1)ಬಂಗಾರಪೇಟೆ ಪೊಲೀಸ್ ಠಾಣೆ 227/2025 ಕಲಂ 331(4), 305 ಬಿ.ಎನ್.ಎಸ್
2025 ಆಗಸ್ಟ್ 4 ರಂದು ಬಂಗಾರಪೇಟೆಯಲ್ಲಿ ಜ್ಯೂವೆಲ್ಲರಿ ಶಾಪ್ ಮಾಲೀಕ ಕೆ.ಎಂ ಸುನೀಲ್ ಕುಮಾರ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಮನೆಯೊಳಗಿದ್ದ 1,355 ಗ್ರಾಂ ಬಂಗಾರದ ಆಭರಣಗಳು ರೂ.95,000/- ನಗದು ಹಣ ಒಟ್ಟು ರೂ.1,22,90,000/- ಮೌಲ್ಯದ ಚಿನ್ನದ ಆಭರಣಗಳು ಮತ್ತು ಹಣ ಕಳವಾಗಿರುವ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಮೊ.ಸಂ 227/2025 ಕಲಂ 331(4), 305 ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿತ್ತು.
ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಬಂಗಾರಪೇಟೆ ಇನ್ಸ್ಪೆಕ್ಟರ್ ದಯಾನಂದ್.ಆರ್ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಿದ್ದು, ವಿಶೇಷ ಕಾರ್ಯಚರಣೆ ನಡೆಸಿದ ಅಪರಾಧ ಪತ್ತೆ ತಂಡದವರು ಆರೋಪಿಯಾದ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ, ಕೊರಟಿಪಾಡು, ಚೈತನ್ಯ ಪುರದ ವಾಸಿ ರಾಯಪಾಟಿ ವೆಂಕಯ್ಯ @ ವೆಂಕನ್ನ, 49 ವರ್ಷ ಎಂಬಾತನು ಕಳವು ಮಾಡಿರುವುದಾಗಿ ಈತನು ಈಗಾಗಲೇ ಪಲಮನೇರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ದಸ್ತಗಿರಿಯಾಗಿ ಚಿತ್ತೂರು ಜೈಲಿನಲ್ಲಿ ಇರುವುದಾಗಿ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಚಿತ್ತೂರು ಜೈಲಿನಲ್ಲಿದ್ದ ಆರೋಪಿಯನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಆರೋಪಿಯು ಕಳವು ಮಾಲು ಮಾರಾಟ ಮಾಡಿರುವ ವ್ಯಕ್ತಿಗಳನ್ನು ತೋರಿಸಿದ್ದು ಕಳವು ಆಭರಣಗಳನ್ನು ತೆಗೆದುಕೊಂಡಿದ್ದ ಆಂದ್ರಪ್ರದೇಶದ ಗುಂಟೂರು ವ್ಯಕ್ತಿಗಳಿಂದ ಕೃತ್ಯಕ್ಕೆ ಸಂಬAದಿಸಿದ ರೂ.1,05,48,000/- ಮೌಲ್ಯದ 879 ಗ್ರಾಂ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯ ವಿರುದ್ದ ಕಾನೂನು ಕ್ರಮ ವಹಿಸಿರುತ್ತಾರೆ.
ಡಿ.ವೈ.ಎಸ್.ಪಿ ವಿ.ಲಕ್ಷö್ಮಯ್ಯ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ದಯಾನಂದ್.ಆರ್ ಮತ್ತು ಸಿಬ್ಬಂದಿಯವರಾದ ವಿಜಯ್ ಕುಮಾರ್, ವೇಣುಗೋಪಾಲ್, ಗಜೇಂದ್ರ, ಮಂಜುನಾಥ್, ಶ್ರೀನಿವಾಸ, ಮುನೇಂದ್ರ, ಸುನೀಲ್, ವಿನೋದ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು ತಂಡವನ್ನು ಶಿವಾಂಶು ರಜಪೂತ್, ಪೊಲೀಸ್ ವರಿಷ್ಠಾಧಿಕಾರಿಗಳು, ಕೆ.ಜಿ.ಎಫ್ ರವರು ಶ್ಲಾಘಿಸಿದ್ದಾರೆ.
2) ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ: 08/2026 ಕಲಂ: 7 ಅಗತ್ಯ ಸರಕುಗಳ ಕಾಯ್ದೆ 1955, ರ/ಜೋ ಕಲಂ: 51, 56, 57, 59 ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006, ಕಲಂ:61,274,275,314,316(2),318(4) ಬಿ.ಎನ್.ಎಸ್
ಆಂಡ್ರಸನ್ಪೇಟೆ ಪೊಲೀಸ್ ಠಾಣೆ ಸರಹದ್ದು, ಬಳ್ಳಗೆರೆ ಗ್ರಾಮದ ಸರ್ವೆ ನಂ.79 ರಲ್ಲಿ ಅಕ್ರಮವಾಗಿ ಕಲಬೆರಕೆ ಹಾಲು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನಾದರಿಸಿ ಆಂಡ್ರಸನ್ಪೇಟೆ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿ ಪ್ರತೀಶ.ಜಿ.ಪಿ ರವರೊಂದಿಗೆ ಜ. 14 ರಂದು ರಾತ್ರಿ 10.30 ಗಂಟೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿ, ಆಂದ್ರ ಪ್ರದೇಶದ ವಾಸಿಗಳಾದ ವೆಂಕಟೇಶಪ್ಪ, ಬಾಲಾಜಿ, ದಿಲೀಪ್, ಬಾಲ್ರಾಜ್ ಮತ್ತು ಮನೋಹರ್ ಹಾಗೂ ಇತರರು ಸೇರಿ ಹಾಲಿನ ಪುಡಿ, ಪಾಮ್ ಆಯಿಲ್ ಮತ್ತು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಯಂತ್ರೋಪಕರಣಗಳ ಸಹಾಯದಿಂದ ಅಕ್ರಮವಾಗಿ ಕಲಬೆರಕೆ ಹಾಲು ತಯಾರಿಸುತ್ತಿರುವುದು ಕಂಡುಬAದಿದ್ದು, ಪರಿಶೀಲನೆಯ ಸಮಯದಲ್ಲಿ
1 ) Nandini WHOLE MILK POWDER, "Prabhat Dairy" "MILKY MIST" ಎಂಬ ಕಂಪನಿಗಳ 25 ಕೆ.ಜಿ ತೂಕದ ಒಟ್ಟು 56 ಮಿಲ್ಕ್ ಪೌಡರ್ ಚೀಲಗಳು,
2) 500 ಗ್ರಾಂ ನಂದಿನಿ ಮೀಲ್ಕ್ ಪೌಡರ್ ನ 350 ಪಾಕೆಟ್,
3) 1 ಕೆ.ಜಿ ತೂಕದ ನಂದಿನಿ ಮೀಲ್ಕ್ ಪೌಡರ್ 40 ಪಾಕೆಟ್,
4) ಅಂಗನವಾಡಿ ಶಾಲೆಗೆ ನೀಡಿರುವ ಪೌಷ್ಠಿಕ ಆಹಾರದ ಪುಷ್ಟಿ 2.5 ಕೆ.ಜಿ ಯ 10 ಪಾಕೆಟ್,
5) ಮಿಲೆಟ್ ಮಿಲ್ಕ್ ಲಡ್ಡು 1.8 ಕೆ.ಜಿ ಯ 12 ಪಾಕೆಟ್ಗಳು,
6) ಬೆಲ್ಲದ ಪುಡಿ 500 ಗ್ರಾಂ ನ 7 ಪಾಕೆಟ್ಗಳು,
7)ARKAAY Gold" ಕಂಪನಿಯ ಪಾಮ್ ಆಯಿಲ್ನ 90 ಬಾಕ್ಸ್ಗಳು(ಒಂದು ಬಾಕ್ಸ್ ನಲ್ಲಿ 800 ಗ್ರಾಂ ನ 10
ಪಾಕೆಟ್ ಗಳು ಇರುತ್ತವೆ)
8) 38 ಲೀಟರ್ ಸಾಮರ್ಥ್ಯ ವಿರುವ 51 ಹಾಲು ತುಂಬಿದ ಕ್ಯಾನ್ಗಳು,
9) 27 ಖಾಲಿ ಕ್ಯಾನ್ಗಳು,
10) ಎರಡು ಮಿಕ್ಸರ್, ನಾಲ್ಕು ಜಾರ್ಗಳು,
11) 4 ಪ್ಲಾಸ್ಟಿಕ್ ಬಕೆಟ್, ಒಂದು ಎಲೆಕ್ಟಿçಕ್ ಮಿಕ್ಸರ್,
12) ಹಾಲಿನ ಕ್ಯಾನ್ಗಳನ್ನು ಸಾಗಿಸಲು ಬಳಸುತ್ತಿದ್ದ "Mahindra Jeeto ಮತ್ತು TATA Ace ಎಂಬ ಎರಡು ಗೂಡ್ಸ್ ವಾಹನಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಬೆಲೆ ರೂ.22,50,000/- ಆಗಿದ್ದು, ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ವಶಪಡಿಸಿಕೊಂಡಿರುವ ವಸ್ತುಗಳ ಮತ್ತು ವಾ
ಡಿ.ವೈ.ಎಸ್.ಪಿ ವಿ.ಲಕ್ಷö್ಮಯ್ಯ ಮತ್ತು ಇನ್ಸ್ಪೆಕ್ಟರ್ಗಳಾದ ಪಿ.ಎಂ.ನವೀನ್ ಮತ್ತು ಮಾರ್ಕೊಂಡ್ಯö.ಎಸ್.ಟಿ ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ, ಹಾಲು ಕಲಬೆರೆಕೆಗೆ ಉಪಯೋಗಿಸುವ ವಸ್ತುಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪಿ.ಎಸ್.ಐ ರವರಾದ ಮಂಜುನಾಥ.ಬಿ, , ಅಣ್ಣಪ್ಪ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ರಾಜೇಂದ್ರ, ವೇಣುಗೋಪಾಲ್, ಲೊಕೇಶ್, ಗೋಪಿ, ರಮೆಶ್ ಈರಪ್ಪ ಜಂಬಗಿ, ರವಿಕುಮಾರ್, ಮನೋಹರ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು ತಂಡವನ್ನು ಶಿವಾಂಶು ರಜಪೂತ್, ಪೊಲೀಸ್ ವರಿಷ್ಠಾಧಿಕಾರಿಗಳು, ಕೆ.ಜಿ.ಎಫ್ ರವರು ಶ್ಲಾಘಿಸಿದ್ದಾರೆ.
3) ರೌಡಿ ಚಟುವಟಿಕೆಗಳು ಮಾಡುವವರ ವಿರುದ್ದ ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜಾರಿ.
ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸುವವರ ವಿರುದ್ದ ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು ಈಗಾಗಲೇ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 05 ರೌಡಿ ಆಸಾಮಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳ ಕೇಂದ್ರ ಕಾರಗೃಹದಲ್ಲಿ ಬಿಟ್ಟಿದ್ದು, 19 ರೌಡಿ ಆಸಾಮಿಗಳನ್ನು ಗಡಿಪಾರು (Externment) ಮಾಡಿರುತ್ತೇವೆ. ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ 02 ರೌಡಿ ಪೆರೆಡ್ ಮಾಡಿದ್ದು, ಬಂಗಾರಪೇಟೆ ರಾಬರ್ಟ್ಸನ್ಪೇಟೆ, ಉರಿಗಾಂ ಮತ್ತು ಆಂಡ್ರಸನ್ಪೇಟೆ ಸರಹದ್ದಿನಲ್ಲಿ ಸಂಜೆ ವೆಳೆಯಲ್ಲಿ ಏರಿಯಾ ಡಾಮಿನೆಷನ್ ಮಾಡಿ ರೌಡಿ ಆಸಾಮಿಗಳ ಮನೆಗಳನ್ನು ಶೋಧ ಮಾಡುತ್ತಿದ್ದು ಕಾನೂನು ಉಲ್ಲಂಘನೆ ಮಾಡುವವರ ವಿರದ್ದು ಕಠಿಣ ಕ್ರಮ ಜರುಗಿಸಲಾಗುವುದು.