ಮೈಸೂರಿನ ಅನಧಿಕೃತ ಪಿಜಿ ಗಳ ವಿರುದ್ಧ ಕ್ರಮ ಕೈಗೊಳ್ಳಲು ತೇಜಸ್ವಿ ಆಗ್ರಹ

May 11, 2025 - 13:39
 0  4
ಮೈಸೂರಿನ ಅನಧಿಕೃತ ಪಿಜಿ ಗಳ ವಿರುದ್ಧ ಕ್ರಮ ಕೈಗೊಳ್ಳಲು ತೇಜಸ್ವಿ ಆಗ್ರಹ

May 10, 2025 ಮೈಸೂರಿನಲ್ಲಿರುವ ಅನಧಿಕೃತ ಪಿಜಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪಿಜಿ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ ವಿಶೇಷವಾಗಿ ಹೊರ ರಾಜ್ಯಗಳಿಂದ ಬರುವವರು ಹೆಚ್ಚಾಗಿ ಪಿಜಿ ಗಳನ್ನು ಬಳಸುತ್ತಿದ್ದಾರೆ.

ಕೆಲವರು ಹಣದ ಆಸೆಗಾಗಿ ನಿಯಮಗಳನ್ನು ಮೀರಿ ಮನೆಗಳನ್ನೆ ಬಾಡಿಗೆಗೆ ಪಡೆದು ಪಿಜಿ ಗಳಾಗಿ ಬದಲಾಯಿಸುತ್ತಾರೆ ಎಂದು ತೇಜಸ್ವಿ ಆರೋಪಿಸಿದ್ದಾರೆ.

ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಪಿಜಿ ಗಳಿಗೆ ನುಗ್ಗಿ ಹತ್ಯೆ ಮತ್ತು ಹಲ್ಲೆ ಯಾಗಿರುವ ಪ್ರಕರಣಗಳಿವೆ.

ನಿಯಮಾನುಸಾರ ಪಿಜಿ ನಡೆಸಬೇಕಾದರೆ ಇರಬೇಕಾದ ರೂಲ್ಸ್ ಗಳೆಂದರೆ ಕಡ್ಡಾಯವಾಗಿ ನಗರ ಪಾಲಿಕೆಯಿಂದ ಪರವಾನಿಗೆ ಪಡೆದಿರಬೇಕು ಮತ್ತು ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿರುಬೇಕು, ಸಿಸಿಟಿವಿ ಅಳವಡಿಕೆ ಕಡ್ಡಾಯ, 90ದಿನಗಳ ಡೇಟಾ ಸಿಗುವ ವ್ಯವಸ್ಥೆ ಇರಬೇಕು, ಕನಿಷ್ಠ ಪಕ್ಷ ಒಬ್ಬ ಸಿಬ್ಬಂದಿಯನ್ನು 24/7 ಸೇವೆಯಲ್ಲಿ ಇಡಬೇಕು, ಅಕ್ಕ ಪಕ್ಕದ ಜನರಿಗೆ ಕಿರಿಕಿರಿ ಯಾಗದಂತೆ ಗಮನಹರಿಸಬೇಕು.

ಕೆಲವು ಲೇಡಿಸ್ ಪಿಜಿ ಗಳಲ್ಲಿ ಹುಡುಗಿಯರ ನೋಡಲು ಹುಗುಗರ ಗುಂಪೇ ಪಿಜಿ ಗಳ ಆಸುಪಾಸಿನಲ್ಲಿ ನಿಂತಿರುತ್ತಾರೆ ಮತ್ತು ಹುಡುಗ ಹುಡುಗಿ ಯರು ಅಲ್ಲೇ ಮಾತನಾಡುತ್ತಾ ನಿಂತಿರುತ್ತಾರೆ ಇದರಿಂದ ಸ್ಥಳೀಯರಿಗೆ ಮುಜುಗರವಾಗುತ್ತದೆ.

ಉದಾಹರಣೆಗೆ ರಾಮಾನುಜ ರಸ್ತೆ, 19 ನೇ ತಿರುವಿನಲ್ಲಿರುವ ಪಿಜಿ ಯಲ್ಲಿ ಅನೇಕ ಹುಡುಗಿಯರು ಕೇರಳ, ತಮಿಳುನಾಡು ಕಡೆಯಿಂದ ಬಂದು ವಾಸವಿದ್ದಾರೆ‌

ಇವರನ್ನು ನೋಡಲು, ಕರೆದು ಕೊಂಡು ಹೋಗಲು ದಿನನಿತ್ಯವೂ ಸಂಜೆ ಹುಡುಗರು ಬರುತ್ತಾರೆ ಲಲ್ಲೇ ಹೊಡೆಯುತ್ತಾ ನಿಂತಿರುತ್ತಾರೆ ಎಂದು ತೇಜಸ್ವಿ ದೂರಿದ್ದಾರೆ.

ಇದರಿಂದ ಆಸುಪಾಸಿನ ನಿವಾಸಿಗಳಿಗೆ ಮುಜುಗರ ಉಂಟಾಗುವುದಲ್ಲದೆ ಕಿರಿಕಿರಿ ಯಾಗುತ್ತಿದೆ.

ಇಂತಹ ಅನೇಕ ಪಿಜಿ ಗಳು ಇರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅನಧಿಕೃತ ಮತ್ತು ನಿಯಮ ಉಲ್ಲಂಘಿಸಿರುವ ಪಿಜಿ ಗಳಿಗೆ ಬೀಗ ಜಡಿದು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456