"ನಿಸರ್ಗ ಚಿತ್ತಾರ" ಮೂಡಿಸಿದ ಮುದ್ದು ಮಕ್ಕಳು

Jul 6, 2025 - 13:02
 0  27
"ನಿಸರ್ಗ ಚಿತ್ತಾರ" ಮೂಡಿಸಿದ ಮುದ್ದು ಮಕ್ಕಳು

ಅಂತರಂಗ ಪ್ರತಿಷ್ಠಾನ (ರಿ ) ಬೆಂಗಳೂರು ಇವರು ತಿಂಗಳ ಮೊದಲ ಮಾಸದ ಕಾರ್ಯಕ್ರಮ ನಿಸರ್ಗ ಚಿತ್ತಾರ  ಎನ್ನುವ ವಿಶೇಷ ಕಾರ್ಯಕ್ರಮವನ್ನು ಸದಾಶಿವನಗರದ ಸ್ಯಾಂಕಿ  

ಕೆರೆಯ ಆವರಣದಲ್ಲಿ ವಿಭಿನ್ನವಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

 ಪ್ರೇರಣಾ ಮತ್ತು ನಿಸರ್ಗ ಚಿತ್ತಾರದ ಉದ್ಘಾಟನೆಯನ್ನು   ಪುಟ್ಟ ಮಕ್ಕಳ ಕೈಯಿಂದ ಮರಕ್ಕೆ ನೀರುಣಿಸುವ ಮೂಲಕ ನಡೆಸಲಾಯಿತು.

ಪ್ರಕೃತಿ ಪುಸ್ತಕವೇ ಪುಟ್ಟ ಮಕ್ಕಳ ಬದುಕಿಗೆ ಪ್ರೇರಣೆ ಆಗಲಿ ಅನ್ನುವುದಕ್ಕೋಸ್ಕರವೇ ಚಿತ್ರಕಲಾ ಸ್ಪರ್ಧೆಯನ್ನು  ಹಮ್ಮಿಕೊಳ್ಳಲಾಗಿತ್ತು. ನಿಸರ್ಗದ ಕುರಿತಾದ ಮಕ್ಕಳ ಕಲ್ಪನೆಯನ್ನು ಕುಂಚದಲ್ಲಿ ಮೂಡಿಸುವಲ್ಲಿ  6 ರಿಂದ 11 ವರ್ಷದವರೆಗಿನ ಮಕ್ಕಳಿಗೆ ಅವಕಾಶ ನೀಡಲಾಗಿತ್ತು.

ಸ್ಯಾಂಕಿ ಕೆರೆಯ ಸುಂದರ ಪ್ರಕೃತಿಯ   ಆವರಣದಲ್ಲಿ ಕುಳಿತು 20 ಕ್ಕೂ ಹೆಚ್ಚು ಮಕ್ಕಳು ಚಿತ್ರ ಬಿಡಿಸಿದರು. ಸಂಜೆಯ ಸಮಯದಲ್ಲಿ ಸೇರಿದ ನೂರಾರು ಹಿರಿಯರು ಅಂತರಂಗದ ಈ ವಿಶಿಷ್ಟ ಕಾರ್ಯಕ್ರಮವನ್ನು ಶ್ಲಾಘಿಸಿದರು.

 ಚಿತ್ರಕಲಾ ಸ್ಪರ್ಧೆಗೆ ನಿರ್ಣಾಯಕರಾಗಿ  ವಿಜ್ಞಾನ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಮತ್ತು ಕಲಾವಿದರಾದ ಶ್ರೀಮತಿ ಶ್ರೀಲತಾ ಭಾರ್ಗವ್

ಅವರು ಮತ್ತು ವಕೀಲರು, ಕಲಾವಿದರಾದ ಶ್ರೀ ಗಣೇಶ್ ಎಂ.ಆರ್. ಹೆಗಡೆ ಅವರು  ಆಗಮಿಸಿ ನಡೆಸಿದರು. ವಿಜೇತರಿಗೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ನಿರ್ಣಾಯಕರೇ ಬಹುಮಾನವನ್ನು ಪ್ರದಾನ ಮಾಡಿದರು.

 

ಪ್ರಥಮ ಬಹುಮಾನವನ್ನು ಗಿರಿನಗರದ ವೈಷ್ಣವಿಭಟ್  

ಒಂದನೇ ತರಗತಿಯ ವಿದ್ಯಾರ್ಥಿನಿ, ದ್ವಿತೀಯ ಬಹುಮಾನವನ್ನು 

ವಿಭೂಷ 9 ನೇ ವರ್ಷದ ಗಿರಿನಗರದ ವಿಜಯ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ಮತ್ತು ತೃತೀಯ ಬಹುಮಾನವನ್ನು ವರುಣ್ ಭಟ್ ಪೂರ್ಣಪ್ರಜ್ಞಾ ಶಾಲೆ ಸದಾಶಿವನಗರದ ವಿದ್ಯಾರ್ಥಿ ಪಡೆದುಕೊಂಡರು.

 ಭಾಗವಹಿಸಿದವರೆಲ್ಲರಿಗೂ ಉತ್ತಮ ಪುಸ್ತಕಗಳನ್ನು ನೀಡಿ ಉತ್ತಮ ವ್ಯಕ್ತಿಗಳ ಆದರ್ಶ ಮಕ್ಕಳ ಮೇಲೆ ಪ್ರಭಾವ ಬೀರಲಿ. ಪ್ರಕೃತಿ ಮತ್ತು ಪುಸ್ತಕ ಮಾತ್ರವೇ ಮನುಜನ ಮೇಲೆ ಪ್ರಭಾವ ಬೀರುವ ವಸ್ತುವಾಗಿದ್ದು. ಪ್ರಕೃತಿಯನ್ನು ನೋಡುವ ಆಸ್ವಾದಿಸುವ ಮತ್ತು ಪುಸ್ತಕವನ್ನು ಓದುವ ಸಂಸ್ಕೃತಿ ಬೆಳೆಯಬೇಕು ಕಲ್ಪನೆಗಳ ಚಿತ್ರ ಮನದಲ್ಲಿ ಮೂಡಬೇಕು. ಕಲೆ ಬದುಕಿನ ಸರ್ವತೋಮುಖ ಅಭಿವೃದ್ಧಿಗೆ ಮೂಲ. ಸದಾ ಗುರುವಾಗಿ, ಸ್ನೇಹಿತನಾಗಿ ಜೊತೆ ನಿಲ್ಲುವುದು ಪುಸ್ತಕ ಮಾತ್ರ ಎಂದು ಕಾರ್ಯಕ್ರಮದ ಸಂಘಟಕರಾದ ಅಂತರಂಗದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಮಧುರಾ ಗಾಂವ್ಕರ ಯಲ್ಲಾಪುರ ಅವರು ಕಾರ್ಯಕ್ರಮದ ಮೂಲ ಉದ್ದೇಶವನ್ನು ತಿಳಿಸಿದರು.

 ನಿರ್ಣಾಯಕರಾಗಿ ಭಾಗವಹಿಸಿದ್ದ ಶ್ರೀಮತಿ ಶ್ರೀಲತಾ ಭಾರ್ಗವವರು ಮಾತನಾಡಿ ಭಾಗವಹಿಸುವಿಕೆ ಮಕ್ಕಳಿಗೆ ಅದೆಷ್ಟು ಮುಖ್ಯ, 

ಸ್ಪರ್ಧೆ ಎಂದರೇನು? ಬದುಕಿನಲ್ಲಿ ಸೋಲು ಗೆಲುವುಗಳನ್ನು ಹೇಗೆ ಸ್ವೀಕರಿಸಬೇಕು. ಅಂತರಂಗದ ಈ ಕಾರ್ಯಕ್ರಮದ ಅಂತರಾಳದ ಭಾವವೇನು ಎಂಬುದರ ಬಗ್ಗೆ ವಿವರಿಸಿದರು. ಅಂತರಂಗ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀಮತಿ ಸಹನಾ ಎಸ್. ಭಟ್ ಅವರು ಕಾರ್ಯಕ್ರಮದ ಪೂರ್ಣ ನಿರ್ವಹಣೆ ಮತ್ತು ಆಯೋಜನೆಯ ಹೊಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಭಾಗವಹಿಸಿದ ಮಕ್ಕಳಿಗೆ ನೀಡಿದ ಪುಸ್ತಕದ ಪ್ರಾಯೋಜಕತ್ವವನ್ನು ಅಂತರಂಗ ಪ್ರತಿಷ್ಠಾನದ ಸದಸ್ಯರಾದ ಶ್ರೀ ರಾಘವೇಂದ್ರ ಭಟ್ ವಾಗಳ್ಳಿ ವಹಿಸಿಕೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456