ಡಾ. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹಾಗೂ ಒನಕೆ ಓಬವ್ವ ರವರ ಜನ್ಮದಿನಾಚರಣೆ
ಕೆಜಿಎಫ್: ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾಕ್ಟರ್ ಮೌಲಾನ ಅಬ್ದುಲ್ ಕಲಾಂ ಅಜಾದ್ ರವರ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು.
ಹಾಗೂ ವೀರ ಒನಿತೆ ಒನಕೆ ಓಬವ್ವ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಕೆ. ನಾರಾಯಣ್ ರವರು ವಹಿಸಿದ್ದರು. ಓಬವ್ವ ಹಾಗೂ ಅಬ್ದುಲ್ ಕಲಾಂ ಆಜಾದ್ ರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಪ್ರಾಂಶುಪಾಲರು ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕುರಿತು ಸಾಂಸ್ಕೃತಿಕ ಸಂಚಾಲಕರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸಮೂರ್ತಿ. ಎಂ. ರವರು ಮಾತನಾಡಿ "ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ"ಮಹತ್ವ ಹಾಗೂ ಡಾ. ಮೌಲಾನ ಅಬ್ದುಲ್ ಕಲಾಂ ಅವರ ಜೀವನ ಸಾಧನೆ ಹಾಗೂ ಶಿಕ್ಷಣಕ್ಕೆ ಅವರು ನೀಡಿದ ಕೊಡುಗೆಯನ್ನು ತಿಳಿಸಿದರು.
ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ನೀಡಿದ ಒತ್ತು ವಯಸ್ಕರ ಶಿಕ್ಷಣದ ಪ್ರಾಮುಖ್ಯತೆ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಳಿಸುವಲ್ಲಿ ಶಿಕ್ಷಕರು ಗಮನಿಸಬೇಕಾದ ಅಂಶಗಳ ಕಡೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಅಂಜನದ ಆಯೋಗ ರೂಪಿಸಿದ ಕೀರ್ತಿ ಅಟಲ್ .ಕಲಾಂ. ಅಜಾದ್. ರವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಒನಕೆ ಓಬವ್ವ ಕುರಿತು ಮಾತನಾಡುತ್ತಾ ನಾಡಿನ ಎಲ್ಲಾ ಹೆಣ್ಣು ಮಕ್ಕಳ ಸ್ಪೂರ್ತಿಯ ಸೆಳೆಯಾಗಿ ಒನಕೆ ಓಬವ್ವ ನಿಲ್ಲುತ್ತಾರೆ.
ಅವರ ಧೈರ್ಯ ಸಾಹಸ ಸಮಯ ಪ್ರಜ್ಞೆ ಎಲ್ಲರಿಗೂ ಸ್ಪೂರ್ತಿ ತುಂಬಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಪ್ರಾಂಶುಪಾಲರಾದ ಡಾ. ಕೆ. ನಾರಾಯಣ್ ರವರು ಮಾತನಾಡಿ ಅಜಾದ್ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಜ್ಞಾನ ಇತ್ತು ಎಂದು ಅಭಿಪ್ರಾಯಪಟ್ಟರು. ಸ್ವತಂತ್ರ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರಾಗಿದ್ದ ಅಜಾದ್ ರವರು ಸ್ವತಂತ್ರ ಹೋರಾಟಗಳಲ್ಲಿ ಪಾಲ್ಗೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶಿಕ್ಷಣಕ್ಕೆ ವಿಶೇಷ ಪ್ರತಿನಿದ್ಯಾವನ್ನು ನೀಡಿದರು ಎಂದರು. ಅವರ ಶಿಕ್ಷಣ ಕ್ಷೇತ್ರದಲ್ಲಿ ಒಟ್ಟು ಸಾಧನೆಗಾಗಿ ಭಾರತ ಸರ್ಕಾರ ಅವರ ಮರಣನಂತರ ಅವರಿಗೆ "ಭಾರತ ರತ್ನ"ಪ್ರಶಸ್ತಿಯನ್ನು ನೀಡಿ ಗೌರವಿಸಿತು ಎಂದರು. ಒನಕೆ ಓಬವ್ವ ಸಾಹಸ ಧೈರ್ಯ ಸಮಯಪ್ರಜ್ಞ ಎಲ್ಲಾ ಮಹಿಳಾ ಅಧ್ಯಾಪಕರ ಆದರ್ಶವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು. ವೇದಿಕೆಯಲ್ಲಿ ಐಕ್ಯೂಎಸ್ಸಿ ಸಂಚಾಲಕರಾದ ಡಾ. ಕೆ .ಸಿ. ಬಾಬು ಪ್ರಸಾದ್. ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ವೇಣುಗೋಪಾಲ್ . ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಸುಮತಿ. ಎಸ್. ಹಾಗೂ ಕಚೇರಿ ಅಧಿಕ್ಷಕರಾದ ಶ್ರೀ ಶೇಷಾದ್ರಿ ರವರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
