ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಹಿಂದೂ‌ ರಾಷ್ಟ್ರ ಅಧಿವೇಶನ ! 

Apr 9, 2026 - 15:27
 0  4
ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಹಿಂದೂ‌ ರಾಷ್ಟ್ರ ಅಧಿವೇಶನ ! 

ಬೆಂಗಳೂರು - ಇಂದು ರಾಜ್ಯದಲ್ಲಿ ಲವ್ ಜಿಹಾದ್, ಜಿಮ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಜನಸಂಖ್ಯಾ ಜಿಹಾದ್, ಮತಾಂತರ, ಹಿಂದೂಗಳ ಮೇಲೆ ಕಲ್ಲುತೂರಾಟ, ಹಿಂದೂ ಶ್ರದ್ದಾಕೇಂದ್ರಗಳ ಮೇಲೆ ಆಘಾತ ಮುಂತಾದ ಸಂಕಟಗಳು ಮಿತಿಮೀರಿದೆ. ರಾಜ್ಯ ಸರಕಾರವು ಅಲ್ಪಸಂಖ್ಯಾತರಿಗೆ ಒಲೈಕೆಯ ಹೆಸರಿನಲ್ಲಿ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ. ಹಿಂದೂ ಸಮಾಜವನ್ನು ಜಾತಿಯ ಆಧಾರದ‌ ಮೇಲೆ ಒಡೆದು ಆಳಲಾಗುತ್ತಿದೆ. ಇದನ್ನು ತಡೆಯಲು, ಹಿಂದೂ ಸಮಾಜವನ್ನು ರಕ್ಷಣೆ ಮಾಡಲು, ಸಮಸ್ತ ಹಿಂದೂಗಳ ಸಂಘಟನೆಗಳಲ್ಲಿ ಐಕ್ಯತೆ ನಿರ್ಮಾಣವಾಗುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಸಮಸ್ತ ಹಿಂದೂ‌ ಸಂಘಟನೆಗಳ, ವಕೀಲರ, ಉದ್ಯಮಿಗಳ, ಅರ್ಚಕರ, ದೇವಸ್ಥಾನದ ಟ್ರಸ್ಟಿಗಳ ಹಿಂದೂ ರಾಷ್ಟ್ತ‌ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಈ ಅಧಿವೇಶನದಲ್ಲಿ ಹಿಂದೂ‌ ಸಮಾಜವು ಎದುರಿಸುತ್ತಿರುವ ಸವಾಲುಗಳು, ಅದಕ್ಕೆ ಕಾರಣ ಮತ್ತು ಮಾಡಬೇಕಾದ ಪರಿಹಾರಗಳ ಕುರಿತು ಚಿಂತನೆ ಮಾಡಲಾಗುತ್ತದೆ. 


ಈ ಉದ್ದೇಶದಿಂದಲೇ ಹಿಂದೂ ಜನಜಾಗೃತಿ ಸಮಿತಿಯು ಬೆಂಗಳೂರಿನ ರಾಜಾಜಿನಗರದಲ್ಲಿರುವ ಅಕ್ಷರಧಾಮ ಅತಿಥಿ ನಿವಾಸದಲ್ಲಿ ಏಪ್ರಿಲ್ 11 ರ ಶನಿವಾರದಂದು ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಈ ಅಧಿವೇಶನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ್ಯದ‌ 15 ಜಿಲ್ಲೆಗಳ 300 ಕ್ಕೂ ಹೆಚ್ಚು ಹಿಂದೂ ಮುಖಂಡರು, ವಕೀಲರು, ದರ್ಮದರ್ಶಿಗಳು‌ ಭಾಗವಹಿಸುವರು.ಹಿಂದೂ ಧರ್ಮದ‌ ಮೇಲಿನ ಆಘಾತಗಳಾದ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ತಡೆಯಲು ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಹಿಂದೂ‌ ರಾಷ್ಟ್ರ ಅಧಿವೇಶನ.

ಈ ಅಧಿವೇಶನದಲ್ಲಿ ಮುಖ್ಯವಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್ , ರಾಜರಾಜೇಶ್ವರಿ ಮಹಾಸಂಸ್ಥಾನದ ಸ್ವಾಮೀಜಿಗಳಾದ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಗಳು, ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ ಸೇರಿದಂತೆ ನೂರಾರು ವಕೀಲರು, ವೈದ್ಯರು, ಉದ್ಯಮಿಗಳು, ಚಿಂತಕರು, ಲೇಖಕರು, ದೇವಸ್ಥಾನಗಳ ವಿಶ್ವಸ್ಥರು ಮತ್ತು ನೂರಾರು ಹಿಂದೂ ಸಕ್ರೀಯ ಕಾರ್ಯಕರ್ತರು ಉಪಸ್ಥಿತರಿರುವವರು. ಈ ಅಧಿವೇಶನದಲ್ಲಿ ಭಾಗವಹಿಸಲು ಇಚ್ಛಿಸುವವರು ಈ 7204082609 ನಂಬರ್ ಗೆ ಸಂಪರ್ಕ ಮಾಡಬಹುದು.


ಶ್ರೀ.ಮೋಹನ ಗೌಡ, 
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ


(ಸಂಪರ್ಕ: 7204082609)

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456