ನಾಗಲಾಪುರ ಮಠದಲ್ಲಿ ವಿಜೃಂಭಣೆಯಿಂದ ಕಾರ್ತಿಕ ಮಹೋತ್ಸವಗಳು

Nov 19, 2025 - 17:32
 0  5
ನಾಗಲಾಪುರ ಮಠದಲ್ಲಿ ವಿಜೃಂಭಣೆಯಿಂದ ಕಾರ್ತಿಕ ಮಹೋತ್ಸವಗಳು

  ಕೋಲಾರ., ನ. 19: ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರ ಮಠದಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರ ವಿಶೇಷ ಮಹೋತ್ಸವಗಳು ಅತ್ಯಂತ ವಿಜೃಂಭಣೆಯಿಂದ ನಡೆದವು. ಶ್ರೀಮದ್ ನಾಗಲಾಪುರ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದ ಕಾರ್ಯಕ್ರಮದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಲೋಕಕಲ್ಯಾಣಾರ್ಥವಾಗಿ ಶ್ರೀಮದ್ ನಾಗಲಾಪುರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸದ್ಭಕ್ತರ ಸರ್ವ ಅಭಿವೃದ್ದಿಗಾಗಿ ಅಪಮೃತ್ಯು ದೋಷ ಪರಿಹಾರಕ್ಕಾಗಿ, ಅನಾರೋಗ್ಯ ನಿವಾರಣೆಗಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ “ಮಹಾ ಮೃತ್ಯುಂಜಯ ಹೋಮ”, ಲಿಂಗೈಕ್ಯ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳವರ 23ನೇ ವರ್ಷದ ಸಂಸ್ಮರಣೋತ್ಸವ ಹಾಗೂ ಶಿವಪಾರ್ವತಿ ಕಲ್ಯಾಣೋತ್ಸವ, ರಾತ್ರಿ ಕಾರ್ತಿಕ ಲಕ್ಷ ದೀಪೋತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭವು ನಡೆಯಿತು.
ನಾಗಲಾಪುರ ಮಠದ ಪೀಠಾಧ್ಯಕ್ಷ ಷ.ಬ್ರ.ಶ್ರೀ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ, ಕನಕಪುರ ಚಿಕ್ಕಕಲ್ಲಬಾಳು ಮಠಾಧಿಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ತುಮಕೂರು ಹಿರೇಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು, ಶ್ರೀರಂಗಪಟ್ಟಣ ಶ್ರೀ ಚಂದ್ರವನ ಆಶ್ರಮದ ಡಾ|| ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಮತ್ತು ಬೆಳ್ಳಾವಿ ಮಠಾಧಿಪತಿ ಮಹಂತ ಶಿವಾಚಾರ್ಯ ಸ್ವಾಮಿಗಳು ಧರ್ಮ ಜಾಗೃತಿ ಸಮಾರಂಭದಲ್ಲಿ ಪ್ರವಚನ ನೀಡಿದರು.
ಕೋಲಾರದ ಶಾಸಕ ಕೊತ್ತೂರು ಮಂಜುನಾಥ, ವಿಧಾನಪರಿಷತ್ ಸದಸ್ಯ ಅನಿಲ್‍ಕುಮಾರ್, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಹಲವಾರು ಗಣ್ಯರು, ಜನಪ್ರತಿನಿಧಿಗಳು, ಹರಗುರು ಚರಣರು, ಮಠಾಧಿಪತಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು, ವಿವಿಧ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕೋಲಾರದ ಮಹಿಳಾ ಸಮಾಜ, ಎಸ್‍ಡಿಸಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಉಷಾ ಗಂಗಾಧರ್ ರವರಿಗೆ ಶತಶೃಂಗ ಲಿಂಗರಾಜಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಿ, ಗೌರವಿಸಲಾಯಿತು.
ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀಗದ್ದುಗೆ ಲಿಂಗರಾಜೇಶ್ವರ ಸೇವಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದ ನಿಮಿತ್ತವಾಗಿ ಹಲವು ವಿಶೇಷ ಮಹೋತ್ಸವ, ಕಾರ್ಯಕ್ರಮಗಳನ್ನು ಹಲವು ವಿವಿಧ ರೀತಿಯ ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
2026ನೇ ಸಾಲಿನ ಶ್ರೀಮದ್ ನಾಗಲಾಪುರ ಮಠದ ಕ್ಯಾಲೆಂಡರ್‍ನ್ನು ಹರಗುರು ಚರಣರು, ಗಣ್ಯರಿಂದ ಬಿಡುಗಡೆಗೊಳಿಸಲಾಯಿತು.
• ಚಿತ್ರಶೀರ್ಷಿಕೆ: 19ನಾಗಲಾಪುರ01: ನಾಗಲಾಪುರ ಮಠಾದಲ್ಲಿ ಕಾರ್ತಿಕ ಮಾಸದ ಮಹೋತ್ಸವಗಳಲ್ಲಿ ಮಠಾಧಿಪತಿಗಳು, ಗಣ್ಯರು, ಜನಪ್ರತಿನಿಧಿಗಳು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456