ಡಿ.14ಕ್ಕೆ ಗಡಿನಾಡು ಕೆಜಿಎಫ್‍ನ ಬೆಮೆಲ್‍ನಗರದಲ್ಲಿ ಬಸವ ಜಯಂತೋತ್ಸವ
ಕೆಜಿಎಫ್, ಡಿ. 12: ಗಡಿನಾಡು ಕೋಲಾರ ಚಿನ್ನದ ಗಣಿ ಪ್ರದೇಶದ ಬೆಮೆಲ್‍ನಗರದಲ್ಲಿರುವ ಬಸವ ಸಮಿತಿಯ ವತಿಯಿಂದ ಅಕ್ಕನ ಬಳಗದ ಸಹಕಾರದಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಡಿ.14ರ ಭಾನುವಾರದಂದು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಬೆಮೆಲ್‍ನಗರದ ಕಲಾಕ್ಷೇತ್ರದ ವೃಕ್ಷಮಾತೆ ಪದ್ಮಶ್ರೀ ಡಾ|| ಸಾಲುಮರದ ತಿಮ್ಮಕ್ಕನವರ ವೇದಿಕೆಯಲ್ಲಿ ಬಸವ ಜಯಂತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನಕಪುರ ತಾಲ್ಲೂಕು, ಶ್ರೀ ಕ್ಷೇತ್ರ ಮರಳೇಗವಿ ಮಠದ ಪೀಠಾಧಿಪತಿ ಡಾ|| ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸವ ಸಮಿತಿ ಅಧ್ಯಕ್ಷ ಎಂ.ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ|| ಶರಣ ಪ್ರಕಾಶ್ ಪಾಟೀಲ ಅವರು ಭಾಗವಹಿಸುವರು.
ಬೆಮೆಲ್‍ನಗರದ ಕನ್ನಡ ಮಿತ್ರರು ಬಿ ಎಂ ಶ್ರೀ ಭವನದಿಂದ ಅಂದ್ರಹಳ್ಳಿ ರುದ್ರೇಶ್ ತಂಡದಿಂದ ವೀರಗಾಸೆ ಕುಣಿತ, ಪೂರ್ಣಕುಂಭದೊಂದಿಗೆ ಜಗಜ್ಯೋತಿ ಬಸವೇಶ್ವರರ ಪಲ್ಲಕ್ಕಿ ಮೆರವಣಿಗೆಯು ಕಲಾಕ್ಷೇತ್ರದ ವರೆವಿಗೂ ಹರಗುರು ಚರಣರ ಸಮ್ಮುಖದಲ್ಲಿ ನಡೆಯುವುದು.
ಬಸವ ಜಯಂತೋತ್ಸವದ ಪ್ರಯುಕ್ತ ಹಲವು ಭಕ್ತರಂಜನಾ ಕಾರ್ಯಕ್ರಮಗಳು, ಜಾನಪದ ವೈವಿದ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
