ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್-ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

Feb 27, 2026 - 23:27
 0  10
ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್-ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ-ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಾಗ್ಯನಗರ: ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ವಿಜಯಿ ಅಭ್ಯರ್ಥಿ ಎಸ್.ಎನ್ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿತ್ತು. ಇದೀಗ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ದೆಹಲಿಯ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಸಿಜೆಐ ಸೂರ್ಯಕಾಂತ್ ಮಹತ್ವದ ತೀರ್ಪು ನೀಡಿದ್ದಾರೆ.

ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಆದೇಶಕ್ಕೆ ತಡೆ ನೀಡಿದ್ದಾರೆ.

ಚುನಾವಣಾ ಅಫಿಡೆವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ಹಾಗೂ ಆಸ್ತಿ ವಿವರ ಮುಚ್ಚಿಟ್ಟಿದ್ದ ಆರೋಪ ಹಿನ್ನೆಲೆ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಎಂದು ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ಜಡ್ಜ್ಮೆಂಟ್ ಪ್ರಶ್ನಿಸಿ ಸುಬ್ಬಾರೆಡ್ಡಿ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ರು. ಇದೀಗ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಸುಪ್ರೀಂ ಕೋರ್ಟ್ ನ ತಡೆಯಾಜ್ಞೆ ಆದೇಶ ಹೊರ ಬೀಳುತ್ತೀದ್ದಂತೆ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅಭಿಮಾನಿಗಳು,ಕಾಂಗ್ರೆಸ್, ಮುಖಂಡರು, ಕಾರ್ಯಕರ್ತರು ಪಟ್ಟಣದ ಶ್ರೀ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ-ಸಿಹಿ ಹಂಚಿ ಸಂಭ್ರಮಿಸಿದ ಅವರು ಮೆರವಣಿಗೆ ಮೂಲಕ ಎಸ್. ಎನ್. ಸುಬ್ಬಾರೆಡ್ಡಿ ಪರ ಜೈ ಕಾರಗಳು ಕೂಗುತ್ತಾ,ಸುಬ್ಬಾರೆಡ್ಡಿ ಗೃಹ ಕಚೇರಿಯಿಂದ ಗೂಳೂರು ವೃತ್ತ,ಹಳೆ ಮೈಸೂರ್ ಬ್ಯಾಂಕ್ ವೃತ್ತದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೂ ಜಯ ಘೋಷಗಳೊಂದಿಗೆ ಮೆರವಣಿಗೆ ಸಾಗಿದರು.

ನಮ್ಮ ಕ್ಷೇತ್ರದ ಜನತೆಯ ಆಶೀರ್ವಾದ, ಭಗವಂತನ ಕೃಪೆಯಿಂದ ಮುಖ್ಯವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಮೇಲೆ ಇರುವ ಕಾನೂನು ನಂಬಿಕೆ ಮತ್ತು ನ್ಯಾಯಕ್ಕೆ ಸಿಕ್ಕ ಜಯ ಇದಾಗಿದ್ದು ಕ್ಷೇತ್ರದ ಜನತೆಗೆ ಇದೊಂದು ಐತಿಹಾಸಿಕ ಹಬ್ಬದ ಸಂಭ್ರಮವಾಗಿದೆ ಎಂದು ಜಿಲಾ ಪಂಚಾಯಿತಿ ಮಾಜಿ ಸದಸ್ಯ ಬೂರಗಮಡಗು ನರಸಿಂಹಪ್ಪ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಕ್ಷೇತ್ರದಲ್ಲಿ ಯಾರೇ ಆಗಿರಲಿ ನಮ್ಮ ಸುಬ್ಬಾರೆಡ್ಡಿ ಬಗ್ಗೆ ದ್ವೇಷ ರಾಜಕಾರಣ ಮಾಡುವುದು, ಅಪಪ್ರಚಾರ ಮಾಡುವುದು, ಸುಳ್ಳು ಆರೋಪಗಳು ಮಾಡುವವರಿಗೆ ಸುಪ್ರೀಮ್ ಕೋರ್ಟ್ ತಡೆಯಾಜ್ಞೆ ಒಂದು ಗುಣಪಾಠ,ಸುಬ್ಬಾರೆಡ್ಡಿ ಅವರನ್ನು ಸೋಲಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಕಾರಣ ಇಷ್ಟೇ ಸುಮಾರು 25 ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಡವರಗಾಗಿ ಅನೇಕ ಸೇವೆಗಳು ಮಾಡುತ್ತಾ ಶಾಸಕರಾಗಿರುವ ಸುಬ್ಬಾರೆಡ್ಡಿ ಎಲ್ಲಿ.? ನ್ಯಾಯಾಲಯದ ದಿಕ್ಕು ತಪ್ಪಿಸಿ ಅಡ್ಡದಾರಿಯಲ್ಲಿ ಬಂದು ಶಾಸಕನಾಗಬೇಕು ಎಂಬ ಹಗಲು ಕನಸು ಕಂಡಿರುವ ನೀನೆಲ್ಲಿ..? ಏನು ಇಂದು ದೆಹಲಿಯ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಸಿಜೆಐ ಸೂರ್ಯಕಾಂತ್ ಮಹತ್ವದ ತೀರ್ಪು ನೀಡಿ ತಡೆಯಾಜ್ಞೆ ನೀಡಿರುವುದು ನಮ್ಮಲ್ಲೇರಿಗೆ ಖುಷಿ ತಂದಿದೆ ಎಂದರು.

ಈ ಸಂಧರ್ಭದಲ್ಲಿ ಕೆಡಿಪಿ ಸದಸ್ಯರಾದ ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ, ಬಿ.ವಿ.ವೆಂಕಟರವಣ,ರಿಯಾಜ್ ಬಾಷ,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಮಾಜಿ ಅಧ್ಯಕ್ಷ ಕೆ.ಆರ್.ನರೇಂದ್ರ,ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ,ಮಾಜಿ ಸದಸ್ಯ ಸುಧಾಕರ್ ರೆಡ್ಡಿ,ಶ್ರೀರಾಮ ನಾಯ್ಕ,ಟಿಎಪಿಎಂಸಿ ಅಧ್ಯಕ್ಷ ಸುಪ್ರೀತ್,ಗುತ್ತಿಗೆದಾರಾದ ಚಿನ್ನತುಮ್ಮನಪಲ್ಲಿ ರಮೇಶ್,ರಾಹುಲ್, ವಿಷ್ಣು,ಶ್ರೀನಿವಾಸ್ ನಾಯ್ಕ,,ಜಬಿವುಳ್ಳ,ನಾರಾಯಣ ಸ್ವಾಮಿ,ನೂರುಲ್ಲಾ,ಗೂಳೂರು ಬಾಬು,ಅಂಜಿನಪ್ಪ,ರಾಮನಪಡಿ ಬಾಬು,ತಿಮ್ಮoಪಲ್ಲಿ ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮಾನಿಗಳು ಇದ್ದರು....

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456