ಯುವ ಪೀಳಿಗೆ ತಂಬಾಕು ವಸ್ತುಗಳಿಂದ ದೂರ ಇರಬೇಕು: ನ್ಯಾ. ವಿನೋದ್ ಕುಮಾರ್
ಕೆಜಿಎಫ್: ಈಗಿನ ಯುವ ಪೀಳಿಗೆ ತಂಬಾಕು ಹಾಗೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ನಗರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಮತ್ತು ಶ್ರೀ ಮಹಾವೀರ ಜೈನ್ ಕಾಲೇಜ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆಜಿಎಫ್ ಇವರ ಸಹಯೋಗದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದವರು. ಈಗಿನ ಯುವಜನತೆ ತಂಬಾಕು ಮತ್ತು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ದುಃಖಕರ ಸಂಗತಿ. ಇದನ್ನು ನಾವು ತಡೆಗಟ್ಟಬೇಕು. ಆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಬೇಕು. ಮಾದಕ ವಸ್ತುಗಳಾದ. ಗಾಂಜಾ. ಅಫೀಮು. ಇನ್ನು ಇತರ ಮಾದಕ ವಸ್ತುಗಳನ್ನು ತಮ್ಮ ಕಾಲೇಜು ಪಕ್ಕದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ತಕ್ಷಣ ತಾವು ಪೊಲೀಸ್ ಇಲಾಖೆ ತಿಳಿಸಬೇಕು. ತಮ್ಮ ಸ್ನೇಹಿತರು ಕೆಟ್ಟ ಚಟಕ್ಕೆ ಬಲಿಯಾಗಿದ್ದಾರೆ. ಅಂತವರನ್ನು ಮನವೊಲಿಸಿ ಒಳ್ಳೆಯ ಪ್ರಜೆಯಾಗಿ ಮಾಡಬೇಕು. ಎಂದು ಕರೆ ನೀಡಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷರು ರಾಜಗೋಪಾಲ್ ಗೌಡ ಮಾತನಾಡಿ. ತಂಬಾಕು ಹಾಗೂ ಗುಟ್ಕಾ ಅಂತಹ ವಸ್ತುಗಳನ್ನು ಸರ್ಕಾರ ನಿಷೇಧ ಮಾಡಬೇಕು. ಜಾಹೀರಾತು ನೀಡಿದ ಸಾಲದು ಇದು ಶಾಶ್ವತವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರಾಂಶುಪಾಲರು ಕೆ. ನಾರಾಯಣ. ಮಾತನಾಡಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಬೇಕು. ಒಳ್ಳೆಯವರ ಸ್ನೇಹ ಮಾಡಬೇಕು. ತಂಬಾಕು ಮಾದಕ ವಸ್ತುಗಳ ಉತ್ಪನ್ನಗಳಿಗೆ ಬಲಿಯಾಗಬಾರದು ಓದುವ ಕಡೆ ಗಮನಹರಿಸಿ ಒಳ್ಳೆಯ ಪ್ರಜೆ ಆಗಬೇಕೆಂದು ಕರೆ ನೀಡಿದರು. ನಮ್ಮ ಕಾಲೇಜು ವತಿಯಿಂದ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು. ಈ ಸಂದರ್ಭದಲ್ಲಿ ಮಹಾವೀರ ಕಾಲೇಜಿನ ಪ್ರಾಂಶುಪಾಲೆ ರೇಖಾ ಸೇಠಿ ಡಾ. ಸುನಿಲ್ ಕುಮಾರ್. ವಕೀಲ ಮಣಿವಣ್ಣನ್. ಕಲೈ ಸೆಲ್ವಿ. ಉಪನ್ಯಾಸಕರು. ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0
