ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಿ ಫುಟ್ಬಾಲ್ ಕೋಚ್ : ವಿಮಲ್
ಕೆಜಿಎಫ್: ನಗರದ ಐ ಗ್ರೌಂಡ್ ನಲ್ಲಿ ಫುಟ್ಬಾಲ್ ಟರ್ನ್ ಮೆಂಟ್ ಬೇಸಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫುಟ್ಬಾಲ್ ಕೋಚ್. ವಿಮಲ್. ಮಕ್ಕಳು ರಜಾ ದಿನದಲ್ಲಿ ಮನೆಯಲ್ಲಿ ಇರುತ್ತಾರೆ. ಅವರಲ್ಲಿ ಕ್ರೀಡಾ ಮನೋಭಾವ ಬೆಳೆಯಬೇಕು. ಕ್ರೀಡೆಯಲ್ಲಿ ಭಾಗವಹಿಸಿದರೆ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತದೆ. ಮನಸ್ಸು ಉಲ್ಲಾಸಭರಿತವಾಗಿರುತ್ತದೆ. ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ಕ್ರೀಡೆಯಲ್ಲಿಯೂ ಸಾಧ್ಯವಾದಷ್ಟು ಸಮಯವನ್ನು ಕಳೆಯುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ನಿವೃತ್ತ ಯೋಧ ವಿ. ಪ್ರಕಾಶ್ ಮಾತನಾಡಿ ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚು ಸಮಯವನ್ನು ಟಿವಿ ಹಾಗೂ ಮೊಬೈಲ್ ವ್ಯಾಮೋಹದಲ್ಲೇ ಕಾಲ ಕಳೆಯುತ್ತಿರುವುದು ಇದರಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಒಳ್ಳೆಯ ವಿದ್ಯಾವಂತರಾಗಿ. ಒಳ್ಳೆಯವರ ಸಹವಾಸ ಮಾಡಿ. ತಮ್ಮ ಕುಟುಂಬದೊಂದಿಗೆ. ಚರ್ಚಿಸಿ ತಂದೆ ತಾಯಿಯವರ ಜೀವನವನ್ನು ಅರ್ಥೈಸಿಕೊಳ್ಳುವಿಕೆ. ಆಗ ತಮ್ಮ ಜೀವನವನ್ನು ಯಾವ ರೀತಿ ಮುಂದುವರಿಸಬೇಕೆಂದು ಮನವರಿಕೆ ಆಗುತ್ತದೆ. ದೇಶದ ಬಗ್ಗೆ ಪ್ರೇಮವನ್ನು ಬೆಳೆಸಿಕೊಳ್ಳಿ. ಸೇನೆಗೆ ಸೇರುವ ಮನೋಭಾವ ಬೆಳೆಸಿಕೊಳ್ಳಿ ಸ್ವಚ್ಛತೆ ಬಗ್ಗೆ ಗಮನಹರಿಸಿ. ಇದನ್ನ ಎಲ್ಲಾ ನಾವು ಮಾಡಿದಾಗ ದೇಶದಲ್ಲಿ ಉತ್ತಮ ಪ್ರಜೆಯಾಗಿ ಆಗಲು ಸಾಧ್ಯ ಎಂದರು. ಸಮಾಜ ಸೇವಕರು. ರಂಜಿತ್ ಮಾತನಾಡಿ. ಈಗಿನ ಮಕ್ಕಳು ಮುಂದಿನ ದೇಶದ ಪ್ರಜೆಗಳು. ಮಕ್ಕಳ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆ ಅತಿ ಮುಖ್ಯ ಇಂತಹ ಟರ್ನಮೆಂಟ್ಗಳಲ್ಲಿ ಭಾಗವಹಿಸಿ ಒಳ್ಳೆಯ ಕ್ರೀಡಾಪಟು ಆಗಿ ಬೆಳೆಯಬೇಕು ಎಂದರು ಕರೆ ನೀಡಿದರು. ನಗರಸಭೆ ಸದಸ್ಯ ಮಣಿಕಂಠಣ್ ಮಾತನಾಡಿ ನಾನು ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತನೆ. ಆದರಿಂದ ಇಲ್ಲಿ ನಾವು ಕ್ರೀಡಾಂಗವನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಈಗಾಗಲೇ ಶಾಶ್ವತವಾಗಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಲೈಟ್ಗಳನ್ನು ಅಳವಡಿಸಿಕೊಂಡು. ಹೊನಲು ಬೆಳಕಿನ ಫುಟ್ಬಾಲ್ ಆಟವನ್ನು ಆಡಲು ಅವಕಾಶ ಕಲ್ಪಿಸಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತರಾದ ಮಕ್ಕಳಿಗೆ ಪ್ರಶಂಸೆ ಪತ್ರ ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಮುಖಂಡರು ಭಾಗವಹಿಸಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
