ಆಟೋ ಚಾಲಕರಿಗೆ  ಅರಿವು ಮೂಡಿಸಿದ ಸಿಪಿಐ. ನವೀನ್ ರೆಡ್ಡಿ

Jun 19, 2025 - 17:03
 0  4
ಆಟೋ ಚಾಲಕರಿಗೆ  ಅರಿವು ಮೂಡಿಸಿದ ಸಿಪಿಐ. ನವೀನ್ ರೆಡ್ಡಿ

ಕೆಜಿಎಫ್: ಇತ್ತೀಚಿನ ದಿನಗಳಲ್ಲಿ ಕೆ ಜಿ ಎಫ್ ನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಶಾಲಾ-ಕಾಲೇಜು ಬಸ್ ಹಾಗೂ ಆಟೋ ಗಳಲ್ಲಿ  ಹೆಚ್ಚು ಮಕ್ಕಳನ್ನು ತುಂಬಿಕೊಂಡು ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದ ಆಟೋರಿಕ್ಷಗಳನ್ನು ತಡೆದು ತಪಾಸಣಿ ನಡೆಸಿ ದಂಡ ವಿಧಿಸುವ ಮೂಲಕ ಸಂಚಾರಿ ಪೊಲೀಸರು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿಪಿಐ. ನವೀನ್ ರೆಡ್ಡಿ ನೇತ್ರತ್ವದಲ್ಲಿ. ರಾಬರ್ಟ್ ಸನ್ ಪೇಟೆಯ ಪೊಲೀಸ್ ಠಾಣೆ ಆವರಣದಲ್ಲಿ ಆಟೋ ಚಾಲಕರನ್ನು ಕರೆಸಿ ಅವರಿಗೆ ಚಾಲನೆ ಪರವಾನಗಿ. ಡ್ರೈವಿಂಗ್ ಲೈಸನ್ಸ್. ವಾಹನಕ್ಕೆ ಇನ್ಸೂರೆನ್ಸ್. ಕಾಕಿ ಸಮವಸ್ತ್ರ. ಇವುಗಳ ಕುರಿತು ಎಲ್ಲಾ ಆಟೋ ಚಾಲಕರಿಗೆ ಅರಿವು ಮೂಡಿಸಲಾಯಿತು. ಆಟೋ ಚಾಲಕರು. ಗ್ರಾಹಕರ ಹತ್ತಿರ ಆತ್ಮೀಯವಾಗಿ ಸ್ಪಂದಿಸಬೇಕು. ಆಟೋ ಚಲಾವಣೆ  ಮಾಡುವಾಗ ಕುಡಿಯಬಾರದು. ಒಳ್ಳೆಯ ನಡತೆಯಿಂದ. ತಲೆ ಕೂದಲು. ಹೆಚ್ಚಾಗಿ ಬಿಟ್ಟುಕೊಂಡು. ಕಿವಿಗೆ ಓಲೆ ಇಟ್ಟುಕೊಂಡು. ವಿಚಿತ್ರ ಆಕಾರದಲ್ಲಿ ವಾಹನ ಚಲಾವಣೆ ಮಾಡಬಾರದು. ಈ ರೀತಿ ವಿಚಿತ್ರವಾಗಿದ್ದರೆ. ಗ್ರಾಹಕರು ಆಟೋದಲ್ಲಿ ಹತ್ತುವುದಿಲ್ಲ. ಭಯಭೀತರಾಗುತ್ತಾರೆ. ಇದನ್ನು ಮನಗಂಡು. ಸಂಚಾರಿ ನಿಯಮಗಳನ್ನು ಚಾಚು ತಪ್ಪದೇ ಪಾಲನೆ ಮಾಡಬೇಕು. ಅತಿ ವೇಗವಾಗಿ ಆಟೋ ಚಲಾವಣೆ ಮಾಡಬಾರದು. ಇದರಿಂದ ಏನಾದರೂ ಅನಾಹುತ ಆದರೆ. ಅದಕ್ಕೆ ನೇರವಾಗಿ ಆಟೋ ಚಾಲಕರೆಯಾಗುತ್ತಾರೆ. ನಂತರ ಕೋರ್ಟು ಕಚೇರಿ. ಈ ರೀತಿಯಾಗಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಆಟೋಗಳಿಗೆ. ಸರ್ಕಾರಿ ನಿಯಮಗಳ ಅನ್ವಯ ಎಲ್ಲಾ ದಾಖಲೆಗಳನ್ನು. ಇಟ್ಟುಕೊಂಡರೆ. ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಆಟೋ ಚಾಲಕರಿಗೆ ಎಚ್ಚರಿಕೆ ನೀಡಿದ ಸರ್ಕಲ್ ಇನ್ಸ್ಪೆಕ್ಟರ್. ನವೀನ್ ರೆಡ್ಡಿ. ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಸಂಗಮೇಶ್. ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456