ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಶ್ರೀನಿವಾಸರೆಡ್ಡಿ-ಪ್ರಥಮ ಬಾರಿಗೆ ಉಪಾಧ್ಯಕ್ಷರಾಗಿ ಎಸ್.ಟಿ.ಡಿ. ಮೂರ್ತಿ ಆಯ್ಕೆ
ಬಾಗೇಪಲ್ಲಿ: ತಾಲೂಕು ಸಹಕಾರಿ ಕೃಷಿ ಮತ್ತು ಅಭಿವೃದ್ಧಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ನಡೆದ ಚುನಾವಣೆಯಲ್ಲಿ ನಾಲ್ಕನೇ ಬಾರಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಪಟ್ಟಣದ ಸಹಕಾರಿ ಬ್ಯಾಂಕ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ ನನ್ನನ್ನು ನಮ್ಮ ಶಾಸಕರು ಹಾಗೂ ನಮ್ಮ ನಿರ್ದೇಶಕರು ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ, ಅವರಿಗೆ ಮೊದಲಿಗೆ ಅಭಿನಂದನೆಗಳನ್ನು ತಿಳಿಸುತ್ತೆನೆ ನಾನು ಬ್ಯಾಂಕಿನ ಅಭಿವೃದ್ಧಿಗಾಗಿ ಹಾಗೂ ರೈತರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸುವ ಕೆಲಸ ಮಾಡುತ್ತೇನೆ ಮುಖ್ಯವಾಗಿ ಉಪಾಧ್ಯಕ್ಷರು ಹಾಗೂ ನಿರ್ದೇಶಕ ಅಧಿಕಾರಿಗಳ ಸಹಕಾರದಿಂದ ಬ್ಯಾಂಕನ್ನು ಅಭಿವೃದ್ಧಿ ಪಥದತ್ತ ಕೊಂಡಯುತ್ತೇನೆ ಎಂದು ಹೇಳಿದರು.
ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಚುನಾವಣೆಯಲ್ಲಿ ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ ಎ. ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ) ಮಾತನಾಡಿ ನಾನು ಪ್ರಥಮ ಬಾರಿಗೆ ನಿರ್ದೇಶಕನಾಗಿ ಈಗ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ನನಗೆ ಸಹಕರಿಸಿದ ಶಾಸಕ ಎಸ್. ಏನ್. ಸುಬ್ಬಾರೆಡ್ಡಿ ಅವರಿಗೆ ಹಾಗೂ ನಿರ್ದೇಶಿಕರಿಗೆ ಅಭಿನಂದನೆಗಳನ್ನ ಈ ಮೂಲಕ ತಿಳಿಸುತ್ತೇನೆ, ಎಂದ ಅವರು ಬ್ಯಾಂಕು ಹಾಗೂ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಈ ಮೂಲಕ ತಿಳಿಸುತ್ತೇನೆ ಎಂದರು.
ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ನಡೆದ ಚುನಾವಣೆಗೆ ರಿಟರ್ನಿಂಗ್ ಅಧಿಕಾರಿಯಾಗಿ ಅಧಿಕಾರಿಯಾಗಿ ವ್ಯವಹರಿಸಿದ ಪ್ರೇಮ್ ಕುಮಾರ್ ಮಾತನಾಡಿ ಶ್ರೀನಿವಾಸ್ ರೆಡ್ಡಿ. ಬಾಗೇಪಲ್ಲಿ. ಅಧ್ಯಕ್ಷರಾಗಿ ನರಸಿಂಹಮೂರ್ತಿ. ಬಾಗೇಪಲ್ಲಿ. ಉಪಾಧ್ಯಕ್ಷರಾಗಿ ನಿರ್ದೇಶಕರಾಗಿ . ಪ್ರಭಾಕರ್ ರೆಡ್ಡಿ. ಕೊತ್ತುಕೋಟ. ನಾರಾಯಣ ರೆಡ್ಡಿ ಬಿ. ದೇವರ ಗುಡಿಪಲ್ಲಿ ವೆಂಕಟರಮಣಪ್ಪ .ಎಲ್ ನಾಗರತ್ನಮ್ಮ ಗುಳೂರು. ವೆಂಕಟಲಕ್ಷ್ಮಮ್ಮ. ಪಾತಪಾಳ್ಯ ನಂಜುಂಡಪ್ಪ. ಬಿಳ್ಳೂರು ಸರ್ಕಾರದ ನಾಮನಿ ದರ್ಶಿಕರಾಗಿ ದೇವರ ಗುಡಿಪಲ್ಲಿ ಶಿವರಾಂ ರೆಡ್ಡಿ.ಐದು ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ ಶ್ರೀನಿವಾಸ್ ಮಾಜಿ ಪುರಸಭೆ ಅಧ್ಯಕ್ಷ ನರಸಿಂಹ ನಾಯ್ಡು ಹಿರಿಯ ವಕೀಲ ನರಸಿಂಹಮೂರ್ತಿ. ಪುರಸಭೆ ಸದಸ್ಯ ಹಿರಿಯ ವಕೀಲ ಎಂ. ನಂಜುಂಡ. ರಂಗಾರೆಡ್ಡಿ. ಎಂ. ಆನಂದ್. ಅಕ್ರಂ ನಾರಾಯಣ ರೆಡ್ಡಿ. ಮಾರ್ಕೆಟ್ ಶಿವಪ್ಪ. ಪಾಯಾಲ ರಂಗಪ್ಪ. ಪುರಸಭೆ ಸದಸ್ಯ ಗಡ್ಡ ರಮೇಶ್. ರಮೇಶ್.ಮಿಲ್ಕ್ ವೀರ, ಗೋವಿಂದರಾಜು ಸೇರಿದಂತೆ ಮತ್ತಿತರರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
