ಶೋಷಿತ ವರ್ಗಗಳ ಅಶಾಕಿರಣ ಡಾ. ಬಿ.ಆರ್.ಅಂಬೇಡ್ಕರ್ : ಶಾಸಕ ಎ ಆರ್ ಕೆ 

Jan 5, 2026 - 13:39
 0  40
ಶೋಷಿತ ವರ್ಗಗಳ ಅಶಾಕಿರಣ ಡಾ. ಬಿ.ಆರ್.ಅಂಬೇಡ್ಕರ್ : ಶಾಸಕ ಎ ಆರ್ ಕೆ 

  ಚಾಮರಾಜನಗರ : ತಾಲೋಕಿನ ಸಂತೆಮರಹಳ್ಳಿಯ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ಸೇವಾ ಟ್ರಸ್ಟ್ ಮೊದಲ ವಾರ್ಷಿಕೋತ್ಸವ ಹಾಗೂ ನೂತನ ಕ್ಯಾಲೆಂಡರ್ ಬೀಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮುಕಾಂತರ ದೇಶದ ಎಲ್ಲಾ ವರ್ಗದ ಸಮುದಾಯದ ಜನತೆಗೆ ಲಭಿಸಿದೆ ಎಂದರು.

ಅನೇಕ ದೇಶಗಳನ್ನು ಸುತ್ತಿ ಅಧ್ಯಯನ ಮಾಡಿ ಸಂವಿಧಾನವನ್ನು ರಚನೆ ಮಾಡಿರುವ ಡಾ ಬಿ ಆರ್ ಅಂಬೇಡ್ಕರ್  ದೇಶ ಅಸ್ತಿ ಎಂದರೆ ತಪ್ಪಾಗಲಾರದು ಎಂದರು.

ದೇಶದ ಬದಲಾವಣೆಗೋಸ್ಕರ ಮತ ಪೆಟ್ಟಿಗೆಯಲ್ಲಿ ದೇಶದ ಭವಿಷ್ಯ ವನ್ನು ಬರೆದಿಟ್ಟ ಧೀಮಂತ ನಾಯಕ ಎನಿಸಿಕೊಂಡಿದ್ದಾರೆ ಹಾಗೂ ಒಗ್ಗಟ್ಟಿನಲ್ಲಿ ಬಲವಿರಬೇಕು ಎಂದು ತಿಳಿಸಿಕೊಟ್ಟ ಮಹಾ ನಾಯಕ ಎಂದರು.

ನಂತರ ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ ಅಂಬೇಡ್ಕರ್ ಸುದೀರ್ಘ 40 ವರ್ಷ ಜೀವನದಲ್ಲಿ ಎಲ್ಲೋ ನಿಂತಿಲ್ಲ ಎಂದರು.

ದೇಶದ ಸಾಮಾಜಿಕ, ಆರ್ಥಿಕ ತೆಯ ಬಗ್ಗೆ ಸಂಶೋಧನೆ ಮಾಡಿ ಹಲವಾರು ಮಾರ್ಗದರ್ಶನ ತೋರಿಸಿದ್ದಾರೆ ಹಾಗೂ ದೇಶದ ಸಮಾನತೆ, ಆರ್ಥಿಕತೆ ಬಗ್ಗೆ ಹೇಳಿ ತಿಳಿಸಿ ಭಾರತ ದೇಶ ಅಭಿವೃದ್ಧಿ ಹೊಂದಲು ಸಹಾಯಕರಿಯಾಗಿ
 ಶೋಷಿತ ವರ್ಗಗಳ ಜಾಗೃತಿ ಮೂಡಿಸಿರುವ  ಜೊತೆಗೆ ಕ್ರಿಯಾಶೀಲತೆ ವ್ಯಕ್ತಿತ್ವ ವುಳ್ಳ ಮಹಾನ್ ವ್ಯಕ್ತಿ ಎಂದರು.

ಭಾರತದಲ್ಲಿ ಶೇ 25 ರಷ್ಟು ಶೋಷಿತ ವರ್ಗಗಳಿದ್ದು ಈ ವರ್ಗಗಳ ಪರ ಧ್ವನಿ ನೀಡಿ ಎಲ್ಲಾ ಸಮುದಾಯಗಳಿಗೆ ನ್ಯಾಯ ದೊರಕಿಸುವಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪಾತ್ರ ಪ್ರಮುಖ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ಸೋಮಶೇಖರ್, ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ, ಚಾಮುಲ್ ನಿರ್ದೇಶಕ ರೇವಣ್ಣ, ಟ್ರಸ್ಟಿನ ಅಧ್ಯಕ್ಷ ಶಿವ ನಾಗಣ್ಣ,   ಮುಖಂಡರಾದ ಸಿ ಎಂ ಮಹದೇವು, ಮಂಜುನಾಥ್, ಮಾದೇಶ್, ಜಯಶಂಕರ್, ಸೋಮಣ್ಣ, ಕಮರವಾಡಿ ಬಸವರಾಜ್ ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456