ನಿರಂತರ ಮಳೆಗೆ ನೆಲಕಚ್ಚಿದ ಕ್ಯಾರೆಟ್ ಮತ್ತು ಟೊಮೆಟೊ ಬೆಳೆ-ಕಂಗಳಾದ ರೈತರು
ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಸತತವಾಗಿ 3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ತಾಲ್ಲೂಕಿನ ಕಮ್ಮರವಾರಿಪಲ್ಲಿ ಗ್ರಾಮದ ರೈತ ಮಹಿಳೆ ಕೆ.ಎನ್.ಈಶ್ವರಮ್ಮ, ರೈತ ಗೋವಿಂದಪ್ಪ ಬೆಳೆದ ಟೊಮೆಟೊ ಹಾಗೂ ಕ್ಯಾರೆಟ್ ಬೆಳೆ ಸಂಪೂರ್ಣ ನೆಲಕಚ್ಚಿದೆ.
ರೈತ ಮಹಿಳೆ ಈಶ್ವರಮ್ಮ, ರೈತ ಗೋವಿಂದಪ್ಪ 2 ಎಕರೆಯಲ್ಲಿ ಕ್ಯಾರೆಟ್ ಹಾಗೂ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಸತತ ಮಳೆಯಿಂದ ಹೊಲ ಗದ್ದೆಗಳಲ್ಲಿ ನೀರು ಸಂಗ್ರಹ ಆಗಿದೆ. ತೇವಾಂಶ ಹೆಚ್ಚಾಗಿ ಕಟಾವು ಹಂತದ ಕ್ಯಾರೆಟ್ ನೆಲಕಚ್ಚಿದೆ. ಟೊಮೆಟೊ ಬೆಳೆಯು ಸಂಪೂರ್ಣವಾಗಿ ನೆಲಕ್ಕೆ ಕುಸಿದಿವೆ.
ಕೈಗೆ ಬಂದದ್ದು ಬಾಯಿಗೆ ಬರದಂತೆ ಎಂಬಾ ಗಾದೆಗೆ ಇದು ಸಾಕ್ಷಿಯಾಗಿದೆ ಆಗಿದೆ ಎಂದು ಪಿ.ಎನ್.ಈಶ್ವರಮ್ಮ ಪ್ರತಿಕ್ರಿಯಿಸಿದರು.
ಕಳೆದ ವರ್ಷದಿಂದ ಮಳೆ ಪ್ರಮಾಣ ಜತಾಲೂಕಿನಲ್ಲಿ ಹೆಚ್ಚಾಗಿದ್ದು, ಇತ್ತೀಚೆಗೆ ಸುರಿವ ಮಳೆಯಿಂದಾಗಿ ರೈತರು ತಾವು ಬೆಳೆದ ತೋಟಗಾರಿಕೆ ಬೆಳೆಗಳು ನೀರು ಪಾಲಾಗಿ ನಷ್ಟಕ್ಕೀಡಾಗಿದ್ದಾರೆ. ಉತ್ತಮ ಮಳೆಯಿಂದಾಗಿ ಕೆರೆಕುಂಟೆಗಳು ತುಂಬಿವೆ. ಸಾಲು,ಸಾಲು ಹಬ್ಬಗಳಿಂದ ಹೂ ಬೆಳೆದ ರೈತರು, ಹೆಚ್ಚು ಬೆಲೆ ಬರುತ್ತದೆ ಎಂಬ ಅಪೇಕ್ಷೆಯಲ್ಲಿದ್ದ ರೈತರಿಗೆ ನಿರಾಶೆ ಉಂಟುಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತರಕಾರಿ ಮತ್ತು ಹೂ ಬೆಳೆಗಳಿಗೆ ಸಾಲ ಮಾಡಿ ಬೆಳೆಯಲಾಗಿತ್ತು. ಮಳೆರಾಯನ ಆರ್ಭಟದಿಂದ ಫಸಲು ಬಂದರೂ ಸಹ ಬೆಳೆ ಬೆಳೆದ ರೈತರು ನಷ್ಟ ಅನುಭವಿಸುವ ಪರಸ್ಥಿತಿ ನಿರ್ಮಾಣವಾಗಿದೆ.
ಈ ಸಂಧರ್ಭದಲ್ಲಿ ಕಾಮರೋಪಲ್ಲಿ ರೈತರಾದ ಎಸ್. ವೆಂಕಟರಾಮಪ್ಪ, ಈಶ್ವರಮ್ಮ, ಕೆ. ನಂಜುಂಡಪ್ಪ, ಗೋವಿಂದಪ್ಪ, ಶ್ರೀನಿವಾಸ್, ಎ.ನಂಜುಂಡಪ್ಪ, ಕದಿರಪ್ಪ, ಅಶ್ವಥಮ್ಮ, ಆನಂದಮ್ಮ, ಗಂಗಾಧರ್,ಕೆ. ಎನ್.ರತ್ನಮ್ಮ, ನರಸಿಂಹಪ್ಪ ಸೇರಿದಂತೆ ಮತ್ತಿತರರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
