ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆಗಟ್ಟಲು ಅರಿವು

Jun 24, 2025 - 12:16
 0  5
ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆಗಟ್ಟಲು ಅರಿವು

ಕೆಜಿಎಫ್: ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ರಾಬರ್ಟ್ ಸನ್ ಪೇಟೆ ಸರಹದ್ದಿನ. ಕುವೆಂಪು ಬಸ್ ನಿಲ್ದಾಣದಲ್ಲಿ 112 ಹಾಗೂ 1930 ಸೈಬರ್ ಕ್ರೈಂ ಬಗ್ಗೆ ಅಪರಾಧ ಪ್ರಕರಣಗಳು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಪಿಎಸ್ಐ. ಯಮನಪ್ಪ ಪತ್ರೋಡ. ಮಾತನಾಡಿ. ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ 112 ತುರ್ತು ವಾಹನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಗಳಿದ್ದರೆ. ವನ್ ವನ್ ಟು ನಂಬರಿಗೆ ಕರೆ ಮಾಡಿದರೆ. 10. ಹಾಗೂ 12 ನಿಮಿಷಗಳಲ್ಲಿ ಕಾರ್ಯಪ್ರವೃತ್ತರಾಗಿ ಘಟನಾ ಸ್ಥಳಕ್ಕೆ ಆಗಮಿಸುತ್ತಾರೆ. ವಾಹನದಲ್ಲಿ ಒಬ್ಬರು ಪಿಎಸ್ಐ ಇಬ್ಬರು ಪೊಲೀಸ್ ಸಿಬ್ಬಂದಿಗಳು ಡ್ರೈವರ್ ಸಹಿತ ನಾಲ್ವರು ಇರುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುತ್ತಾರೆ. ಏನು ಹೆಚ್ಚಿನ ಸಿಬ್ಬಂದಿಗಳ ಬೇಕಾದರೆ ಸ್ಥಳಕ್ಕೆ ಕರೆತರುವ  ಅವಕಾಶ ಇರುತ್ತದೆ. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಲು ನಮ್ಮ  ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳು ಕೆ.ಎಂ. ಶಾಂತರಾಜು ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಲು ಆದೇಶ ನೀಡಿದ್ದಾರೆ ಎಂದರು. ಯಾರೇ ಆಗಲಿ ಯಾವುದೇ ಸ್ಥಳಗಳಲ್ಲಿ ಗಲಾಟೆಗಳು. ರಸ್ತೆಯಲ್ಲಿ ಅಡ್ಡಗಟ್ಟುವುದು. ಕುಡಿದು ಗಲಾಟೆ ಮಾಡುವುದು. ಎಟಿಎಂ ಗಳಲ್ಲಿ ದರೋಡೆ ಮಾಡಲು ಯತ್ನಿಸಿದರೆ. ರಸ್ತೆ ಬದಿಯಲ್ಲಿ ಅಪಘಾತಗಳು ‌ ಸಂಭವಿಸಿದರೆ ತುರ್ತಾಗಿ 112 ಗೆ ಹಾಗೂ1930 ಗೆ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ಗೋಪ್ಯವಾಗಿ ಇಡುತ್ತೇವೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ.ERSS 112 ವಾಹನ ಸಿಬ್ಬಂದಿಗಳಿಗೆ  ವಿಶೇಷ ತರಬೇತಿ ನೀಡಿ. ಪಿಸ್ತೂಲಿ ಸಹ ನೀಡಿರುತ್ತಾರೆ. ಒಟ್ಟಾರೆಯಾಗಿ ಕೆಜಿಎಫ್ ತಾಲೂಕಿನಲ್ಲಿ ಜನರು ಧೈರ್ಯವಾಗಿ ಬದುಕು ಸಾಗಿಸಬೇಕು. ಯಾವುದೇ ಒಂದು  ಆತಂಕಕ್ಕೆ ಒಳಗಾಗಬಾರದು. ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎ.ಎಸ್ ಐ ಅನಿಷ್ ಪಾಷಾ ಸಿಬ್ಬಂದಿ ವರ್ಗ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456