ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿದ: ಶಾಸಕ ಎಂ ಆರ್ ಮಂಜುನಾಥ್
ಚಾಮರಾಜನಗರ: ಹನೂರು ಕ್ಷೇತ್ರಾದ್ಯಂತ 67 ಕೋಟಿ ವೆಚ್ಚದಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ ಆರ್ ಮಂಜುನಾಥ್ ಭೂಮಿ ಪೂಜೆ ನೆರೆವೇರಿಸಿದರು.
ತಾಲೋಕಿನ ದೊಡ್ಡಿಂದವಾಡಿ ಗ್ರಾಮದ ಕನಕಗಿರಿ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾಸಕರು ತಾಲೂಕಿನದ್ಯಂತ ಪ್ರವಾಸ ಮಾಡಿ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ಚಿಕ್ಕ ಲ್ಲೂರು ಮುಖ್ಯರಸ್ತೆ ಹಾಗೂ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಎರಡುವರೆ ದಶಕಗಳಿಂದ ಬಂಡಳ್ಳಿ ಮನಗಳ್ಳಿ ಹನೂರು ಪಟ್ಟಣದ ಮುಖ್ಯ ರಸ್ತೆ ಹದಗೆಟ್ಟಿದ್ದು ರಸ್ತೆಯಲ್ಲಿ ಸಂಚಾರಿಸಲು ಈ ಭಾಗದ ಜನರು ಹರಸಾಹಸ ಪಡುತ್ತಿರುವುದರಿಂದ ಈ ಬಾರಿ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಹನೂರು ಪಟ್ಟಣದಿಂದ ನಾಲ್ ರಸ್ತೆ ಮಾರ್ಗವಾಗಿ ರಾಮಪುರ ಸೇರಿದಂತೆ ತಮಿಳುನಾಡಿಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು ಹಾಗಾಗಿ ಈ ರಸ್ತೆಯನ್ನು ಅಂತರ್ ರಾಜ್ಯ ರಸ್ತೆಯನ್ನಾಗಿ ಪರಿವರ್ತನೆ ಮಾಡುವ ಉದ್ದೇಶದಿಂದ ಹೆಚ್ಚಿನ ಅನುದಾನ ನೀಡುವಂತೆ ಸರಕಾರದ ಗಮನಕ್ಕೆ ತಂದು ಸುಸರ್ಜಿತ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆ ನೀಡಲಾಗಿದೆ ಎಂದರು.
ಬಂಡಳ್ಳಿ ರಸ್ತೆ ಅಭಿವೃದ್ಧಿಗೆ ಶಾಸಕರ ಹೆಚ್ಚಿನ ಅನುದಾನ ನೀಡುವ ಮೂಲಕ ಸುಸರ್ಜಿತ ರಸ್ತೆ ನಿರ್ಮಾಣಕ್ಕೆ ಚಲನೆ ನೀಡಲಾಗಿದೆ. ಈ ಈ ಸಂದರ್ಭದಲ್ಲಿ ಶಾಸಕ ಎಂ ಆರ್ ಮಂಜುನಾಥ್ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ದತ್ತೆಶ್ ಕುಮಾರ್, ಮಹದೇವಸ್ವಾಮಿ ಹಾಲು ಉತ್ಪಾದಕರ ನಿರ್ದೇಶಕ, ಜೆಡಿಎಸ್ ಮುಖಂಡ ಜಾವಿದ್ ಅಹಮದ್, ಜೆಸಿಮ್ ಪಾಷ ಮಾಜಿ ಗ್ರಾ ಪಂ ಅಧ್ಯಕ್ಷ, ಸೆಮಿಉಲ್ಲಾ, ಶ್ರೀನಿವಾಸ್ ಚಾರ್, ಬೈರನಾಥ್ ರಾಚಪ್ಪ, ಶಿವನಪ್ಪ, ರವಿಕುಮಾರ್ ಜಿ ಪಂ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
