ಜಯಚಾಮರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಿದ ಕೆ ಎಮ್ ಶಿವಲಿಂಗೇಗೌಡರು

Oct 22, 2025 - 13:23
 0  7
ಜಯಚಾಮರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಿದ ಕೆ ಎಮ್ ಶಿವಲಿಂಗೇಗೌಡರು

ಜಯಚಾಮರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಿದ ಕೆ ಎಮ್ ಶಿವಲಿಂಗೇಗೌಡರು ಮಳೆಯಿಂದ ಆಗುತ್ತಿರುವ ಸಮಸ್ಯೆಗೆ ಇವತ್ತಿಂದಲೇ ಬಗೆಹರಿಸುವುದಾಗಿ ಅಧಿಕಾರಿಗಳಿಗೆ ಆದೇಶ.

ಅತಿ ಶೀಘ್ರದಲ್ಲೇ  ಅರಸೀಕೆರೆ ತಾಲೂಕಿನ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆ ಶಾಸಕರಿಂದ ಭರವಸೆ.

ಅರಸಿಕೆರೆ ತಾಲೂಕಿನಲ್ಲಿ ಸುಮಾರು ಮೂರು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದ್ದು . ಹಲವಾರು ಕಡೆ ಸಮಸ್ಯೆಗಳಾಗಿದ್ದು.
ಜಯ ಚಾಮರಾಜೇಂದ್ರ ಆಸ್ಪತ್ರೆಯು ಸರಿಸುಮಾರು 1936 ಇಸ್ವಿಯ ಹಳೇ ಆಸ್ಪತ್ರೆಯಾಗಿದ್ದು . ಮೊದಲು ಆಸ್ಪತ್ರೆಯ ಪೂರ್ತಿ ಸೋರುತ್ತಿದ್ದು ಆ ಸಮಯದಲ್ಲಿ ಯಾವ ವಿರೋಧ ಪಕ್ಷದವರು ಏನು ಹೇಳುತ್ತಿರಲಿಲ್ಲ. ಈಗ ಸಣ್ಣ ಪುಟ್ಟ ವಿಚಾರಗಳಿಗೆ ಇಲ್ಲಸಲ್ಲದ ಆರೋಪಗಳು ಮಾಡುತ್ತಿದ್ದಾರೆ.  

ಕೋವಿಡ್ ಸಂದರ್ಭದಲ್ಲಿ ವಾರ್ಡ್ ಗಳ ಅವಶ್ಯಕತೆ ಇದ್ದು ತುರ್ತಾಗಿ ಅಲ್ಲಿ ವ್ಯವಸ್ಥೆ ಮಾಡಿದ್ದ ಕಾರಣ ಅಲ್ಲಿ ಸಮಸ್ಯೆ ಆಗಿರೋದು ನಿಜ.
ಈ ಸಮಸ್ಯೆಗೆ ಕೂಡಲೇ ಇವತ್ತು ದಿನದಿಂದಲೇ ಈ ಸಮಸ್ಯೆ ಮರಳು ಕರಿಸದಂತೆ ರಕ್ಷಾ ಕಮಟಿಯ ಸದಸ್ಯರುಗಳಿಗೆ ಹಾಗೂ ಅಧಿಕಾರಿಗಳಿಗೆ ಆದೇಶಿಸಿ ಕೆಲಸ ಕಾರ್ಯಗಳು ಪ್ರಾರಂಭಿಸಲಾಗುವುದು.

ಆಸ್ಪತ್ರೆಯಲ್ಲಿ ಎಲ್ಲಾ ತರದ ಸೌಲಭ್ಯಗಳು ಇದ್ದು.
ಸಿಟಿ ಸ್ಕ್ಯಾನ್ ಮಾಡಿಸಲು ಹಾಸನಕ್ಕೆ ಹೋಗುವ ರೋಗಿಗಳಿಗೆ ಹಣದ ಸಮಸ್ಯೆಯಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಕೆವಲ 15 ದಿನಗಳ ಒಳಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಮಾಡಲಾಗುವುದು.
ನಾವು ಆಡಳಿತ ಪಕ್ಷದವರು ಜನರ ಸೇವೆ ಮಾಡಲು ಯಾವಾಗಲೂ ಸಿದ್ಧರಾಗಿದ್ದೇವೆ. ಹೀಗೆ ಹೇಳುವ ಮೂಲಕ ವಿರೋಧ ಪಕ್ಷದವರಿಗೆ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಅಧಿಕಾರಿಯ ಉಮೇಶ್. ನಗರಸಭೆ ಅಧ್ಯಕ್ಷ ಎಂ ಸಮಿಉಲ್ಲಾ. ಸದಸ್ಯರಾದ ಕಿರಣ್ ಮುಖಂಡರುಗಳಾದ ಸಿಕಂದರ್ ಅಪ್ರೋಸ್. ವೈಭವ್ ಹಾಗೂ ಇತರರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456