ಪಾರಂಡಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಎಸ್ ಬಿ ಡಿಜಿಟಲ್ ಆಟೋಮೇಷನ್ ವತಿಯಿಂದ ಸಮವಸ್ತ್ರ ವಿತರಣೆ

Aug 18, 2025 - 16:53
 0  1
ಪಾರಂಡಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಎಸ್ ಬಿ ಡಿಜಿಟಲ್ ಆಟೋಮೇಷನ್ ವತಿಯಿಂದ ಸಮವಸ್ತ್ರ ವಿತರಣೆ

ಕೆಜಿಎಫ್: ನಗರದ ಪಾರಂಡಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅದೇ ಗ್ರಾಮದ ಎಸ್ ಬಿ ಡಿಜಿಟಲ್ ಆಟೋಮೇಷನ್ ಸಿಇಓ ಬಾಬುರೆಡ್ಡಿ ರವರಿಂದ ಸುಮಾರು 3 ಲಕ್ಷ ವೆಚ್ಚದ ಒಂದು ಮಗುವಿಗೆ ಮೂರು ಜೊತೆಗಳ ಸಮವಸ್ತ್ರ ವನ್ನು ವಿತರಿಸಲಾಯಿತು.

ಅದೇ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಆಗಿರುವ ಬಾಬು ರೆಡ್ಡಿ ರವರು ಜರ್ಮನ್ ದೇಶದಲ್ಲಿ ಕೆಲಸ ಮಾಡುತ್ತಿದ್ದು, ತಾವು ಓದಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ತಮ್ಮ ಕೈಯಲ್ಲಿ ಆಗುವ ಸಹಾಯ ನೀಡಬೇಕೆಂದು. ಸಮವಸ್ತ್ರಗಳನ್ನು ಮತ್ತು ಹಳವು ಪಿಠೋಪಕರಣಗಳನ್ನು ಶಾಲೆಗೆ ದಾನಿಗಳ ರೂಪದಲ್ಲಿ ಸೇವೆ ಮಾಡಿರುತ್ತಾರೆ.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು. ಮಂಜುನಾಥ್ ಮಾತನಾಡಿ ಸರ್ಕಾರಿ ಶಾಲೆಗಳನ್ನು ಇದೇ ರೀತಿ ಯುವಕರು ಸರ್ಕಾರಿ ಶಾಲೆಯ ಉಳಿಯುವುದಾಗಿ ಕೈಜೋಡಿಸಬೇಕು. ಇತ್ತೀಚಿನ ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದೆ. ಸರ್ಕಾರಿ ಶಾಲೆ ಉಳುವಿಗಾಗಿ ಇಂದಿನ ಯುವಕರು ಪೋಷಕರು ಮುಖಂಡರು ಕೈಜೋಡಿಸಿ ಸರ್ಕಾರಿ ಶಾಲೆಯನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
ಅದೇ ಗ್ರಾಮ ಪಂಚಾಯತಿ ವತಿಯಿಂದ ಪಿಡಿಒ ಮಂಜುನಾಥ್.
ಅದೇ ಗ್ರಾಮದ ಸದಸ್ಯರು ಆಗಿರುವ ವಾಣಿ ಶ್ರೀನಿವಾಸ್ ರವರಿಂದ ಶಾಲೆಯ ಮಕ್ಕಳಿಗೆ 1, ಲಕ್ಷ ವೆಚ್ಚ ಡಿಸ್ಕ್  ಮತ್ತು ರೌಂಡ್ ಟೇಬಲ್ ಅನ್ನು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರು ಎಲ್. ಎನ್. ನರಸಿಂಹಮೂರ್ತಿ ಮಾತನಾಡಿ ಸರ್ಕಾರಿ ಶಾಲೆಗೆ ದಾನಿಗಳಾದ ಬಾಬು ಹಲವಾರು ಸೇವೆಗಳನ್ನು ನೀಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು ವಾಣಿ ಶ್ರೀನಿವಾಸ್ ಅವರು ಸಹ ಹಲವಾರು ಸೇವೆ ನೀಡಿದ್ದಾರೆ.
ಹಲವಾರು ಜನ ಹತ್ತಿರ ಹಣವಿದ್ದರೂ. ಸಮಾಜ ಸೇವೆ ಮಾಡಲು ಮನಸ್ಸು ಬರುವುದಿಲ್ಲ. ಇಂತಹ ಒಳ್ಳೆ ಗುಣ ಇರುವ ವ್ಯಕ್ತಿಗಳು ನಮ್ಮ ಮಧ್ಯೆ ಇರುತ್ತಾರೆ. ಅಂಥವರನ್ನು ನಾವು ಗುರುತಿಸಿ ಅವರ ಮೂಲಕವಾಗಿ ನಮ್ಮ ಸರ್ಕಾರಿ ಶಾಲೆಗಳ ಸುಧಾರಣೆಗೆ ಅಭಿವೃದ್ಧಿಗೆ ನಾವು ಬಳಸಿಕೊಳ್ಳಬೇಕು. ಈ ವಿಷಯದಲ್ಲಿ ಶಾಲೆಯ ಮುಖ್ಯ ಶಿಕ್ಷಕರು. ರಾಜಶ್ರೀ ಮೇಡಂ ಇದುವರೆಗೂ ಹಲವಾರು ದಾನಿಗಳ ಮುಖಾಂತರ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಿಗೆ ನಮ್ಮ ತಾಲೂಕು ಮಟ್ಟದ ಶಿಕ್ಷಕರ ವತಿಯಿಂದ ಜಿಲ್ಲಾ ಮಟ್ಟದಲ್ಲಿ ನೀಡುವ ಉತ್ತಮ ಶಿಕ್ಷಕರ ಆಯ್ಕೆಗೆ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕರು ರಾಜಶ್ರೀ ಮೇಡಂ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿ ಹಾಗೂ ದಾನಿಗಳು ಮುಂದೆ ಬಂದರೆ ಖಾಸಗಿ ಶಾಲೆಗಳನ್ನು ಮೀರಿಸಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಿ.ಡಿ.ಒ. ಮಂಜುನಾಥ್. ಶಿಕ್ಷಕರ ವೃಂದದ ಪದಾಧಿಕಾರಿಗಳಾದ. ರವಿಚಂದ್ರನ್ ನಾಯ್ಡು. ತೂಕಲ್. ಶ್ರೀನಿವಾಸ್. ಪಿವಿ .ಶ್ರೀನಿವಾಸ್. ಕೃಷ್ಣಮೂರ್ತಿ. ಶಿಲ್ಪ. ಸರೋಜಮ್ಮ. ಮಾನಸ. ಪುಷ್ಪಂ. ಎಸ್ ಡಿ ಎಂ ಸಿ ಅಧ್ಯಕ್ಷರು ಚೆನ್ನಪ್ಪ. ಕೃಷ್ಣಮೂರ್ತಿ. ಸುಬ್ಬಲಕ್ಷ್ಮಿ ರಾಮಕೃಷ್ಣ ರೆಡ್ಡಿ. ರವರು ಪಾಲ್ಗೊಂಡಿದ್ದರು. ಪ್ರಮುಖ ದಾನಿಗಳಾದ ಸುಬ್ಬ ರೆಡ್ಡಿ ಹಾಗೂ ವಿಶ್ವನಾಥ್ ರೆಡ್ಡಿ. ವಿಧಾನಸೌಧದಲ್ಲಿರುವ ನಾಗರಾಜ್ ಇವರು ಶಾಲೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456