ಕೆ.ಜಿ.ಎಫ್:ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನ
ಕೆಜಿಎಫ್., ಫೆ. ೧೩: ಕೆ.ಜಿ.ಎಪ್ ಪೊಲೀಸ್ ಜಿಲ್ಲೆಯ ಉರಿಗಾಂ ಪೊಲೀಸ್ ಠಾಣೆಯ ರೌಡಿ ಆಸಾಮಿ ಪ್ರಶಾಂತ್@ ಲಾಲ್, ೨೬
ವರ್ಷ, ವಾಸ: ನಂ.೭೪ ಬ್ಯಾಂಡ್ ಲೈನ್, ಉರಿಗಾಂ, ಕೆ.ಜಿ.ಎಫ್ ತಾಲ್ಲೂಕು ಎಂಬಾತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ, ೦೧ ಕೊಲೆ ೦೧ ಕೊಲೆ ಪ್ರಯತ್ನ, ಪೊಲೀಸ್ ಅಧಿಕಾರಿಯ ಮೇಲೆ ೦೧ ಹಲ್ಲೆ ಪ್ರಕರಣ,
೦೪ ಮನೆ ಕನ್ನ ಕಳವು ಪ್ರಕರಣಗಳು, ೦೧ ಪ್ರಿಸರ‍್ಸ್ ಆಕ್ಟ್ ಒಟ್ಟು ೮ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ
ಜಾಮೀನು ಪಡೆದು ಪುನ: ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದವನ ವಿರುದ್ದ ವಿ.ಲಕ್ಷ್ಮಯ್ಯ, ಪೊಲೀಸ್ ಉಪಾಧೀಕ್ಷಕರು ಕೆ.ಜಿ.ಎಫ್
ಮತ್ತು ಮಾಡ್ಕೊಂಡಯ್ಯ ಪೊಲೀಸ್ ವೃತ್ತ ನಿರೀಕ್ಷಕರು ಉರಿಗಾಂ ವೃತ್ತ ರವರ ಮಾರ್ಗದರ್ಶನದಲ್ಲಿ ಉರಿಗಾಂ ಪೊಲೀಸ್
ಠಾಣೆಯ ಪಿ.ಎಸ್.ಐ ಕೃಷ್ಣ
ಮೂರ್ತಿ ಅವರು ಗೂಂಡಾ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳಲು ಕೋರಿ ಪ್ರಸ್ತಾವನೆಯನ್ನು
ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು , ಜಿಲ್ಲಾಧಿಕಾರಿಗಳು ಫೆ. ೧೨ ರಂದು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ
ಆಜ್ಞೆಯನ್ನು ಹೊರಡಿಸಿ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿಡಲು ಆದೇಶಿಸಿರುತ್ತಾರೆ. ಅದರಂತೆ ಉರಿಗಾಂ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪ್ರಶಾಂತ್ @ಲಾಲ್
ಈತನನ್ನು ಫೆ. ೧೩ ರಂದು ¨ಬೆಳಗಿನ ಜಾವ ಬಂಧಿಸಿ ಕಲ್ಬುರ್ಗಿ ಜಿಲ್ಲೆಯ ಕೇಂದ್ರ
ಕಾರಾಗೃಹ ರವರ ವಶಕ್ಕೆ ರೂಪಿಸಿರುತ್ತಾರೆ.
ಪೊಲೀಸ್ ಉಪಾಧೀಕ್ಷಕರಾದ ವಿ. ಲಕ್ಷ್ಮಯ್ಯ ಮತ್ತು ಉರಿಗಾಂ ವೃತ್ತ ನಿರೀಕ್ಷಕರಾದ ಮಾರ್ಕೋಂಡಯ್ಯ ರವರ
ಮಾರ್ಗದರ್ಶನದಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ರೌಡಿ ಆಸಾಮಿಯನ್ನು ಬಂಧಿಸುವಲ್ಲಿ ಪಿ.ಎಸ್.ಐ ಕೃಷ್ಣಮೂರ್ತಿ ಹಾಗೂ
ಸಿಬ್ಬಂದಿಗಳಾದ ಜಬೀರ್ ಪಾಷ, ಮಂಜುನಾಥ ಉಲಾಗಡ್ಡಿ, ಅಶೋಕ, ಚಾಲಕರಾದ ಶಂಕರ್ ರವರುಗಳನ್ನು ಒಳಗೊಂಡ ತಂಡ ಯಶಸ್ವಿಯಾಗಿದ್ದು, ಇವರುಗಳ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಅಧಿಕಾರಿ ಶಿವಾಂಶು ರಜಪೂತ್ ರವರು
ಶ್ಲಾಘಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
