ಕವಿ ಒಬ್ಬ ಸಮಾಜದ ಚಿಕಿತ್ಸಕ: ತಾ. ಸಿ. ತಿಮ್ಮಯ್ಯ

Apr 27, 2026 - 18:03
 0  2
ಕವಿ ಒಬ್ಬ ಸಮಾಜದ ಚಿಕಿತ್ಸಕ: ತಾ. ಸಿ. ತಿಮ್ಮಯ್ಯ

         ಬೆಂಗಳೂರಿನ ಮಲ್ಲತಹಳ್ಳಿಯಲ್ಲಿರುವ ಗಾನಪಲ್ಲವಿ ಆಡಿಟೋರಿಯಂ ನಲ್ಲಿ ಡಾ. ರಾಜಕುಮಾರ್ ಅವರ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕವಿ ಉದಂತ ಶಿವಕುಮಾರ್ ಅವರ "ಮೌನದೊಳಗಿನ ಪ್ರಣತಿ" ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು. 

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕವಿಗಳಾದ ತಾ. ಸಿ. ತಿಮ್ಮಯ್ಯನವರು  'ಕವಿ ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಸೂಕ್ಷ್ಮವಾಗಿ  ಗಮನಿಸಿರುತ್ತಾನೆ, ಅವುಗಳನ್ನು ತನ್ನ ಕೃತಿಯ ಮೂಲಕ ತೆರೆದಿಡುತ್ತಾನೆ. ಸಮಾಜವನ್ನು ಸ್ವಾಸ್ಥ್ಯ ಸಮಾಜವನ್ನಾಗಿ ನೋಡಲು ಬಯಸುತ್ತಾನೆ. ಆದ್ದರಿಂದ ಕವಿ ಒಬ್ಬ ಸಮಾಜದ ಚಿಕಿತ್ಸಕ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

 ಡಾ. ಎಚ್. ತುಕಾರಾಮರವರು ಮಾತನಾಡುತ್ತಾ ಯುವಕರು ಮತ್ತು ಓದುಗರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಮೊಬೈಲ್ ಗಳ ಹಾವಳಿಯನ್ನು ಕಡಿಮೆ ಮಾಡಿ ಓದುವ ಕಡೆ ಹೆಚ್ಚು ಗಮನ ಕೊಡಬೇಕು ಇದರಿಂದ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಜವಾಬ್ದಾರಿಯುಂಟಾಗುತ್ತದೆ, ಸುಮಧುರ ಸಮಾಜವನ್ನು ಕಟ್ಟಲು ಇದು ಕಾರಣವಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ  ಪ್ರಾಂಶುಪಾಲರಾದ ಸತೀಶ್ ರವರು, ಗಾನಪಲ್ಲವಿಯ ವೆಂಕಟರಾಜು, ಎಂ. ಎಚ್. ರಾಮಮೂರ್ತಿ ಹಾಗೂ ಕವಿ ಉದಂತ ಶಿವಕುಮಾರ್ ರವರು  ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456