ಬೆಮೆಲ್ ಕನ್ನಡ ಮಿತ್ರರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕೆಜಿಎಫ್: ಡಿನಾಡು ಕೆಜಿಎಫ್ ಬೆಮೆಲ್ ನಗರದ ಕನ್ನಡ ಮಿತ್ರರು ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅದ್ದೂರಿ ಚಾಲನೆ ನೀಡಲಾಯಿತು.
ಮೊದಲನೆಯ ದಿನದ ಕಾರ್ಯಕ್ರಮದ ಅಂಗವಾಗಿ ಉದ್ಘಾಟನಾ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮವು ಬೆಮಲ್ ಕನ್ನಡ ಮಿತ್ರರು ಕಲಾವಿದರು ನಿರ್ಮಿಸಿದ್ದ ಹಂಪೆ ಕಲ್ಲಿನ ರಥದ ಕಲಾಕೃತಿಯುಳ್ಳ, ವೃಕ್ಷ ಮಾತೆ, ಪದ್ಮಶ್ರೀ ಡಾಕ್ಟರ್ ಸಾಲುಮರದ ತಿಮ್ಮಕ್ಕನವರ ವೇದಿಕೆಯಲ್ಲಿ ಜರುಗಿತು.
ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬೆಮಲ್ ಕೆಜಿಎಫ್ ಸಂಕೀರ್ಣದ ಮುಖ್ಯಸ್ಥರಾದ ಯೋಗನಂದಜೀ ಅವರು ಕರ್ನಾಟಕದ ಸಮಗ್ರ ಚಿತ್ರಣವನ್ನು ಪ್ರಸ್ತುತ ಪಡಿಸಿ ಗಡಿನಾಡಿನಲ್ಲಿ ಕನ್ನಡ ಮಿತ್ರರು ಸಂಸ್ಥೆ ಹಮ್ಮಿಕೊಳ್ಳಲಾಗುವ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿಯ ಸಹಕಾರವಿರುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬÉಮಲ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಆರ್. ಸುಬ್ರಮಣಿ ಅವರು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಇಂತಹ ಸಂದರ್ಭದಲ್ಲಿ ನೆನಯುವುದು ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಸಿದರು. ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ನೀವಾಸಿಂಗ್ ಉಪಸ್ಥಿತರಿದ್ದರು.
ಕನ್ನಡ ಮಿತ್ರರು ಸಂಸ್ಥೆಯ ಅಧ್ಯಕ್ಷರಾದ ಆರ್.ಎ.ಎಸ್ .ಪಾಟೀಲ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇದೇ ಪ್ರಥಮ ಬಾರಿಗೆ ಬೆಮೆಲ್ ಕೇಂದ್ರೀಯ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಿರುವುದು ಅತ್ಯಂತ ಸಂತೋಷ ಹಾಗೂ ಅಭಿನಂದನೀಯವೆಂದರು. ವೇದಿಕೆಯಲ್ಲಿ ಕನ್ನಡ ಮಿತ್ರರು ಸಂಸ್ಥೆಯ ಉಪಾಧ್ಯಕ್ಷ ಎಂ.ವಿ ಗೋಪಾಲ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ದುಡಿದ ಮಹನೀಯರಾದ ಕೆ.ಸಿ. ಶಿವಪ್ಪ ಅವರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಮತ್ತು ಎಲ್ಲ ಸಭಿಕರನ್ನು ಖಜಾಂಚಿ ಅಶೋಕ್ ನಿಡುಗುಂದಿ ರವರು ಸ್ವಾಗತಿಸಿದರು. ಸಹ ಕಾರ್ಯದರ್ಶಿ ಪ್ರಶಾಂತ್ ಬನ್ನಿಗೋಳ ವಂದಿಸಿದರು. ಅಚ್ಚುಕಟ್ಟಾದ ನಿರೂಪಣÉಯನ್ನು ಕಾರ್ಯದರ್ಶಿ ಜಿ. ಕುಬೇರಪ್ಪ ನವರು ನಡೆಸಿಕೊಟ್ಟರು.
ಮನರಂಜನೆ ಕಾರ್ಯಕ್ರಮದ ಅಂಗವಾಗಿ ಕನ್ನಡ ಧ್ಯಾನ-ಜಾನಪದಗಾನ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕುಮಾರಿ. ಉಮಾ. ಜಿ. ವೈ. ರಿಂದ ಹಮ್ಮಿಕೊಳ್ಳಲಾಗಿತ್ತು. ತಮ್ಮ ಅತ್ಯದ್ಭುತ ಗಾಯನದಿಂದ ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳು ಜಾನಪದ ಗೀತೆಗಳು ಮತ್ತು ಭಾವಗೀತೆಗಳನ್ನು ಹಾಡಿ ಸಭಿಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.
• ಚಿತ್ರಶೀರ್ಷಿಕೆ: 20ಕೆಜಿಎಫ್01: ಕನ್ನಡ ಮಿತ್ರರು ವತಿಯಿಂದ ಬೆಮೆಲ್‍ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
