ಗುರು ಪೂರ್ಣಿಮಾ ಪರಮ ಗುರುವನ್ನು ನೆನೆಯುವ ಪವಿತ್ರವಾದ ದಿನ

Jul 7, 2025 - 18:18
 0  11
ಗುರು ಪೂರ್ಣಿಮಾ ಪರಮ ಗುರುವನ್ನು ನೆನೆಯುವ ಪವಿತ್ರವಾದ ದಿನ
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ 
ಗುರು ಸಾಕ್ಷಾತ್ ಪರಬ್ರಹ್ಮ 
ತಸ್ಮೈ ಶ್ರೀ ಗುರುವೇ ನಮಃ 
ನಾವು ಆಷಾಢಮಾಸದ ಪೌರ್ಣಮಿಯೆಂದು ಮಾತ್ರ ಗುರುವನ್ನು ಪೂಜಿಸದೆ ಪ್ರತಿದಿನವೂ ಗುರುವನ್ನು ಸ್ಮರಿಸಬೇಕು.
" ಹರ ಮುನಿದರೆ ಗುರು ಕಾಯುವನಯ್ಯಾ" ಎಂಬ ಶರಣರ ಮಾತಿನಲ್ಲಿ ಗುರುವಿನ ಮಹತ್ವ ದೊಡ್ಡದು ಶಿವಪಥ ವನ್ನರಿವೋಡೆ ಗುರು ಪಥವೇ ಮೊದಲು ಎಂದು ಬಸವಣ್ಣನವರು ಹೇಳಿದ್ದಾರೆ. ಗುರುಪೂರ್ಣಿಮೆ ಇದು ಗುರುಗಳನ್ನು ಪೂಜಿಸುವ ಗುರುವಿನ ಮಹತ್ವವನ್ನು ಸಾರುವ ದಿನ 
ಗುರು ನಮಗೆ ಜೀವನದಲ್ಲಿ ಸರಿಯಾದ ದಾರಿತೋರಿಸಿ ಕೈಹಿಡಿದು ನಡೆಸುವ ಶ್ರೇಷ್ಠ ವ್ಯಕ್ತಿ ಗುರುವಿಗಿಂತ ಮೀರಿದ ತತ್ವ ಬೇರೆ ಯಾವುದೂ ಇಲ್ಲ. ಕತ್ತಲಿನಿಂದ ಬೆಳಕಿನೆಡೆಗೆ ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗುವ ವ್ಯಕ್ತಿಯೇ ಗುರು ಆದ್ದರಿಂದ ಗುರುವಿಗಾಗಿ ಈದಿನ ಮೀಸಲಾಗಿದೆ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ಎಂದು ದಾಸರು ಹೇಳಿದ್ದಾರೆ. ತಂದೆ-ತಾಯಿಯರಿಗಿಂತ ಗುರು ಶ್ರೇಷ್ಠ ಎಂದು ಹಿರಿಯರು ಹೇಳಿದ್ದಾರೆ. ಸಕಲ ವಿದ್ಯಾ ಪಾರಂಗತ ನಾಗಲು ಗುರುವಿನ ಮಾರ್ಗದರ್ಶನ ಬೇಕೇಬೇಕು ಗುರುವಿಲ್ಲದ-ವಿದ್ಯೆ ಹದ್ದಿಗಿಂತಲೂ ಕಡೆ ಎಂಬ ಮಾತಿದೆ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಕವಾಗಿ ಗುರುಪೂರ್ಣಿಮೆ ಎಂದು ಆಚರಿಸುತ್ತಾರೆ. ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಆಧ್ಯಾತ್ಮಿಕ ಹಾದಿಯಲ್ಲಿ ನಮ್ಮನ್ನು ನಡೆಸಿ ನಮ್ಮ ಗುರಿ ಮುಟ್ಟಲು ಸದಾ
ಮಾರ್ಗದರ್ಶನ ನೀಡುವವನೇ ಗುರು 
ಗುರುವಿನ ವಾಕ್ಯವೇ ವೇದವಾಕ್ಯ ಎಂದು ತಿಳಿದು ನಡೆದಂತಹ ಶಿಷ್ಯ- ಪರಂಪರೆ 
ಇತಿಹಾಸದಲ್ಲಿ ಶ್ಲಾಘನೀಯ
ಪುರಾಣ ಕಥೆಗಳನ್ನು ನೋಡಿದರೆ ನಮ್ಮ ಪ್ರಾಚೀನರು ಗುರುಗಳಿಗೆ ಎಂಥಹ ಮಹತ್ವ ನೀಡಿದರು ಎಂದು ತಿಳಿಯುತ್ತದೆ. ಮಹಾಭಾರತ ರಾಮಾಯಣದಂತಹ ಮಹಾಕಾವ್ಯಗಳು ನಮ್ಮ ಪೂರ್ವಜರ ಜೀವನಶೈಲಿ ನಂಬಿಕೆ ಸಂಪ್ರದಾಯ ಸಂಸ್ಕೃತಿ ಅವರು ಗೌರವಿಸುತ್ತಿದ್ದ ಮೌಲ್ಯಗಳನ್ನು ತಿಳಿಸುತ್ತವೆ. ಶ್ರೀರಾಮಚಂದ್ರನು ಮರ್ಯಾದ ಪುರುಷೋತ್ತಮ ಎಂದು ಕರೆಸಿಕೊಳ್ಳಲು ಗುರುವೇ ಕಾರಣ ಅವರ ಮಾರ್ಗದರ್ಶನ ಆತನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು ಮಹಾಭಾರತದಲ್ಲಿ ಅರ್ಜುನ ಒಬ್ಬ ಉತ್ತಮ ಬಿಲ್ವಿದ್ಯಾ ಪ್ರವೀಣ ನಾಗಲು ದ್ರೋಣಾಚಾರ್ಯ ರಂತಹ ಗುರುಗಳೇ ಕಾರಣ ಶ್ರೇಷ್ಠ ಗುರು ಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳು ಜನ್ಮದಿನದ ಅಂಗವಾಗಿ ಯು ಈ ಹಬ್ಬವನ್ನು ಆಚರಿಸುತ್ತಾರೆ 
ಈ ದಿನ ವ್ಯಾಸ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಗುರು ಎಂದರೆ ಒಂದು ವ್ಯಕ್ತಿಯಲ್ಲ ಒಂದು ಶಕ್ತಿ ಅಜ್ಞಾನವೆಂಬ ಎಣ್ಣೆ ಜಿಡ್ಡನ್ನು
ಜ್ಞಾನವೆಂಬ ಸೀಗೆಪುಡಿ ಯಿಂದ 
ತೊಳೆಯುವಂತ ಶಕ್ತಿ
ತ್ರಿವಿಧ ದಾಸೋಹಿಗಳಾದಂತಹ ಕರ್ನಾಟಕ ರತ್ನ ಕಾಯಕಯೋಗಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶ್ರೀ ಶಿವಕುಮಾರ ಸ್ವಾಮಿಜೀಯವರ ಆಶೀರ್ವಾದದಲ್ಲಿ 
ಬೆಳೆದ - ಬೆಳೆಯುತ್ತಿರುವ ಕೋಟಿ- ಕೋಟಿ ಜೀವಿಗಳೆ ಧನ್ಯ ಇಂತಹ ಗುರುಗಳಿಗೆ ಈ ಶುಭದಿನ -ಪ್ರತಿದಿನ ಶರಣು ಶರಣಾರ್ಥಿಗಳು
ಗೀತಾ ವಿ ಆರ್ ಶಿಕ್ಷಕಿ ಬೆಂಗಳೂರು

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456