ಅರ್ಹ ಪೊಲೀಸ್ ಸಿಬ್ಬಂದಿಗಳನ್ನು ಪರಸ್ಪರ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಪತ್ರ

Mar 17, 2026 - 17:22
 0  40
ಅರ್ಹ ಪೊಲೀಸ್ ಸಿಬ್ಬಂದಿಗಳನ್ನು ಪರಸ್ಪರ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಪತ್ರ

      ಬೆಂಗಳೂರು: ಮಾ-17 ರಾಜ್ಯದ ಪೊಲೀಸ್ ಇಲಾಖೆಯ ಸಿವಿಲ್/ಸಿಎಆರ್/ಡಿಎಆರ್‌ನಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಇಲಾಖೆಯ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸಿದ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಪರಸ್ಪರ ವರ್ಗಾವಣೆ ಮಾಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಮುಖ್ಯಮಂತ್ರಿಗಳಿಗೆ ಹಾಗೂ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್/ಸಿಎಆರ್/ಡಿಎಆರ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕರ್ನಾಟಕ ನಾಗರಿಕ ಸಾಮಾನ್ಯ ನೇಮಕಾತಿ ನಿಯಮರಡಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು 2023 ರಂದು ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ/ಘಟಕಕ್ಕೆ ವರ್ಗಾವಣೆ ಬಯಸುವ ಅಧಿಕಾರಿ, ಸಿಬ್ಬಂದಿಗಳಿಗೆ ಷರತ್ತುಗಳಿಗೊಳಪಟ್ಟು ವರ್ಗಾವಣೆ ಪಡೆಯಲು ಅನುಕೂಲ ಮಾಡಿಕೊಟ್ಟಿರುವುದು ಇಲಾಖೆಯ ಸಿಬ್ಬಂದಿಗಳಿಗೆ ಸಂತಸದ ಸಂಗತಿಯಾಗಿದ್ದು ವರ್ಗಾವಣೆಯಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಕೆ.ಎಸ್.ಪಿ.ಪೋರ್ಟಲ್ ಮುಖಾಂತರ ವರ್ಗಾವಣೆಗೆ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ವರ್ಗ, ಮಾಜಿ ಸೈನಿಕ ಸಿಬ್ಬಂದಿಗಳಿಗೆ ಪತಿ-ಪತ್ನಿ ಪ್ರಕರಣದ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದ್ದು ಈ ಹಿಂದೆ ಇದ್ದ ಪರಸ್ಪರ ವರ್ಗಾವಣೆ ಅವಕಾಶವನ್ನು ಕೈಬಿಟ್ಟಿರುವುದರಿಂದ ಪರಸ್ಪರ ವರ್ಗಾವಣೆ ಬಯಸುವ ಸಿಬ್ಬಂದಿಗಳು ವಂಚಿತರಾಗಿರುತ್ತಾರೆ

ಮನೆಯ ಆರ್ಥಿಕ ಪರಿಸ್ಥಿತಿ, ಕುಟುಂಬದ ಜವಾಬ್ದಾರಿ ಹೊತ್ತ ಯುವಕರು ಪೊಲೀಸ್ ಹುದ್ದೆಯನ್ನರಿಸಿ ತಮ್ಮ ಮಾತೃ ಜಿಲ್ಲೆಯಿಂದ ಬಹುದೂರದ ಜಿಲ್ಲೆಗಳಲ್ಲಿ ನಡೆಯುವ ನೇಮಕಾತಿಗಳಲ್ಲಿ ಪಾಲ್ಗೊಂಡು ಯಶಸ್ಸುಗಳಿಸಿ ಸೇವೆಗೆ ಆಯ್ಕೆಯಾಗುವ ಸಿಬ್ಬಂದಿಗಳು ಕುಟುಂಬದಿಂದ ನೂರಾರು ಕಿಮೀನಷ್ಟು ದೂರವಿದ್ದು ತಂದೆ ತಾಯಿಯವರು ವಯೋವೃದ್ದ ಖಾಯಿಲೆಯಿಂದ ಬಳಲುತ್ತಿದ್ದರೂ ಸಮಯಕ್ಕೆ ಸರಿಯಾಗಿ ಪಾಲನೆ ಪೋಷಣೆ ಮಾಡಲಾಗದೇ ಮಾನಸಿಕವಾಗಿ ಬಳಲುತ್ತಾ ಸಿಬ್ಬಂದಿಗಳ ಕೊರತೆಯ ಕಾರಣಗಳಿಂದ ರಜೆಗಳು ಸಹ ಸಿಗದಿರುವುದರಿಂದ ಉತ್ತಮವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಲಾಗದೇ ಒತ್ತಡದಿಂದ ಸೇವೆ ಸಲ್ಲಿಸುತ್ತಿದ್ದು ಈಗಾಗಲೇ ಕೆಲವು ಸಿಬ್ಬಂದಿಗಳು ಇಲಾಖೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುತ್ತಾರೆ. ಇನ್ನು ಕೆಲವರು ನಾನಾ ಕಾರಣಗಳು ನೀಡಿ ರಾಜೀನಾಮೆ ನೀಡುತ್ತಿರುವುದಾಗಿ ಇಲಾಖೆ ಸಿಬ್ಬಂದಿಗಳಲ್ಲಿ ಕೇಳಿ ಬರುತ್ತಿರುತ್ತದೆ, ತಮ್ಮ ಜೇಷ್ಟತೆಯನ್ನು ಬಿಟ್ಟುಕೊಟ್ಟು ಪರಸ್ಪರ ವರ್ಗಾವಣೆ ಬಯಸುವ ಸಿಬ್ಬಂದಿಗಳೂ ಒಂದು ಜಿಲ್ಲೆ/ಘಟಕದಿಂದ ಮತ್ತೊಂದು ಜಿಲ್ಲೆ/ಘಟಕಕ್ಕೆ ವರ್ಗಾವಣೆಯಾಗುವುದರಿಂದ ಒಂದು ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸ್ಥಳ ಮಾತ್ರ ಬದಲಾಗಲಿದ್ದು ಯಾವುದೇ ಹುದ್ದೆಗಳು ಖಾಲಿಯಾಗಿ ಉಳಿಯುವುದಿಲ್ಲಾ ಮತ್ತು ಸ್ವಂತ ಖರ್ಚಿನಲ್ಲಿ ವರ್ಗಾವಣೆ ಬಯಸುವುದರಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲಾ ಆದರೂ ಸರ್ಕಾರದ ಆದೇಶದಂತೆ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸಿದ್ದರು ಸಹ ಪರಸ್ಪರ ವರ್ಗಾವಣೆ ನೀಡದಿರುವುದರಿಂದ ವಯಸ್ಸಾದ ತಂದೆ-ತಾಯಿ, ಪತ್ನಿ ಮತ್ತು ಮಕ್ಕಳನ್ನು ಬೀದಿಗಿಳಿಸಿ ಇಲಾಖೆ ಮತ್ತು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಿಬ್ಬಂದಿಗಳು ಎಚ್ಚರಿಕೆ ನೀಡಿರುವುದು ಪತ್ರಿಕೆಯಲ್ಲಿ ವರದಿಯಾಗಿದ್ದು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಳಸಿಬ್ಬಂದಿಗಳನ್ನು ಒತ್ತಡರಹಿತರನ್ನಾಗಿಸದೇ ಉತ್ತಮ ದಕ್ಷ ಸೇವೆಯನ್ನು ನಿರೀಕ್ಷಿಸಲು ಕಷ್ಟಸಾಧ್ಯವಾಗಿರುವುದರಿಂದ ಸಿಬ್ಬಂದಿಗಳ ಕೌಟಂಬಿಕ ಮೌಲ್ಯಗಳನ್ನು ಕಾಪಾಡುವ ಹಿತದೃಷ್ಟಿಯಿಂದ ಮನವಿಯಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಆದೇಶದಂತೆ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸಿ ವರ್ಗಾವಣೆ ಬಯಸಿದ ಸಿವಿಲ್/ಸಿಎಆರ್/ಡಿಎಆರ್ ಪೊಲೀಸ್ ಸಿಬ್ಬಂದಿಗಳನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪರಸ್ಪರ ವರ್ಗಾವಣೆ ಮಾಡಲು ಕೆಎಸ್‌ಪಿ ಪೋರ್ಟಲ್ ತೆರೆದು ಸಿಬ್ಬಂದಿಗಳ ಪರಸ್ಪರ ವರ್ಗಾವಣೆಗಳನ್ನು ಮಾಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ನಿಮಿತ್ಯ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಅಂಜುಮ್ ಪರ್ವೆಜ್ ರವರು ರಾಜ್ಯದ ಡಿಜಿ ಮತ್ತು ಐಜಿಪಿರವರಿಗೆ ಸದರಿ ವಿಷಯವನ್ನು ಪರಿಶೀಲಿಸಿ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ!

What's Your Reaction?

Like Like 3
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456