ಸೊಳ್ಳೇಪುರ ಕೃಷಿ ಪತ್ತಿನ‌ ಸಹಕಾರ ಸಂಘದ ಅದ್ಯಕ್ಷ ಉಪಾದ್ಯಕ್ಷ ಸ್ಥಾನ ಕಾಂಗ್ರೆಸ್ ವಷಕ್ಕೆ

May 30, 2025 - 15:11
 0  3
ಸೊಳ್ಳೇಪುರ ಕೃಷಿ ಪತ್ತಿನ‌ ಸಹಕಾರ ಸಂಘದ ಅದ್ಯಕ್ಷ ಉಪಾದ್ಯಕ್ಷ ಸ್ಥಾನ ಕಾಂಗ್ರೆಸ್ ವಷಕ್ಕೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಸೊಳ್ಳೇಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು ಅಧ್ಯಕ್ಷ ಸ್ಥಾನ ಬಯಸಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಸೊಳ್ಳೇಪುರ ಗ್ರಾಮದ ನರಸಿಂಹೇಗೌಡ, ಉಪಾದ್ಯಕ್ಷ ಸ್ಥಾನ ಬಯಸಿ ಕಳ್ಳನಕೆರೆ ಗ್ರಾಮದ ನರಸಿಂಹಯ್ಯ ರವರನ್ನು ಹೊರತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಕೆ ಮಾಡದ ಕಾರಣ ನೂತನ ಅಧ್ಯಕ್ಷರಾಗಿ ನರಸಿಂಹೇಗೌಡ ಉಪಾದ್ಯಕ್ಷರಾಗಿ ನರಸಿಂಹಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಭರತ ಕುಮಾರ್ ಘೋಷಿಸಿದ್ರು

ಕೆಪಿಸಿಸಿ ಸದಸ್ಯರಾದ ಕಿಕ್ಕೇರಿ ಸುರೇಶ್ ಮಾತನಾಡಿ, ಹಿರಿಯ ಮುಖಂಡರಾದ ಸಾಸಲು ಈರಪ್ಪ, ಸೊಳ್ಳೇಪುರ ಜಯರಾಮ್,  ಕೋಡಿಮರನಹಳ್ಳಿ ಮಂಜೇಗೌಡ, ಸೊಳ್ಳೇಪುರ ಸುರೇಶ್ ಮಾತನಾಡಿ  ಕಾಂಗ್ರೆಸ್ ಪಕ್ಷ ಬೆಂಬಲಿತ 8 ಅಭ್ಯರ್ಥಿಗಳು ಗೆಲುವ ಸಾದಿಸಿದ್ದು ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ  ಷೇರುದಾರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಕಾರ್ಯಗಳನ್ನು ಮಾಡಬೇಕು.ಸಹಕಾರ ಸಂಘಗಳು ಹಾಗೂ ಹಾಲಿನ ಡೇರಿಗಳು ರೈತರ ಜೀವನಾಡಿಯಾಗಿವೆ.ಇವುಗಳ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು.ಗೆಲುವು ಸಾಧಿಸಿದ ನಿರ್ದೇಶಕರ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ.ಅದಕ್ಕೆ ಚ್ಯುತಿ ಬಾರದಂತೆ ಕೆಲಸವನ್ನು ನಿರ್ವಹಿಸಿದಾಗ ಮಾತ್ರ ‌ಗೆಲುವಿಗೆ ಅರ್ಥ ಸಿಗುತ್ತದೆ. ಒಟ್ಟಿನಲ್ಲಿ ಸಂಘದ ನಿರ್ದೇಶಕರಿಗೆ ಸಂಘದ ಶ್ರೇಯೋಭಿದ್ದಿಗೆ ಹಾಗೂ ಷೇರುದಾರರಿಗೆ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ‌ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯರಾಮ್,  ಸಂಘದ ನಿರ್ದೇಕರಾದ  ಸೊಳ್ಳೇಪುರ ಸುರೇಶ್, ರೇಖಾ ನಾಗರಾಜು, ಕೃಷ್ಣೇಗೌಡ, ಕೋಡಿಮರನಹಳ್ಳಿ ಮಂಜೇಗೌಡ, ಕೋಳಿ ಸುರೇಶ್, ಕುಂದೂರು ರಾಮಚಂದ್ರ, ವಸಂತಕುಮಾರ್, ಮಂಜುಳಮ್ಮ, ಬೆಡದಹಳ್ಳಿ ದೇವರಾಜು, ಮುಖಂಡರಾದ  ಶೆಟ್ಟಹಳ್ಳಿ, ಕೃಷ್ಣೇಗೌಡ, ಬೇಕರಿ ಮಂಜು, ಸಣ್ಣಪ್ಪ ಲೋಕೇಶ್, ಗುಂಡಾ, ಸಂಘದ ಸಿಇಓ ಮಂಜುನಾತ್, ಸಹಕಾಯ ಅಭಿ, ಸೇರಿದಂತೆ ಮತ್ತಿತ್ತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456