ಜಯಲಕ್ಷ್ಮಿಪುರಂ ಬ್ರಹ್ಮಾಕುಮಾರಿ ಸೇವಾ ಕೇಂದ್ರದಲ್ಲಿ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ
ಮೈಸೂರು- ಅಂತರಾಷ್ಟ್ರೀಯ ಅಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಯಲಕ್ಷ್ಮೀಪುರಂ ಸೇವಾ ಕೇಂದ್ರದಲ್ಲಿ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಸಿ.ಎ.ಶ್ರೀನಿವಾಸ್ ಮೂರ್ತಿಯವರು ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಮಕ್ಕಳಿಗೆ ಗುರುಕುಲ ಶಿಕ್ಷಣ ಪದ್ಧತಿ ಅವಶ್ಯಕ. ಇಂದಿನ ಶಿಕ್ಷಣವು ಮಕ್ಕಳಿಗೆ ನಾಲ್ಕು ಗೋಡೆಯ ಮದ್ಯೆ ಕೂಡಿಹಾಕಿ ಮಾಘ ಸ್ನಾನ ಮಾಡಿಸಿದಂತೆ ಆಗುತ್ತಿದೆ ಎಂದು ವಿಷಾದಿಸಿದರು. ಮೂರು ದಿನಗಳು ನಡೆಯುವ ಬೇಸಿಗೆ ಶಿಬಿರದಲ್ಲಿ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಕರಗತ ಮಾಡಿಕೊಳ್ಳುವಂತೆ ಕರೆ ನೀಡಿದರು.
ರಾಜಯೋಗಿನಿ ಬ್ರಹ್ಮಾಕುಮಾರಿ ರಶ್ಮೀಜೀ ಮಾತನಾಡಿ ಮನಸ್ಸಿನ ಏಕಾಗ್ರತೆಗಾಗಿ ಧ್ಯಾನ ಬಹಳ ಅವಶ್ಯಕ ಎಂದರು. ಅದಕ್ಕಾಗಿ ಸಕರಾತ್ಮಕ ಚಿಂತನೆಗಳ ಅಭ್ಯಾಸ ವನ್ನು ತಮ್ಮ ಜೀವನದ ಅಂಗವನ್ನಾಗಿ ಮಾಡಿಕೊಳ್ಳಬೇಕೆಂದರು. ಓಂ ಶಾಂತಿ ನ್ಯೂ ಸರ್ವಿಸ್ನ ಬಿಕೆ ಆರಾಧ್ಯ ಮಾತನಾಡಿ ಇಂದಿನ ಮಕ್ಕಳೇ ನಾಳಿನ ಪ್ರಭುಗಳು. ಅದಕ್ಕಾಗಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಕೇಶಿಯ, ರೂಪ, ಭಾರತಿ, ಮಂಜುಳ, ಚಂದ್ರಕಲಾ, ಪ್ರಜ್ವಲ್, ಧನುಷ್ ಹಾಜರಿದ್ದರು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
