ಪ್ರೇಕ್ಷಕರನ್ನು ರಂಜಿಸಿದ ಸುಗಮ ಸಂಗೀತ ಕಾರ್ಯಕ್ರಮ
ಪ್ರೇಕ್ಷಕರನ್ನು ರಂಜಿಸಿದ ಸುಗಮ ಸಂಗೀತ ಕಾರ್ಯಕ್ರಮ
ಬೆಂಗಳೂರು : ನಗರದ ವಯ್ಯಾಲಿಕಾವಲಿನಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ ವಯ್ಯಾಲಿಕಾವಲ್ ಎಕ್ಸ್ ಟೆನ್ಷನ್ ಅಸೋಸಿಯೇಷನ್ ವತಿಯಿಂದ ಶ್ರೀರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ರಂಜಿತಾ ಪ್ರಸಾದ್, ವಿದುಷಿ ಶ್ರೀಮತಿ ಭಾವನಾ ಮೂರ್ತಿ ಮತ್ತು ಶ್ರೀ ಭಾಷ್ಯಂ ಚಕ್ರವರ್ತಿ ಇವರುಗಳು ನಾಡಿನ ಹೆಸರಾಂತ ಕವಿಗಳಿಂದ ರಚಿಸಲ್ಪಟ್ಟ ಅಪರೂಪದ ಭಾವಗೀತೆ, ಜಾನಪದ ಗೀತೆ ಮತ್ತು ಭಕ್ತಿಗೀತೆಗಳು ಬಹಳ ಸೊಗಸಾಗಿ ಹಾಡಿದರು. ಪಕ್ಕವಾದ್ಯದಲ್ಲಿ ವಿದ್ವಾನ್ ಶ್ರೀ ಹೆಚ್.ಬಿ. ಜಯರಾಮ್ (ಕೀಬೋರ್ಡ್), ವಿದ್ವಾನ್ ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ) ಮತ್ತು ಮೈಸೂರಿನ ಯುವ ಪ್ರತಿಭೆ ಶ್ರೀ ಬಾಲಸುಬ್ರಹ್ಮಣ್ಯಂ (ಕೊಳಲು) ಸಾಥ್ ನೀಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
