ನವ ಬಾಲೆಯರ ಭರತನಾಟ್ಯ ರಂಗಪ್ರವೇಶ

May 15, 2025 - 16:26
 0  5
ನವ ಬಾಲೆಯರ ಭರತನಾಟ್ಯ ರಂಗಪ್ರವೇಶ

ಬೆಂಗಳೂರು: ನೆಲಮಂಗಲದ ಕಲಾಗ್ರಣಿ ಪ್ರತಿಷ್ಠಾನದ ಗುರುಗಳಾದ ವಿದುಷಿ ಶ್ರೀಮತಿ ಸೌನಿಯಾ ಪಡುವಾಲ್ ಅವರು ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ಮೇ 14, ಬುಧವಾರ ಸಂಜೆ ತಮ್ಮ ಶಿಷ್ಯೆಯರಾದ ಆರ್. ಚಂದನ, ಆರ್. ಕುಸ್ಮಿತಾ, ಬಿ.ಕೆ. ಕುಸುಮಾ, ವಿ. ಭವಾನಿ, ಕೆ. ದೀಕ್ಷಿತಾ, ಎಂ.ಜಿ. ಯುಕ್ತಿತಾ, ಎಸ್.ಹೆಚ್. ಸ್ರಿಗ್ವಿ, ಜ್ಞಾನವಿ ಪ್ರಸನ್ನ ಮತ್ತು ಎನ್.ಸಿ. ನಮೃತ.  ಈ ಒಂಭತ್ತು ಬಾಲೆಯರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಿದ್ದರು.
ಹಿಮ್ಮೇಳದ ಕಲಾವಿದರು : ವಿದುಷಿ ರಾಧಿಕಾ ಪಡುವಾಲ್ (ಗಾಯನ), ವಿದುಷಿ ಸೋನಿಯಾ ಪಡುವಾಲ್ (ನಾಟ್ಟುವಾಂಗಮ್), ವಿದ್ವಾನ್ ಗಿರಿಧರ್ (ಮೃದಂಗ), ವಿದ್ವಾನ್ ಎನ್.ಆರ್. ಕೃಷ್ಣಭಟ್ (ಕೊಳಲು), ವಿದ್ವಾನ್ ಕಾರ್ತೀಕ್ ವೈಧತ್ರಿ (ರಿದಂ ಪ್ಯಾಡ್), ಮತ್ತು ಮಾ|| ಅಚ್ಯುತ್ ಜಗದೀಶ್ (ವೀಣಾ) ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ವೆಂಕಟೇಶ್ ಬಾಬು (ಪ್ರಭಾತ್ ವಸ್ತ್ರ ವೈಭವ್) ಆಗಮಿಸಿದ್ದರು. ಶ್ರೀಮತಿ ನಾಗಜ್ಯೋತಿ ಹೆಬ್ಬಾರ್ ನಿರೂಪಣೆ ಮಾಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456