ಪೌರ ಸೇವಾ ನೌಕರರ ವಿವಿಧ  ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟವಾದಿ ಮುಷ್ಕರ

Jun 2, 2025 - 13:40
 0  5
ಪೌರ ಸೇವಾ ನೌಕರರ ವಿವಿಧ  ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟವಾದಿ ಮುಷ್ಕರ

ಕೆಜಿಎಫ್: ಪೌರ ಸೇವಾ ನೌಕರರ ವಿವಿಧ ರೀತಿಯ ಬೇಡಿಕೆಗಳನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ರಾಜ್ಯಾದ್ಯಂತ ಅನಿರ್ದಿಷ್ಟವಾಗಿ ಮುಷ್ಕರ ಹಮ್ಮಿಕೊಂಡಿದ್ದು, ರಾಜ್ಯ ಸಂಘದ ಆದೇಶದ ಮೇರೆಗೆ ನಗರಸಭೆ ಮುಂಭಾಗದಲ್ಲಿ ಕೆಜಿಎಫ್ ಶಾಖೆ ವತಿಯಿಂದ ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟ ಅವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರಾಮ ತಿಳಿಸಿದರು. ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಮೇ 30 ರಿಂದ ಅನಿರ್ದಿಷ್ಟ ಅವಧಿ ಮುಷ್ಕರನ್ನು ಕೆಜಿಎಫ್ ನಗರಸಭೆ ಆವರಣದಲ್ಲಿ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಪೌರ ಸೇವ ನೌಕರರ ಸೇವಾ ಸಂಘ ಸರ್ಕಾರದ ಆದೇಶದಂತೆ ಮಾನ್ಯತೆ ಪಡೆದ ಸಂಘವಾಗಿದ್ದು, ಮಾನ್ಯತೆ ಪಡೆದ ಇದುವರೆಗೂ ಸಂಘವು ಯಾವುದೇ ಮುಷ್ಕರಗಳನ್ನು ಕೈಗೊಳ್ಳದೆ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿ ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಾ ಸಂಘವು ಸಕ್ರಿಯವಾಗಿರುತ್ತದೆ. ಕರ್ನಾಟಕ ರಾಜ್ಯ ಪೌರ ಸೇವ ನೌಕರರ ಹಲವಾರು ಹೇಳಿಕೆಗಳು ಸುಮಾರು ದಶಕಗಳಿಂದ  ಬಾಕಿ ಉಳಿದಿದ್ದ, ಸದರಿ ಬೇಡಿಕೆಗಳನ್ನು ಈವರೆಗೂ ಈಡೇರಿಸಿರುವುದಿಲ್ಲ ಈ ಕುರಿತಂತೆ ಸರಕಾರ ಕೆಲವು ಬಾರಿ ಮನವಿಗಳನ್ನು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದುರು. ಏಪ್ರಿಲ್ 12ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ಪೌರ ಸೇವಾ ನೌಕರರ ಬೇಡಿಕೆಗಳ ಬಗ್ಗೆ 1 ತಿಂಗಳ ಮುಷ್ಕರ ನೋಟಿಸ್ ಅನ್ನು ಸರ್ಕಾರಕ್ಕೆ ನೋಟಿಸ್ ಅನ್ನು ಸರ್ಕಾರಕ್ಕೆ ಸಲ್ಲಿಸಲು ಸದರಿ ಅವಧಿ ಒಳಗೆ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ. ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಲಾಗಿರುತ್ತದೆ. ಈಗಾಗಲೇ ಮುಷ್ಕರ ನೋಟಿಸ್ ಅನ್ನು ಸಹ ನೀಡಿದ್ದು, ಒಂದು ತಿಂಗಳ ಅವಧಿ ಮುಗಿದಿರುತ್ತದೆ. ಆದರೆ ಈವರೆಗೂ ಸಂಘದ ಪದಾಧಿಕಾರಿಗಳ ಸಭೆ ಕರೆಯದೆ ಬೇಡಿಕೆಗಳನ್ನು ಈಡೇರಿಸದೆಇರುವುದರಿಂದ ಮೇ 30 ರಿಂದ ರಾಜ್ಯದ್ಯಂತ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಲಾಗಿದೆ. ಜೂನ್ 2 ರಿಂದ ನೀರು ಸರಬರಾಜು ಸ್ಥಗಿತ ಗೊಳಿಸಿ ಮುಷ್ಕರ ಕೈಗೊಳ್ಳಲು ಮುಂದಿನ ರಾಜ್ಯ ಸಂಘದಿಂದ ಸಂದೇಶ ಬರುವವರೆಗೂ ಮುಷ್ಕರವನ್ನು ನಡೆಸುವ ಬಗ್ಗೆ ತೀರ್ಮಾನಿಸಿರುವದರಿಂದ ಕೆಜಿಎಫ್ ನಗರಸಭೆಗೆ ಸಂಬಂಧಿಸಿದಂತೆ ಬೇಡಿಕೆಗಳು ಈಡೇರಿಸುವಂತೆ ನಿರ್ದಿಷ್ಟ ಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು ರಾಜ. ನಗರಸಭೆ ಅಧಿಕಾರಿ ಶಶಿಕುಮಾರ್ . ಜಯರಾಮ್. ಮಂಗಳ ಗೌರಿ. ಕಾರ್ಮಿಕ ಸಂಘದ ಸದಸ್ಯರು ಮೂರ್ತಿ. ರಘು. ಪೌರಕಾರ್ಮಿಕರು ಮೊದಲಾದವರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456