ಶ್ರೀ ಗುರು ರಾಘವೇಂದ್ರ ವೈಭವೋತ್ಸವ-2026
ಬೆಂಗಳೂರು: ತ್ಯಾಗರಾಜನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವದ ಅಂಗವಾಗಿ ಫೆಬ್ರವರಿ 19 ರಿಂದ 24ರ ವರೆಗೆ ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಫೆಬ್ರವರಿ 19, ಗುರುವಾರ (ರಾಯರ ಪಟ್ಟಾಭಿಷೇಕ) : ಬೆಳಗ್ಗೆ 8-00 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಫಲ-ಪಂಚಾಮೃತ ಅಭಿಷೇಕ,ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ಮತ್ತು ಅನುಗ್ರಹ ಸಂದೇಶ. ಸಂಜೆ 6-00ಕ್ಕೆ ಡಾ| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ "ದಾಸ ವೈಭವ". ಗಾಯನ ಕಾರ್ಯಕ್ರಮ.
ಫೆಬ್ರವರಿ 20 ರಿಂದ 23ರ ವರೆಗೆ ಪ್ರತಿದಿನ ಬೆಳಗ್ಗೆ ಪೂಜಾ ಕೈಂಕರ್ಯಗಳು, ಸಂಜೆ ವಿವಿಧ ಭಜನಾ ಮಂಡಳಿಗಳ ಸದಸ್ಯರುಗಳಿಂದ "ಭಜನಾಮೃತ" ನಡೆಯಲಿದೆ.
ಫೆಬ್ರವರಿ 24, ಮಂಗಳವಾರ (ರಾಯರ ವರ್ಧಂತಿ ಉತ್ಸವ) : ಬೆಳಗ್ಗೆ-ಫಲ-ಪಂಚಾಮೃತ ಅಭಿಷೇಕ, ಶ್ರೀ ಗುರುರಾಜರಿಗೆ "ಲಕ್ಷ ಪುಷ್ಪಾರ್ಚನೆ" ವಿದ್ವಾಂಸರಿಂದ "ರಾಯರ ಮಹಿಮೆ" ವಿಷಯವಾಗಿ ಧಾರ್ಮಿಕ ಪ್ರವಚನ. ಸಂಜೆ 6-00ಕ್ಕೆ ವಿದ್ವಾನ್ ಶ್ರೀ ಅನಂತ ಮಿಸ್ತ್ರಿ ಮತ್ತು ಸಂಗಡಿಗರಿಂದ "ದಾಸ ತರಂಗಿಣಿ" ಗಾಯನ ಕಾರ್ಯಕ್ರಮ. ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
