ನೂತನ ಇಂದಿರಾ ಕ್ಯಾಂಟೀನ್ ಗೆ ಚಾಲನೆ
ಕೆಜಿಎಫ್: ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನೂತನವಾಗಿ ಪ್ರಾರಂಭಗೊಂಡ ಇಂದಿರಾ ಕ್ಯಾಂಟೀನ್ ಗೆ ಶಾಸಕಿ. ರೂಪಕಲಾ ಶಶಿಧರ್ ಹಾಗೂ ಜಿಲ್ಲಾಧಿಕಾರಿ ಎಂ .ಆರ್. ರವಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರ ಬಡವರ ಪರ ಕಾಳಜಿ ವಹಿಸಿಕೊಂಡು ಇಂದಿರಾ ಕ್ಯಾಂಟೀನನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಪ್ರಾರಂಭಿಸಿದೆ. ಇದರ ಹಿನ್ನೆಲೆ ನಮ್ಮ ಕೆಜಿಎಫ್ ನಗರದಲ್ಲಿ ಇಂದು ಇಂದಿರಾ ಕ್ಯಾಂಟೀನ್ ಪ್ರಾರಂಭಗೊಂಡಿದೆ. ಇದರ ಪ್ರಯೋಜನವನ್ನು ದಿನಗೂಲಿ ನೌಕರರು. ಸಾರ್ವಜನಿಕಾ ಆಸ್ಪತ್ರೆಯ ಹೊರರೋಗಿಗಳು. ಆಟೋ ಚಾಲಕರು. ವಲಸೆ ಬಂದ ಕೂಲಿ ಕಾರ್ಮಿಕರು. ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಒಂದು ದಿನಕ್ಕೆ ಕನಿಷ್ಠ 1500 ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಕ್ಕೂ ಮಿಗಿಲಿ ಹೆಚ್ಚಿನ ಜನ ಬಂದರೆ. ಸರ್ಕಾರಕ್ಕೆ ಇನ್ನು ಹೆಚ್ಚಿನ ಪ್ರಸ್ತಾವನೆ ಸಲ್ಲಿಸಿ. 2,000 ಸಾವಿರಕ್ಕೂ ಹೆಚ್ಚು ಜನಕ್ಕೆ ಊಟ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ ಎಂದರು. ಇಂದಿರಾ ಕ್ಯಾಂಟೀನ್ ಬಗ್ಗೆ ನನಗೆ ಹಲವಾರು ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು. ಇದರ ಬಗ್ಗೆ ಸರ್ಕಾರದಲ್ಲಿ ಚರ್ಚೆ ನಡೆಸಿ ಬೇಡಿಕೆ ಇಟ್ಟಿದ್ದ ಫಲವಾಗಿ ಇಂದು ನಮ್ಮ ಕೆಜಿಎಫ್ ನಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸಲು ಅನುಕೂಲವಾಗಿದೆ. ಇದು ನನ್ನ ಕ್ಷೇತ್ರದ ಜನರ ಕನಸು ಇಂದು ನನಸಾಗಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು, ರಾಜ್ಯ ಜನರಿಗೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ಈಡೇರಿಸುತ್ತಾ ಬರುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಎಂ .ಆರ್. ರವಿ ಮಾತನಾಡಿ ನಮ್ಮ ಕೋಲಾರ ಜಿಲ್ಲೆಯಲ್ಲಿ ನಾಲ್ಕು ಇಂದಿರ ಕ್ಯಾಂಟೀನ್ ಗಳನ್ನು ಪ್ರಾರಂಭಿಸಲಾಗಿದೆ. ಈ ಕ್ಯಾಂಟೀನ್ ನಲ್ಲಿ ಸುಸಜ್ಜಿತವಾಗಿ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ. ಇದನ್ನು ಬಡ ವರ್ಗದವರು. ಕೂಲಿ ಕಾರ್ಮಿಕರು. ಎಲ್ಲಾ ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಕೆ.ಎಂ ಶಾಂತರಾಜು. ತಹಶೀಲ್ದಾರ್ ನಾಗವೇಣಿ. ಪೌರಾಯುಕ್ತ. ಪವನ್ ಕುಮಾರ್. ನಗರಸಭೆ ಅಧ್ಯಕ್ಷರು. ಇಂದಿರಾಗಾಂಧಿ ದಯಾಶಂಕರ್. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು. ವಳ್ಳಲ್ಲ ಮುನಿಸ್ವಾಮಿ. ನಗರ ಸಭೆ ಉಪಾಧ್ಯಕ್ಷರು. ಜರ್ಮನ್. ಕಾಂಗ್ರೆಸ್ ಹಿರಿಯ ಮುಖಂಡ ಆ ಮು. ಲಕ್ಷ್ಮಿ ನಾರಾಯಣ್. ಸಿ ಪಿ ಐ. ನವೀನ್ ರೆಡ್ಡಿ. ಪಿಎಸ್ಐ. ನಗರಸಭೆ ಸದಸ್ಯರು. ಹಾಗೂ ನಗರಸಭೆ ನಾಮನಿರ್ದೇಶಿತ ಸದಸ್ಯರು ಮೊದಲಾದವರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
