ಬೋಧಿ ವಿಶ್ವದಾಖಲೆಯ ಮೂಲಕ ತಾನೀಶ್.ಎನ್ ಮತ್ತೊಂದು ನೂತನ ದಾಖಲೆ. 18 ಕ್ಕೆ ಏರಿದ ವಿಶ್ವದಾಖಲೆ ಪಟ್ಟಿ
ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಚಿನ್ನದ ಜಿಲ್ಲೆಯ ಕ್ರೇಜಿ ಟ್ಯಾಲೆಂಟ್, ಸೂಪರ್ ಮೆಮೋರಿ ಕಿಡ್, ಹೊಯ್ಸಳ ಪ್ರಶಸ್ತಿ ಹಾಗೂ ಗ್ರ್ಯಾಂಡ್ ಮಾಸ್ಟರ್ ಬಿರುದಾಂಕಿತ ಕೇವಲ 7 ವರ್ಷದ ಪುಟ್ಟ ಬಾಲಕ ತಾನೀಶ್.ಎನ್ ಗೆ ಮತ್ತೊಂದು ವಿಶ್ವದಾಖಲೆ ಮಾಡುವ ಮೂಲಕ ಸಾಧಕರ ಪಟ್ಟಿಗೆ ಸೆರ್ಪಡೆ ಆಗಿದ್ದಾನೆ.
ತಮಿಳುನಾಡಿನ ಚೆನೈನಲ್ಲಿ ವರ್ಡ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ಇವರು ಆಯೋಜಿಸಿದ್ದ ಅತಿ ದೊಡ್ಡ ಕರಾಟೆ ಪ್ರದರ್ಶನದಲ್ಲಿ ತಾನೀಶ್.ಎನ್ ಭಾಗವಹಿಸುವ ಮೂಲಕ ಸರಿಸುಮಾರು 30 ನಿಮಿಷಗಳ ಕಾಲ ನಿರಂತರ ಕರಾಟೆ ಹಂತಗಳನ್ನು ಯಶಸ್ವಿಯಾಗಿ ಪ್ರದರ್ಶನ ನೀಡಿದ್ದಕ್ಕಾಗಿ "ಬೋಧಿ ವರ್ಡ್ಡ್ ರೆಕಾರ್ಡ್ಸ್" ಈ ಒಂದು ವಿಶ್ವದಾಖಲೆಯ ಪಟ್ಟಿಗೆ ಸೇರ್ಪಡೆ ಆಗಿದ್ದಾನೆ.
ಈ ಬಗ್ಗೆ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ತಾಯಿ ಶ್ರೀಮತಿ ಶ್ವೇತನಾಗರಾಜ್ ಹಾಗೂ ತಂದೆ ಯುವಕವಿ ಲಕ್ಕೂರು ಎಂ.ನಾಗರಾಜ್ ಮಗನ ಸಾಧನೆಗೆ ಶುಭಾಶಯ ಅರ್ಪಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
