ನವೀಕೃತ ನಾಗೇಶ್ ಆಸ್ಪತ್ರೆ ಪ್ರಾರಂಭೋತ್ಸವ

Dec 10, 2025 - 17:37
 0  5
ನವೀಕೃತ ನಾಗೇಶ್ ಆಸ್ಪತ್ರೆ ಪ್ರಾರಂಭೋತ್ಸವ

     ಚನ್ನರಾಯಪಟ್ಟಣದ ನಾಗೇಶ್ ಆಸ್ಪತ್ರೆಯು ನವೀಕೃತಗೊಂಡಿದ್ದು ಇದರ ಪ್ರಾರಂಭೋತ್ಸವ ಭಾನುವಾರ ಜರುಗಿತು. ನೂತನ ನವೀಕೃತ ಆಸ್ಪತ್ರೆಯನ್ನು ಶಾಸಕರಾದ ಡಾ|| ಸಿ ಎನ್ ಬಾಲಕೃಷ್ಣರವರು  ಉದ್ಘಾಟಿಸಿ ಮಾತನಾಡಿ ಗ್ರಾಮಾಂತರ ರೋಗಿಗಳ ತುರ್ತು ಚಿಕಿತ್ಸೆಗೆ ಇದೊಂದು ವರದಾನವಾಗಲಿದೆ ಎಂದು ಪ್ರಶಂಸಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಎಂ ಎ ಗೋಪಾಲಸ್ವಾಮಿ ಅವರು ತೀವ್ರನಿಘಾ ಘಟಕವನ್ನು ಉದ್ಘಾಟಿಸಿ ಮಾತನಾಡಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನಾಗೇಶ್ ಆಸ್ಪತ್ರೆ ಹಲವಾರು ನೂತನ ಸೌಲಭ್ಯಗಳೊಂದಿಗೆ ಸುಸಜ್ಜಿತಗೊಂಡಿರುವುದು ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ತುಂಬಾ ಉಪಯುಕ್ತವಾಗಲಿದೆ ಎಂದರು .

ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ನೂತನ ಮ್ಯಾಡ್ಯುಲಾರ್ (Modular OT) ಆಪರೇಷನ್ ಥಿಯೇಟರ್ ಅನ್ನು ಮಾಜಿ ಶಾಸಕರಾದ ಶ್ರೀ. ಸಿ ಎಸ್ ಪುಟ್ಟೇಗೌಡರು ಉದ್ಘಾಟಿಸಿ ಶುಭಾಶಯಗಳನ್ನು ಕೋರಿದರು.
ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ|| ಕೆ ನಾಗೇಶ್ ಮಾತನಾಡಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾಗೇಶ್ ಆಸ್ಪತ್ರೆಯನ್ನು ನವೀಕೃತಗೊಳಿಸಿ ಮೇಲ್ದರ್ಜೆಗೇರಿಸಿದ್ದು  ನೂತನ ಜೀವ ರಕ್ಷಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು,  ಅತ್ಯಾಧುನಿಕ ಸೌಲಭ್ಯವಿರುವ ಮ್ಯಾಡ್ಯುಲಾರ್ ಆಪರೇಷನ್ ಥಿಯೇಟರ್ ಅನ್ನು ನಿರ್ಮಿಸಲಾಗಿದ್ದು ರೋಗಿಗಳ ಚಿಕಿತ್ಸೆಗೆ ಒಂದು ಹೊಸ ಆಯಾಮ ನೀಡಲಾಗಿದೆ ಎಂದು ಹೇಳಿದರು, ಸುಸಜ್ಜಿತ ಹೈಟೆಕ್ ಲ್ಯಾಬೋರೇಟರಿ, TMT, ಅತ್ಯಧುನಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಿಜಿಟಲ್ ಎಕ್ಸರೇ, ತುರ್ತು ಚಿಕಿತ್ಸಾ ಘಟಕ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಡಿವೈಎಸ್ಪಿ ಕುಮಾರ್, ತಹಶೀಲ್ದಾರ್ ಶಂಕರಪ್ಪ, ಚಂದ್ರಶೇಖರ್ ಗುರೂಜಿ,  ಮುಖಂಡರಾದ ಶಂಕರ್, ಅಣತಿ ಆನಂದ್, ಅನಿಲ್ ಮರಗೂರು,  ಶಶಿಧರ್, ಪರಮ ದೇವರಾಜೇಗೌಡರು, ಹಡೆನಹಳ್ಳಿ ಲೋಕೇಶ್, ಸಿ ಎನ್ ಅಶೋಕ್, ರಾಜಕುಮಾರ್, ಆನಂದ್ ಕಾಳೆನಹಳ್ಳಿ, ಚಂದ್ರು ಕಾಳೇನಹಳ್ಳಿ, ಹೊನ್ನ ಶೆಟ್ಟಿ ಹಳ್ಳಿ ಗಿರಿರಾಜ್, ಮೇಟಿಕೆರೆ ಹಿರಿಯಣ್ಣ,  ಪಾಲ್ಗೊಂಡು ಶುಭ ಹಾರೈಸಿದರು.
ಡಾ|| ಹನೀಫ್ ಸಾಬ್, ಡಾ||ವಿಶ್ವೇಶ್ವರಯ್ಯ, ಡಾ|| ಸಿ ಆರ್ ರಮೇಶ್ ಮತ್ತು ಅನೇಕ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ  ಡಾ||. ಭಾರತಿ ನಾಗೇಶ್, ಕೇಶವ ಮೂರ್ತಿ  ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456