ಮಹಿಳಾ ಹಾಗೂ  ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನ ಅಂತರಾಷ್ಟ್ರೀಯ ದಿನಾಚರಣೆ ಆಚರಣೆ

Nov 25, 2025 - 17:26
 0  8
ಮಹಿಳಾ ಹಾಗೂ  ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನ ಅಂತರಾಷ್ಟ್ರೀಯ ದಿನಾಚರಣೆ ಆಚರಣೆ

  ಕೆಜಿಎಫ್: ನಗರದ ತಾಲೂಕು ಕಚೇರಿ ಅವರಣದಲ್ಲಿ ತಾಲೂಕು ಕಾನೂನು ಸೇವಗಳ ಸಮಿತಿ ಕೆಜಿಎಫ್ ವತಿಯಿಂದ ಮಹಿಳಾ ಹಾಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ನ್ಯಾಯಾಧೀಶರು. ಎಂ. ವಿನೋದ್ ಕುಮಾರ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ಮಹಿಳೆಯರಿಗೆ ನಮ್ಮ ಭಾರತ ದೇಶದಲ್ಲಿ ವಿಶೇಷವಾದ ಸ್ಥಾನಮಾನ ಇದೆ ಅವರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು.
 ಮಹಿಳೆಯರು ಸ್ವತಂತ್ರವಾಗಿ ಬದುಕಬೇಕು. ಅವರಿಗೆ ಯಾವುದೇ ಒಂದು ಮಾನಸಿಕ ಹಾಗೂ ಲೈಂಗಿಕವಾಗಿ ತೊಂದರೆ ನೀಡಬಾರದು. ಇದಕ್ಕೆ ನಾವು ಏನು ಮಾಡಬೇಕೆಂದರೆ ಯಾವುದೇ ಒಂದು ಮಹಿಳೆಯು ತಾನು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಯಾವುದೇ ಒಂದು ದೌರ್ಜನ್ಯಕ್ಕೆ ಒಳಗಾದರೆ ತಕ್ಷಣ ಆ ವಿಷಯವನ್ನು ಪೊಲೀಸರಿಗೆ ಹಾಗೂ ತಮ್ಮ ಆತ್ಮೀಯರಿಗೆ ತಿಳಿಸಬೇಕು. ಆಗ ಆ ವ್ಯಕ್ತಿಯ  ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

ಕೆಲವು ಪ್ರಕರಣಗಳಲ್ಲಿ ದೌರ್ಜನಕ್ಕೆ ಒಳಗಾದ ಮಹಿಳೆ ತನಗಾದ ಅನ್ಯಾಯವನ್ನು ಬಹಿರಂಗ ಪಡಿಸುವುದಿಲ್ಲ ಈ ರೀತಿ ಮಾಡೋದು ತಪ್ಪು ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಹಲವಾರು ಕಾನೂನುಗಳಿದ್ದು, ಅದನ್ನು ಸದ್ಬಲಿಕೆ ಮಾಡಿಕೊಳ್ಳಬೇಕು. ಎಂದರು.

ನ್ಯಾಯಾಧೀಶರು. ಶಮಿದಾ ಮಾತನಾಡಿ ಇತ್ತೀಚಿಗೆ ಪೋಸ್ಕೊ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಇದಕ್ಕೆ ನಾವು ಕಡಿವಾಣ ಹಾಕಬೇಕು.
18 ವರ್ಷ ತುಂಬಿದೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಅಪರಾಧ ಇಂಥ ಪ್ರಕರಣಗಳು ಬೆಳಕಿಗೆ ಬಂದರೆ ಇದರ ವಿರುದ್ಧ ಮಹಿಳಾ ಸಹಾಯವಾಣಿಗೆ ದೂರು ನೀಡಬಹುದು. ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಇದರ ಬಗ್ಗೆ ಗಮನ ಹರಿಸಬೇಕು. ಮದುವೆಯಾದ ನಂತರ ಮಗು ಜನಿಸಿದ ಮೇಲೆ ಪೋಸ್ಕೋ ಪ್ರಕರಣ ದಾಖಲಿಸಿದರೆ. ಆಗ ಗಂಡ ಆದವರು ಜೈಲು ಸೇರುತ್ತಾರೆ ತಾಯಿ ಮಗ ನೋವು ತಿನ್ನುತ್ತಾರೆ ಇದೆಲ್ಲ ನಡೆಯಬಾರದೆಂದರೆ ಮದುವೆಗೆ ಮೊದಲೇ ನಾವು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಇಂತಹ ಪ್ರಕರಣಗಳನ್ನು ಬರೆದಂಗೆ ತಡೆಯಬೇಕು ಎಂದರು .

ವಕೀಲರ ಸಂಘದ ಅಧ್ಯಕ್ಷರು. ರಾಜಗೋಪಾಲ್ ಗೌಡ ಅವರ ಮಾತನಾಡಿ ಮಹಿಳೆಯರು ಪುರುಷರಿಗಿಂತ ಯಾವುದೇ ಕ್ಷೇತ್ರದಲ್ಲಿ  ಕಮ್ಮಿ ಇಲ್ಲ  ಆದರೂ ಸಹ ಮಹಿಳೆಯ ಮೇಲೆ ದೌರ್ಜನಗಳ ನಡೆಯುತ್ತಲೇ ಇರುತ್ತದೆ. ವರದಕ್ಷಿಣೆ ಕಿರುಕುಲ ಹಾಗೂ ಕೆಲಸದ ಸ್ಥಳಗಳಲ್ಲಿ ನಾನಾ ರೀತಿಯಲ್ಲಿ ದೌರ್ಜನಕ್ಕೆ ಒಳಗಾಗುತ್ತಾರೆ. ಇದನ್ನು ನೀವು ಮೆಟ್ಟಿನಿಂತು ಧೈರ್ಯದಿಂದ ಎದುರಿಸಬೇಕು. ಮಹಿಳೆಯು ಏನು ಬೇಕಾದರೂ ಸಾಧಿಸಬಹುದು ಅದನ್ನು ನೀವು ತಿಳಿದುಕೊಳ್ಳಬೇಕು ಎಂದರು.

ತಹಶೀಲ್ದಾರ್ ಭರತ್. ಹೆಚ್. ಜೆ. ಮಾತನಾಡಿ ಮಹಿಳೆಯರಿಗೆ ಹಲವಾರು ರೀತಿಯಲ್ಲಿ ಅವಕಾಶಗಳಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರಿಗೆ ವಿಶೇಷ ಕಾನೂನುಗಳಿದ್ದು, ಅದನ್ನು ತಿಳಿದುಕೊಳ್ಳಬೇಕು. ತಮಗೆ ಯಾವುದೇ ಸಹಾಯ ಬೇಕಾದರೂ ತಾಲೂಕು ಕಾನೂನು ಸೇವೆಗಳ ಸಮಿತಿಗೆ ದೂರ ನೀಡಿ ತಮ್ಮ ಸಮಸ್ಯೆಗಳನ್ನು ಪರಿಹಾರ  ಮಾಡಿಕೊಳ್ಳಬಹುದು.
ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ನವೀನ್ ರವರು ಮಾತನಾಡಿ ಯಾವುದೇ ಒಂದು ಮಹಿಳೆ ತಮಗೆ ಸಮಸ್ಯೆಗಳಾದಲ್ಲಿ ಅವರು ಪೊಲೀಸ್ ಠಾಣೆಗೆ ಬಂದು ವನಿತಾ ಸಹಾಯವಾಣಿ ಕೇಂದ್ರ ಸಂಪರ್ಕಿಸಿ. ಮಹಿಳಾ ಪೇದೆಯಿಂದ  ನೊಂದ ಮಹಿಳೆ ಕೊಡುವ ದೂರಿನ ಅನ್ವಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಠಾಣೆಯಿಂದ ಸಹ ಕಾಲೇಜುಗಳು ಹಾಗೂ ಕೆಲವು ನಿರ್ಜನ ಪ್ರದೇಶಗಳಲ್ಲಿ ನಮ್ಮ ವಾಹನ ಗಸ್ತುತಿರುಗುತ್ತಿದೆ ಇದನ್ನು ಇನ್ನಷ್ಟು ವಿಸ್ತರಿಸುವುದು ಎಂದರು

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರ ಹಾಗೂ ಆಶಾ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456