ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಲಮಿತಿಯಲ್ಲಿ ಒಳಚರಂಡಿ ಕಾಮಗಾರಿ ಮುಗಿಸಿ - ಶಾಸಕ ಸಿ.ಬಿ.ಸುರೇಶ್‌ಬಾಬು

Dec 3, 2025 - 19:47
 0  4
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಲಮಿತಿಯಲ್ಲಿ ಒಳಚರಂಡಿ ಕಾಮಗಾರಿ ಮುಗಿಸಿ - ಶಾಸಕ ಸಿ.ಬಿ.ಸುರೇಶ್‌ಬಾಬು

ಚಿಕ್ಕನಾಯಕನಹಳ್ಳಿ೦೩:-ಕಾಲಮಿತಿಯಲ್ಲಿ ಗುಣಮಟ್ಟದಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚನೆ ನೀಡಿದರು.

ಪಟ್ಟಣ ಹೊರವಲಯದಲ್ಲಿ ನಡೆಯುತ್ತಿರುವ ಒಳಚರಂಡಿ ಪ್ಲಾಂಟ್ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶಿಲಿಸಿ ಮಾತನಾಡಿದ ಅವರು ಈ ವೇಳೆಗಾಗಲೇ ನೀವು ಈ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು ಅದರೆ ನಿದಾನವಾಗಿದೆ ಸಾದ್ಯವಾದಷ್ಟು ಕಾಲದ ಮಿತಿಯೊಳಗೆ ಕಾಮಗಾರಿಗಳು ನಡೆದರೆ ಅದರ ಪ್ರಯೋಜನವು ಸಾರ್ವಜನಿಕರಿಗೆ ಆಗುತ್ತದೆ ಎಂದ ಅವರು ಈಗಾಗಲೇ ಪಟ್ಟಣದ ಕೆಲವು ಭಾಗಗಳಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿರುವ ರಸ್ತೆಗಳನ್ನು ಈ ಹಿಂದಿನ ಯಥಾಸ್ಥಿತಿಗೆ ಮಾಡಬೇಕಾಗಿರುವುದು ನಿಮ್ಮ ಜವಾಬ್ದಾರಿ ಅದ್ದರಿಂದ ಆ ರಸ್ತೆಗಳನ್ನು ದುರಸ್ಥಿ ಮಾಡಿ ನಾಗರೀಕರಿಗೆ ಅನುಕೂಲ ಮಾಡಿಕೊಡಿ ಇನ್ನು ಬಾಕಿ ಇರುವಂತಹ ಭಾಗಗಳಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದAತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಶಿವರಾಜ್ ಮಾತನಾಡಿ ವಿವಿಧ ಹಂತಗಳಲ್ಲಿ ಇಲ್ಲಿ ತ್ಯಾಜ್ಯವನ್ನು ಶುದ್ದೀಕರಿಸಲಾಗುವುದು ನಂತರ ಉಳಿಯುಂತಹ ನೀರನ್ನು ಶುದ್ದೀಕರಿಸಿ ಅದನ್ನು ಪುನರ್‌ಬಳಕೆಗೆ ಬರುವಂತೆ ಮಾಡಲಾಗುವುದು ಇದರಲ್ಲಿ ಉಳಿಯುವಂತಹ ತ್ಯಾಜ್ಯವನ್ನು ಒಣಗಿಸಿ ಗೊಬ್ಬರದ ರೀತಿಯಲ್ಲಿ ಬಳಸವಂತೆ ಮಾಡಲಾಗುವುದು ಇನ್ನು ಮುಂದಿನ ಜುಲೈ ಮಾಹೆಯೊಳಗೆ ಈ ಕಾಮಗಾರಿಯನ್ನು ಮುಗಿಸಲು ಗುರಿ ಇಟ್ಟುಕೊಂಡಿದ್ದು ಮಳೆಬಂದರೆ ಸ್ವಲ್ಪ ನಿಧಾನವಾಗುತ್ತದೆ ಅದರೂ ಈ ಕೆಲಸವನ್ನು ಮಾಡಲಾಗುವುದು ಈ ಒಳಚರಂಡಿಯ ಪ್ಲಾಂಟೇಷನ್‌ನಲ್ಲಿ ಎಲ್ಲಾ ಕೆಲಸಗಳು ಯಾಂತ್ರಿಕರಣವಾಗಿ ನಡೆಯುತ್ತದೆ ಇಲ್ಲಿ ಒಂದು ಲ್ಯಾಬ್‌ನ್ನು ಇಟ್ಟಿದ್ದು ಪ್ರತಿದಿನ ಇಲ್ಲಿ ಸ್ವಚ್ಛತೆ ಹಾಗೂ ಶುದ್ದತೆಯ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗುವುದು ಇವರಿಗೆ ಮುಂದಿನ ಮೂರು ವರ್ಷಗಳವರೆಗೆ ಜವಾಬ್ದಾರಿ ಇದ್ದು ಅವರೇ ನಿರ್ವಹಿಸುತ್ತಾರೆ ಎಂದು ಒಳಚರಂಡಿ ಹಾಗೂ ಅದು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಉಪಾದ್ಯಕ್ಷ ರಾಜಶೇಖರ್, ಮಾಜಿ ಸದಸ್ಯ ಮಹೇಶ್ ಸೇರಿದಂತೆ ಇತರರು ಇದ್ದರು.  

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456