ಆರ್ ಕೆ ಫೌಂಡೇಶನ್ ಸದಸ್ಯ ಗಂಗಿರೆಡ್ಡಿ ಪುತ್ರಿ ಚಂದನ 625ಕ್ಕೆ 597 ಅಂಕ ಗಳಿಸಿ ಸಾಧನೆ

Apr 24, 2026 - 17:27
 0  3
ಆರ್ ಕೆ ಫೌಂಡೇಶನ್ ಸದಸ್ಯ ಗಂಗಿರೆಡ್ಡಿ ಪುತ್ರಿ ಚಂದನ 625ಕ್ಕೆ 597 ಅಂಕ ಗಳಿಸಿ ಸಾಧನೆ

       ಬೇತಮಂಗಲ:  ಆರ್ ಕೆ ಫೌಂಡೇಶನ್ ಸದಸ್ಯ ಗಂಗಿರೆಡ್ಡಿ ರವರ ಪುತ್ರಿ ಚಂದನ ಅವರು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ   625 ಕ್ಕೆ 597  ಅಂಕಗಳನ್ನು ಪಡೆಯುವ ಮೂಲಕ  ಗ್ರೀನ್ ವುಡ್ಸ್ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.

 ಹೆಚ್ಚು ಅಂಕಗಳನ್ನು ಪಡೆದಿರುವ ಆರ್ ಕೆ ಫೌಂಡೇಶನ್ ಸದಸ್ಯ ಗಂಗಿ ರೆಡ್ಡಿ ರವರ ಪುತ್ರಿ ಚಂದನ ಅವರನ್ನು ಆರ್ ಕೆ ಫೌಂಡೇಶನ್ ಅಧ್ಯಕ್ಷ ವಿ ಮೋಹನ್ ಕೃಷ್ಣ ಹಾಗೂ ಪದಾಧಿಕಾರಿಗಳು  ತಮ್ಮ ಮನೆಗೆ ಭೇಟಿ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು ನಮ್ಮ ಆರ್ ಕೆ ಫೌಂಡೇಶನ್ ಸದಸ್ಯ ಗಂಗಿರೆಡ್ಡಿ ರವರ ಮಗಳು ಸುಂದರಪಳ್ಯದ ಗ್ರೀನ್ ವುಡ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625ಕ್ಕೆ 597 ಅಂಕಗಳನ್ನು ಪಡೆದು ಶಾಲೆಗೆ ಹಾಗೂ ಅವರ ಗ್ರಾಮಕ್ಕೆ ಕೀರ್ತಿ ತಂದಿದ್ದರೆ,ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಆರ್ ಕೆ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456