ಬೇತಮಂಗಲದಲ್ಲಿ ಆರ್ಯ ವೈಶ್ಯ ಸಮುದಾಯದಿಂದ ಸಡಗರದ ವಾಸವಿ ಜಯಂತೋತ್ಸವ ಆಚರಣೆ

Apr 27, 2026 - 18:01
 0  1
ಬೇತಮಂಗಲದಲ್ಲಿ ಆರ್ಯ ವೈಶ್ಯ ಸಮುದಾಯದಿಂದ ಸಡಗರದ ವಾಸವಿ ಜಯಂತೋತ್ಸವ ಆಚರಣೆ

       ಬೇತಮಂಗಲ: ಆರ್ಯ ವೈಶ್ಯ ಸಮುದಾಯದ ವತಿಯಿಂದ  ಭಕ್ತಿ ಭಾವದೊಂದಿಗೆ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಜಯಂತೋತ್ಸವವನ್ನು ಅತ್ಯಂತ ವೈಭವದಿಂದ ಶ್ರದ್ದಾಪೂರಕವಾಗಿ ಆಚರಿಸಲಾಯಿತು.

ವಾಸವಿ ಜಯಂತಿ ಪ್ರಯುಕ್ತ ಇಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಅಮ್ಮನವರ ವಿಗ್ರಹವನ್ನು ವಿವಿಧ ಬಗೆಯ ಹೂವು ಗಳಿಂದ ಸಿಂಗಾರಿಸಿ ಅಮ್ಮನವರಿಗೆ ಬೆಳಿಗ್ಗೆನಿಂದಲೂ ವಿಶೇಷ ಪೂಜೆ ಹೋಮ ಹವನ ಅಭಿಷೇಕ ವಿಧಿವಿಧಾನಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ವಿಶೇಷವಾಗಿ ಮಹಿಳೆಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಿತು. 

ಈ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಮತ್ತು ಎಲ್ಲರಿಗೂ ಅಮ್ಮನವರ ಅನುಗ್ರಹ ಸಿಗಲಿ ಎಂಬ ಉದ್ದೇಶದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಮುದಾಯದ ಬಾಂಧವರೆಲ್ಲರೂ ಒಗ್ಗೂಡಿ ವಾಸವಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ದೇವಿಗೆ ಹಾಲಿನ ಅಭಿಷೇಕ: ಆರ್ಯ ವೈಶ್ಯ ಸಮುದಾಯದ ಮಹಿಳೆಯರು ಹಾಲಿನ ಕಳಶಗಳನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತದ ನಂತರ ಅದೇ ಹಾಲಿನಿಂದ ಅಮ್ಮನವರಿಗೆ ಹಾಲಿನ ಅಭಿಷೇಕ ಮಾಡಲಾಯಿತು. 

ಅನ್ನದಾನ: ಶ್ರೀ ವಾಸವಿ ಜಯಂತೋತ್ಸವ ಅಂಗವಾಗಿ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಮೆರವಣಿಗೆಯ ಶೋಭಾಯಾತ್ರೆ: ಸಾಯಂಕಾಲ ವಾಸವಿ ಅಮ್ಮನವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಸಮುದಾಯದ ಮಹಿಳೆಯರು ದೀಪಗಳನ್ನು ಹೊತ್ತು ಅಮ್ಮನವರಿಗೆ ದೀಪಾರಾದನೆ ನೇರವೇರಿಸಿದರು. 

ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಮುದಾಯದ ಮುಖಂಡರುಗಳು ಆರ್ಯ ವೈಶ್ಯ ಯುವ ಮಂಡಳಿ ಹಾಗೂ ಮಹಿಳಾ ಮಂಡಳಿ ಸದಸ್ಯರು ಸೇರಿದಂತೆ ಅನೇಕ ಭಕ್ತರು ಅಮ್ಮನ ಕೃಪೆಗೆ ಪಾತ್ರರಾದರು.

ಚಿತ್ರ 01 ಬೇತಮಂಗಲದಲ್ಲಿ ಆರ್ಯ ವೈಶ್ಯ ಸಮುದಾಯದವತಿಯಿಂದ ಸಡಗರವಾಗಿ ವಾಸವಿ ಜಯಂತಿ ಆಚರಣೆ ಮಾಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456