಣ ತೀರಿಸಲು ಸಾಧ್ಯವಿಲ್ಲ.

ಇತ್ತಿಚಿನ ತಂತ್ರಜ್ಞಾನ ಯುಗದಲ್ಲಿ ಎಲ್ಲರಿಗೂ ನೂರೆಂಟು ಕೆಲಸಗಳು ಟೆನ್ಶನ್ ಗಳು ಇರುವುದರಿಂದ,ಈಗಿನವರು ಪ್ರೀತಿ ವಾತ್ಸಲ್ಯದ ಕೊರತೆಯಿಂದಲೇ ಬದುಕುತ್ತಿದ್ದಾರೆ.ಹೆತ್ತವರನ್ನೆ ಕಡೆಗಣಿಸುತ್ತಿದ್ದಾರೆ.ನಮಗೆ ಹೆತ್ತವರು, ಪ್ರೀತಿ ಮಮತೆ ಕಾಳಜಿ ಮಾಡಿದ ತಂದೆ ತಾಯಿಗಳು, ವೃದ್ಧಾಪ್ಯದಲ್ಲಿ ತಮಗೆ ಪ್ರೀತಿಸುವ ಕಾಳಜಿ ಮಾಡುವ ಮಕ್ಕಳಿಲ್ಲದೇ ಅನಾಥಾಶ್ರಮಗಳನ್ನು ಸೇರುತ್ತಿದ್ದಾರೆ.ಇದು ನಿಜಕ್ಕೂ ದುರಂತವೇ ಸರಿ.

ನಮ್ಮ ಹೆತ್ತವರಿಗೆ ಅನ್ಯರು ಕಾಳಜಿ ಪ್ರೀತಿ ಮಾಡಬೇಕೇ,,ಇದು ಮಕ್ಕಳಿಗೆ ನಾಚಿಕೆಗೇಡು.

ಒಂದು ವೇಳೆ ನಮ್ಮ ಹೆತ್ತವರಿಗೂ ನಾವು ಬೇಡವಾಗಿ ಅವರೂ ನಮಗೇ ಕೈ ಬಿಟ್ಟು ಬೀದಿಯಲ್ಲಿ ಬಿಟ್ಟಿದ್ದರೆ, ಹೇಗೆ ಇರುತಿತ್ತು ನಮ್ಮಗಳ ಸ್ಥಿತಿಗತಿ?,,..

ದಯವಿಟ್ಟು ಎಲ್ಲರೂ ಸ್ವಲ್ಪ ಯೋಚಿಸಿ, ನಿಮ್ಮ ತಂದೆ ತಾಯಿಗೆ ಪ್ರೀತಿಸಿ ಗೌರವಿಸಿ, ಸಂತೈಸಿ ಆರೈಕೆ ಮಾಡಿ ಅವರಿಗೂ ಪ್ರೀತಿ ತೋರಿಸಿ, ದಯವಿಟ್ಟು ಅನಾಥಾಶ್ರಮಕ್ಕೆ ಕಳುಹಿಸಬೇಡಿ.

ನೊಂದ ಜೀವಕ್ಕೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಿಲ್ಲ,, ಏಕೆಂದರೆ ಹೆತ್ತವರ ಆ ಸಮಯದಲ್ಲಿ ಬೇಕಿರುವುದು ಮಕ್ಕಳ ಕಾಳಜಿ ಪ್ರೀತಿ ಮಮತೆಯೇ ಹೊರತು, ಸಾಂತ್ವನದ ಮಾತುಗಳಲ್ಲಾ.

ಮಕ್ಕಳು ತಮ್ಮ ಮನೆಯಲ್ಲೇ ತಮ್ಮ ಹೆತ್ತವರನ್ನು ಇಟ್ಟುಕೊಂಡು ಕೊನೆಯವರೆಗೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು.

ಇದೆ ನನ್ನ ಕಳಕಳಿಯ ಮನವಿ ಇಂದಿನ ಸಮಾಜಕ್ಕೆ,ಯುವ ಜನತೆಗೆ.

ಲೇಖಕಿ " ವಿಶಾಲಾಕ್ಷಿ ಕಾಳೆ"

ತಾ:- ಇಂಡಿ, ಜಿಲ್ಲಾ :-ವಿಜಾಪುರ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456