ಶ್ರದ್ಧಾಭಕ್ತಿಯಿಂದ ನಡೆದ ಗ್ರಾಮ ದೇವತೆ ಗಂಗಮ್ಮ ದೇವಿ ಹೂವಿನ ಕರಗ
ಬಾಗೇಪಲ್ಲಿ: ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧಾಭಕ್ತಿಯಿಂದ ಗಂಗಮ್ಮ ದೇವಿಯ 37ನೇ ವರ್ಷದ ಹೂವಿನ ಕರಗ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಶ್ರೀ ಗಂಗಮ್ಮ ದೇವಾಲಯದಿಂದ ಹೂವಿನ ಕರಗ ಹೊತ್ತ ಮೇಲೂರಿನ ಧರ್ಮೇಂದ್ರರವರು ಶನಿವಾರ ರಾತ್ರಿಯೆಲ್ಲಾ ಪಟ್ಟಣದಲ್ಲಿ ಸುತ್ತಾಡಿ,ವಿವಿಧ ನೃತ್ಯಗಳನ್ನು ಮಾಡಿ, ಭಾನುವಾರ ಬೆಳಗ್ಗೆಯವರೆಗೂ ಪಟ್ಟಣ ಸುತ್ತಾಡಿದರು. ಈ ಕರಗ ಮಹತ್ಸೋವವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ತಮಟೆ ಹಾಗೂ ವಾದ್ಯದ ನಾದಕ್ಕೆ ತಕ್ಕಂತೆ ಕರಗ ಹೊತ್ತವರು ಹೆಜ್ಜೆ ಹಾಕಿದರು.
ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮತ್ತು ಶೀಲಾಸುಬ್ಬಾರೆಡ್ಡಿ ಯವರು ಶ್ರೀ ಗಂಗಮ್ಮ ದೇವಿಯ ಹೂವಿ ಕರಗಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ ದೇವಾಲಯದಿಂದ ಕರಗ ಹೊತ್ತ ವ್ಯಕ್ತಿ ಹೊರ ಬರುತ್ತಿದ್ದಂತೆ ವಹ್ನಿಕುಲದ ಕುಲಸ್ಥರು ಡಮರುಗದ ನಾದ ಹಾಗೂ ಗೆಜ್ಜೆ ಸಪ್ಪಳದ ಜೊತೆಗೆ ಭಕ್ತರು ಗೋವಿಂದ ಜಯಘೋಷ ಮೂಲಕ ಕರಗವನ್ನು ಸ್ವಾಗತಿಸಿದರು. ಇದೇ ವೇಳೆ ನೂರಾರು ಮಂದಿ ವೀರಕುಮಾರರು ಗೋವಿಂದ ಎನ್ನುತ್ತಾ ಕತ್ತಿಯಲ್ಲಿ ಎದೆಗೆ ಗೀಚಿಕೊಂಡು ಹಲಗು ಸೇವೆಯನ್ನ ಸಲ್ಲಿಸಿದರು.
ಇದೆ ಸಂಧರ್ಭದಲ್ಲಿ ಆಪರೇಷನ್ ಸಿಂಧೂರ ಯುದ್ಧದಲ್ಲಿ ವೀರ ಮರಣಹೊಂದ ಮುರಳಿ ನಾಯ್ಕ್ ಅವರಿಗೆ ಶಾಸಕ ಸುಬ್ಬಾ ರೆಡ್ಡಿ ಮತ್ತು ಅವರ ಅಭಿಮಾನಿಗಳು ಶ್ರದ್ಧಾಂಜಲಿ ವಹಿಸಿ ಮೌನ ಆಚರಿಸಿದರು
ಈ ಸಂದರ್ಭದಲ್ಲಿ ಗಂಗಮ್ಮ ದೇವಿ ಕರಗದ ಟ್ರಸ್ಟ್ ಪದಾಧಿಕಾರಿಗಳಾದ ನರಸಿಂಹ ನಾಯ್ಡು,ಎ.ಜಿ.ಸುಧಾಕರ್,ಆದಿಮೂರ್ತಿ,
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
