ಪರೇಸಪಲ್ಲಿ ಗ್ರಾಮದ ಸರ್ವೇ ನಂ 44 ಜಮೀನು ವಿವಾದ ಒತ್ತುವರಿ ಆರೋಪ ಸತ್ಯಕ್ಕೆ ದೂರ: ಕೆಬಿ ದೇವರಾಜ್ ಸ್ಪಷ್ಟನೆ
ಬೇತಮಂಗಲ: ಹೋಬಳಿಯ ಇಲ್ಲಿಗೆ ಸಮೀಪದ ಪರೇಸೆಪಲ್ಲಿ ಗ್ರಾಮದ ಸರ್ವೇ ನಂ 43/3 ರ ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಇತ್ತೀಚಿಗೆ ಸುಳ್ಳು ಸುದ್ದಿ ಪ್ರಕಟಣೆಗೊಂಡಿದ್ದು ಒತ್ತುವರಿ ಆರೋಪ ಸತ್ಯಕ್ಕೆ ದೂರ ಎಂದು ಭೀಮಾ ರಾಜ್ಯ ಸಮಿತಿ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಕೆಬಿ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ,
ಗ್ರಾಮದ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು, ಪರಸೆಪಲ್ಲಿ ಗ್ರಾಮವು ಜೋಡಿ ಗ್ರಾಮವಾಗಿದ್ದು ಸರ್ವೇ ನಂ 43/3 ಜಮೀನು ಚಿನ್ನಪ್ಪ ರವರ ಜಮೀನಾಗಿರುತ್ತದೆ ಇದು ಪೋಡಿಯಾಗಿ 44 ಕ್ಕೆ ಬದಲಾವಣೆಯಾಗಿ ಚಿನ್ನಪ್ಪ ರವರ ಕುಟುಂಬಸ್ಥರಾದ ಜಯಮ್ಮ ಹೆಸರಿಗೆ ಖಾತೆಯಾಗಿರುತ್ತದೆ ನಂತರ ಎಸ್ ರಾಜೇಂದ್ರನ್ ಅವರು ಖರೀದಿ ಮಾಡಿ ಖಾತೆಯಾಗಿದ್ದು ದಾಖಲೆಗಳನ್ನು ಪರಿಶೀಲಿಸಿ ಕಾನೂನು ಬದ್ದವಾಗಿ ನಮ್ಮ ಸಹೋದರ ಪ್ರದೀಪ್ ಎಂಬುವವರು ಜಮೀನನ್ನು ಖರೀದಿ ಮಾಡಿರುತ್ತಾರೆ, ಎಂದು ಸ್ಪಷ್ಟನೆ ನೀಡಿದರು.
ಕೆಲವರು ಇದು ಸರ್ಕಾರಿ ಜಮೀನಾಗಿರುತ್ತದೆ ಮತ್ತು ಭೂ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ವಾಹಿನಿಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡಿ ಅಧಿಕಾರಿಗಳಿಗೆ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಿರುತ್ತಾರೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಇದೇ ರೀತಿ ಮುಂದುವರೆದರೆ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮಾ ರಾಜ್ಯ ಸಮಿತಿ ಕರ್ನಾಟಕ ಅಧ್ಯಕ್ಷ ಕೆಬಿ ದೇವರಾಜ್ ಪಿಚಳ್ಳಿ ಮಂಜುನಾಥ್, ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
