ರಸ್ತೆ ಸಂಚಾರಕ್ಕೆ ಮುಕ್ತಿಯಾಗದ ಕಾಮಗಾರಿ
ಕೆಜಿಎಫ್: ಎಂಜಿ ಮಾರ್ಕೆಟ್ ತನ್ನದೇ ಆದ ಇತಿಹಾಸ ಹೊಂದಿದ್ದು, ಬ್ರಿಟಿಷರ ಕಾಲದಿಂದಲೂ ಈ ಮಾರುಕಟ್ಟೆ ತನ್ನದೇ ಆದ ಹೆಸರು ಪಡೆದಿದೆ. ನಗರಸಭೆ ವತಿಯಿಂದ ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯಾಗಿ ಮಾಡುವುದಾಗಿ ಭರವಸೆ ನೀಡಿದ್ದು, ಮೂರು ತಿಂಗಳ ಮೊದಲು ಶಾಸಕರು, ರೂಪಕಲಾ ಶಶಿಧರ್. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಚರಂಡಿ ನಿರ್ಮಾಣಕ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಮಾರುಕಟ್ಟೆಗೆ ಹೋಗುವ ಪ್ರಮುಖ ರಸ್ತೆ ಮೇಲೆ ಚರಂಡಿಯ ಮೇಲ್ಭಾಗ ಕಾಂಗ್ರೆಟ್ ಅನ್ನು ಹಾಕಲಾಗಿತ್ತು. ರಸ್ತೆಯ ಸಮಭಾಗಕ್ಕಿಂತ ಎರಡು ಅಡಿ ಎತ್ತರವಾಗಿ ಹಾಕಿದ್ದು, ಮಾರುಕಟ್ಟೆಗೆ ಹೋಗುವ ದಾರಿಯಲ್ಲಿ ಸಾರ್ವಜನಿಕರು ಯಾವುದೇ ಸರಕುಗಳನ್ನು ಟ್ರಾಲಿ ಹಾಗೂ ಗಾಡಿಗಳನ್ನು ಹೋಗುವದಕ್ಕೆ ಆಗದೆ. ಸುತ್ತಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ರಸ್ತೆ ಆಗಿರುವುದರಿಂದ ಕಾಂಗ್ರೆಟ್ ದಿಂಬಕ್ಕೆ ತಾತ್ಕಾಲಿಕವಾಗಿ ಸಮದಟ್ಟು ಮಾಡಿ ಗಾಡಿಗಳನ್ನು ರಸ್ತೆಯಲ್ಲಿ ಸಂಚಾರಿಸಲು ಅನುವು ಮಾಡಿಕೊಟ್ಟರೆ ಒಳ್ಳೆಯದು ಎಂದು ವ್ಯಾಪಾರಸ್ಥರ ಅಳಲು. ಇತ್ತ ಕಡೆ ನಗರಸಭೆ ಸದಸ್ಯರು ನಗರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಶೀಘ್ರವಾಗಿ ರಸ್ತೆ ಹಾಗೂ ಚರಂಡಿಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ನೀಡಬೇಕೆಂದು ಒತ್ತಾಯಿಸಿದರು. ಅದೇ ರೀತಿಯಾಗಿ ಮಟನ್ ಮಾರುಕಟ್ಟೆ. 2 ಎಂಜಿ ಮಾರ್ಕೆಟ್ ನಲ್ಲಿ ನಿರ್ಮಾಣ ದಲ್ಲಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
