ನಾಡು,ನುಡಿಗೆ ಕಸಾಪ ಕೊಡುಗೆ ಅನನ್ಯ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್

Jan 15, 2026 - 19:13
 0  13
ನಾಡು,ನುಡಿಗೆ ಕಸಾಪ ಕೊಡುಗೆ ಅನನ್ಯ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್

ಕೆ.ಆರ್.ಪೇಟೆ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಲು, ಬೆಳೆಸಲು ಹಾಗೂ ಉತ್ತೇಜಿಸಲು ಸದಾ ಶ್ರಮಿಸುತ್ತಿರುವ ಒಂದು ಪ್ರಮುಖ ವೇದಿಕೆಯಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಗಾಂಧಿನಗರ ಗ್ರಾಮದಲ್ಲಿ ಶ್ರೀನಿವಾಸ್ ಹಾಗೂ ನಟೇಶ್ ಸಹೋದರರ ಹಳ್ಳಿ ಕಣದಲ್ಲಿ ಕೆ.ಆರ್.ಪೇಟೆ.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಭತ್ತ ರಾಗಿ ರಾಶಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.ಕಸಾಪ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ವಿಭಿನ್ನವಾದ ಸೇವೆ ಸಲ್ಲಿಸಿದ್ದಾರೆ. ಪರಿಷತ್ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಕನ್ನಡ ನಾಡಿನ ಎಲ್ಲ ಸಾಹಿತಿಗಳು, ಅಕ್ಷರ ಅಭಿಮಾನಿಗಳು, ಸಮಸ್ತ ಕನ್ನಡ ಮನಸ್ಸುಗಳ ಏಕೈಕ ಸಾರ್ವಭೌಮ ಸಂಸ್ಥೆಯಾಗಿ ಕಸಾಪ ಮುಂದೆಯೂ ಅನುಪಮ ಸೇವೆ ಸಲ್ಲಿಸಲಿದೆ ಎಂದ ಅವರು ಕನ್ನಡ ನಮ್ಮ ಬದುಕಿನ ಭಾಗ ನಮ್ಮ ಆಲೋಚನೆ, ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ, ಬದುಕು, ಬರಹ ಎಲ್ಲೆಡೆಯೂ ಕನ್ನಡವಿದೆ ಕನ್ನಡ ನಮ್ಮ ಅಸ್ಮಿತೆ ಕಸಾಪಕ್ಕೆ ಭವ್ಯವಾದ ಇತಿಹಾಸವೂ ಇದೆ ಭವಿಷ್ಯವೂ ಇದೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಕಲೆಗೆ ಕಸಾಪ ಬೆನ್ನೆಲುಬಾಗಿದೆ ಈ ಬಾರಿ ಬಿದ್ದ ಉತ್ತಮ ಮಳೆಗೆ ಬಿತ್ತನೆ ಮಾಡಿದ್ದ ರಾಗಿ ಸಮೃದ್ಧವಾಗಿ ಬೆಳೆದಿದೆ. ಜಮೀನುಗಳಲ್ಲಿ ಕಣಗಳನ್ನು ನಿರ್ಮಿಸಿಕೊಳ್ಳಲು ಮುಂದಾಗದ ಬಹುತೇಕ ರೈತರು ತಮ್ಮ ಬೆಳೆಗಳನ್ನು ರಸ್ತೆಯಲ್ಲಿ ಸುಲಭವಾಗಿ ಒಕ್ಕಣೆ ಮಾಡಬಹುದೆಂಬ ಉದ್ದೇಶದಿಂದ ರಾಗಿ ತೆನೆಯನ್ನು ತಂದು ಹಾಕಿ ಒಕ್ಕಣೆ ಆರಂಭಿಸಿದ್ದಾರೆ ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ಇದರ ನಡುವೆ ಗಾಂಧಿನಗರ ಗ್ರಾಮದಲ್ಲಿ ಶ್ರೀನಿವಾಸ್ ಹಾಗೂ ನಟೇಶ್ ಸಹೋದರರ ಹಳ್ಳಿ ಕಣದ ನಿರ್ಮಾಣ ಮಾಡಿ ರಸ್ತೆಯಲ್ಲಿ ಒಕ್ಕಣೆ ಮಾಡುವ ರೈತರಿಗೆ ಶ್ರೀನಿವಾಸ್ ಹಾಗೂ ನಟೇಶ್ ಮಾದರಿ ಆಗಿದ್ದಾರೆ.ಅವರ ಪರಿಶ್ರಮವನ್ನು ಕೆ.ಆರ್.ಪೇಟೆ ಕಸಾಪ ಗುರುತಿಸಿ ಹಳ್ಳಿ ಕಣದಲ್ಲೇ ಸುಗ್ಗಿ ಹಬ್ಬದ ಜೊತೆಗೆ ಕವಿಗೋಷ್ಠಿ ಎಂಬ ಅರ್ಥಪೂರ್ಣ ಸುಂದರ ಕಾರ್ಯಕ್ರಮ ರೂಪಿಸಿ ಪ್ರಾಮಾಣಿಕ ರೈತರಿಗೆ ಸಾಧಕ ಪತ್ರಕರ್ತರಿಗೆ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

*ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡ್ಯ ವಿಶ್ವ ವಿದ್ಯಾನಿಲಯ ಉಪ ಕುಲಸಚಿವ ಡಾ:ಎಂ.ವೈ ಶಿವರಾಮು* ಮಾನವ ಇತಿಹಾಸದಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಾಗಿರದೇ, ಪ್ರಕೃತಿಯಲ್ಲಾಗುವ ಸೂಕ್ಷ್ಮ ಬದಲಾವಣೆಗಳಿಗೆ ಮಾನವನು ತೋರುವ ಸಂವೇದನಾಶೀಲ ಪ್ರತಿಕ್ರಿಯೆಗಳಾಗಿವೆ ಭಾರತದಲ್ಲಿ ಆಚರಿಸಲ್ಪಡುವ 'ಮಕರ ಸಂಕ್ರಾಂತಿ' ಅಥವಾ ಕರ್ನಾಟಕದ ಗ್ರಾಮೀಣ ಸೊಗಡಿನ 'ಸುಗ್ಗಿ ಹಬ್ಬ'ವು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದು ಕೇವಲ ಒಂದು ಸಮುದಾಯಕ್ಕೆ ಅಥವಾ ಧರ್ಮಕ್ಕೆ ಸೀಮಿತವಾದ ಆಚರಣೆಯಲ್ಲ ಬದಲಾಗಿ ಇದೊಂದು ಖಗೋಳ ವಿಜ್ಞಾನ, ಕೃಷಿ ಆರ್ಥಿಕತೆ ಮತ್ತು ಪೌಷ್ಟಿಕಾಂಶದ ವಿಜ್ಞಾನವನ್ನು ಒಳಗೊಂಡಿರುವ ಒಂದು ಸಂಕೀರ್ಣವಾದ ಸಾಮಾಜಿಕ ಪ್ರಕ್ರಿಯೆಯಾಗಿದೆ.ಚಂದ್ರನ ಚಲನೆಯನ್ನು ಆಧರಿಸಿ ಆಚರಿಸುವ ಬಹುತೇಕ ಭಾರತೀಯ ಹಬ್ಬಗಳಿಗಿಂತ ಭಿನ್ನವಾಗಿ, ಸಂಕ್ರಾಂತಿಯು ಸೂರ್ಯನ ಚಲನೆಯನ್ನು ಆಧರಿಸಿದ ಸೌರಮಾನ ಹಬ್ಬವಾಗಿದೆ.

*ಕಾರ್ಯಕ್ರಮ ಕುರಿತು ಪ್ರಾಸ್ತಾಮಿಕವಾಗಿ ಮಾತನಾಡಿದ ಕಸಾಪ ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ಹೆಚ್.ಆರ್ ಪೂರ್ಣಚಂದ್ರ ತೇಜಸ್ವಿ* ಇತ್ತೀಚಿನ ದಿನಗಳಲ್ಲಿ ರೈತರು ತಾನು ಬೆಳೆದ ಭತ್ತ,ರಾಗಿ ಧಾನ್ಯಗಳನ್ನು ಒಕ್ಕಣೆ ಮಾಡಲು ಕಣ ನಿರ್ಮಿಸದೆ ಮುಖ್ಯ ರಸ್ತೆಯಲ್ಲೇ ಒಕ್ಕಣೆ ಹಾಕಿ ಸಂಚಾರಿ ನಿಯಮಗಳನ್ನು ಗಾಳಿಗೆ ತೋರುತ್ತಿದ್ದಾರೆ ಹಾಗಾಗಿ ರಾಜ್ಯ ಸರ್ಕಾರ ರೈತರಿಗೆ ಅರಿವು ಮೂಡಿಸಿ ರೈತರಿಗೆ ಕಣ ನಿರ್ಮಿಸಲು ಹೊಸ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ *ಬಲ್ಲೇನಹಳ್ಳಿ ಮಂಜುನಾಥ್* ವಹಿಸಿದರು.

ಹಳ್ಳಿ ಕಣ ನಿರ್ಮಿಸಿ ಕೆಲ ರೈತರಿಗೆ ಪ್ರೇರಣೆಯಾದ ರೈತ ಶ್ರೀನಿವಾಸ್, ನಟೇಶ್ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪುರಸ್ಕೃತ ಡಾ ಕೆ.ಆರ್ ನೀಲಕಂಠ ರವರನ್ನು ಕಸಾಪ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಗಣ್ಯರನ್ನು ಎತ್ತಿನಗಾಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಮೆರುಗು ತುಂಬಲಾಯಿತು.ಸಂಕ್ರಾಂತಿಯ ಅಂಗವಾಗಿ ಹಳ್ಳಿ ಕಣವನ್ನು ವಿಶೇಷವಾಗಿ ರಂಗೋಲಿ ಬಿಡಿಸಿ ಚಿತ್ತಾರ ಮೂಡಿಸಲಾಗಿತ್ತು. ಬಾಳೆಕಂದು, ಮಾವಿನ ತೋರಣ, ಕಬ್ಬಿನ ಜಲ್ಲೆ, ತೆಂಗಿನಗರಿಗಳು ಭತ್ತ ರಾಗಿ ರಾಶಿಗಳು ಹಬ್ಬವನ್ನು ಕಳೆಗಟ್ಟುವಂತೆ ಮಾಡಿದ್ದವು.

ಈ ಸಂದರ್ಭದಲ್ಲಿ ಕಸಾಪ ಮಂಡ್ಯ ಜಿಲ್ಲಾಧ್ಯಕ್ಷ ವಿ.ಹರ್ಷ ಪಣ್ಣಿದೊಡ್ಡಿ ಕಾರ್ಯಕ್ರಮ ಕೆ.ಆರ್.ಪೇಟೆ ತಾ ಕಸಾಪ ತಾಲ್ಲೂಕು ಅಧ್ಯಕ್ಷ ಹೆಚ್. ಆರ್ ಪೂರ್ಣಚಂದ್ರ ತೇಜಸ್ವಿ, ಮಕ್ಕಳ ಸಾಹಿತ್ಯ ವೇದಿಕೆ ತಾಲ್ಲೂಕು ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್,ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್,ಜಿ. ಪಂ ಮಾಜಿ ಸದಸ್ಯ ರಾಮದಾಸ್, ಹಿರಿಕಳಲೆ ಗ್ರಾ. ಪಂ ಅಧ್ಯಕ್ಷೆ ರತ್ನಮ್ಮ ರಾಮಕೃಷ್ಣೆಗೌಡ, ಉಪಾಧ್ಯಕ್ಷೆ ಹೆಚ್.ಸಿ ಮಂಜುನಾಥ್,ಸರ್ಕಾರಿ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿಕ್ಷಕ ಎ.ಕೆ ದೇವರಾಜು, ಉದಯ ರವಿ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್,ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಸದಸ್ಯರಾದ ಪುಷ್ಪ ಗಣೇಶ್, ಮಮತ ರಘು, ಸುದರಮ್ಮ ಬಸವರಾಜ್, ಪದ್ಮಮ್ಮ ನಾಗರಾಜು, ಪಿಡಿಓ ನವೀನ್, ಕಾರ್ಯದರ್ಶಿ ರವಿ,ಕಸಾಪ ತಾಲೂಕು ಮಹಿಳಾಧ್ಯಕ್ಷೆ ಸವಿತಾ ರಮೇಶ್,ಗೌರವ ಕಾರ್ಯದರ್ಶಿ ಕಟ್ಟೆ ಮಹೇಶ್ ಗೌರವ ಕೋಶಾಧ್ಯಕ್ಷ ಮಂಜೇಗೌಡ, ಸಿ.ಟಿ ಚನ್ನೇಗೌಡ ಹೋಬಳಿ ಅಧ್ಯಕ್ಷರಾದ ನಾಗರಾಜು, ಧರ್ಮರಾಜು,ಮಹೇಶ್,ವಾಸು, ಪಾಪಯ್ಯ,ವಾಸು,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್,ಯುವ ಮುಖಂಡ ಹಿರಿಕಳಲೆ ಮಧು ಸೇರಿದಂತೆ ಸಾಹಿತ್ಯ ಕವಿಗಳು ಪಾಲ್ಗೊಂಡಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456