ಬ್ರೋಕರ್ ಗಳ ಹಾವಳಿ ತಡೆಗಟ್ಟಲು ಕರವೇ ಒತ್ತಾಯ ಬ್ರೇಕ ಇನ್ಸ್ಪೆಕ್ಟರ್ ತರಬೇತಿ ಇರುವಾಗಲೇ ಸರ್ಟಿಫಿಕೇಟ್ ವಿತರಣೆ
ಕೆ.ಜಿಎಫ್. ಫೆ. 19: ಕೆಜಿಎಫ್ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದಿರುವ ಅವ್ಯವಹಾರವು ಸಾರ್ವಜನಿಕ ವಲಯದಲ್ಲಿ ಹರಾಜು ಹಾಕಲಾಗುತ್ತಿದ್ದು ಅನಧಿಕೃತವಾಗಿ ಅಧಿಕಾರಿಗಳೇ ಬ್ರೋಕರ್ ಇಟ್ಟುಕೊಂಡಿದ್ದು ಅವರುಗಳನ್ನು ಕಚೇರಿಯಿಂದ ಹೊರಗೆ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜ್ ಒತ್ತಾಯಿಸಿದರು.
ಸಹಾಯಕ ಸಾರಿಗೆ ಅಧಿಕಾರಿ ಗಜೇಂದ್ರ ಬಾಬು ರನ್ನು ಭೇಟಿ ಮಾಡಿ ನಿಮ್ಮ ಕಚೇರಿಯಲ್ಲಿನ ಬ್ರೇಕ್ ಇನ್ಸ್ ಸ್ಪೆಕ್ಟರ್ ಪೂಜಾ ಬೆಂಗಳೂರಿನಲ್ಲಿ ಇಲಾಖಾ ತರಬೇತಿಯಲ್ಲಿ ಭಾಗವಹಿಸಿದ್ದ ದಿನದಂದೇ ಕಚೇರಿಯಲ್ಲಿ 20 ಕ್ಕು ಹೆಚ್ಚು ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ವಿತರಿಸಲಾಗಿ ದೆ ನಿಮ್ಮ ಕಚೇರಿಯಲ್ಲಿ ನಿತ್ಯ ಕೆಲವು ಅಧಿಕಾರಿಗಳು ಅವ್ಯವಹಾರ ಗಳಲ್ಲಿ ನಿರತರಾಗಿದ್ದು ನಿಮ್ಮ ಗಮನಕ್ಕೆ ಬಂದಿದ್ದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನೆ ಮಾಡಿ ಹಿಂದೆ ಸಹ ವಾಣಿಜ್ಯಕ್ಕೆ ಬಳಸುತ್ತಿರುವ ಟ್ರ್ಯಾಕ್ಟ್ ಗಳಿಗೆ ಬೋನಿಫೈಡ್ ಸರ್ಟಿಫಿಕೇಟ್ ಗಳನ್ನು ನೀಡಲಾಗಿದೆ ಅದರ ಬಗ್ಗೆ ನೀವು ಕೈಗೊಂಡಿರುವ ಕ್ರಮವೇನು ಎಂದು ಪ್ರಶ್ನೆ ಮಾಡಿದರು.
ನಿಮ್ಮ ಕಚೇರಿಯನ್ನು ಶುದ್ದಿಕರಣ ಮಾಡಬೇಕಾದ ಅಗತ್ಯವಿದ್ದು ಅಧಿಕಾರಿಗಳು ಖಾಸಗಿ ವ್ಯಕ್ತಿ ಗಳನ್ನು ಬ್ರೋಕರ್ ಗಳಾಗಿ ಇಟ್ಟುಕೊಂಡಿದ್ದು ಅವರುಗಳನ್ನು ಕಚೇರಿಯಿಂದ ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು.
ಕಚೇರಿ ಹೊರ ಭಾಗದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿ ಸಿ ಮಾತನಾಡಿದ ಕೋಲಾರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಮುನಿರಾಜ್ ಕೆಜಿಎಫ್ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಲೂರು ಬಂಗಾರಪೇಟೆ ಕೆಜಿಫ್ ವಿಧಾನಸಭಾ ಕ್ಷೇತ್ರಗಳು ಒಳಪಡಲಿದೆ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅತಿ ಭ್ರಷ್ಟ ಆರ್‌ಟಿಓ ಕಚೇರಿ ಎಂದು ಸಾರ್ವಜನಿಕ ವಲಯದಲ್ಲಿ ಹೇಳಲಾಗುತ್ತಿದೆ ಎಂದು ಆರೋಪಿಸಿದರು.
ಸಾರ್ವಜನಿಕರು ತಮ್ಮ ವಾಹನಗಳಿಗೆ {ಸರ್ಟಿಫಿಕೇಟ್ } ವಾಹನ ಚಲಾವಣೆ ಪ್ರಮಾಣ ಪತ್ರಗಳನ್ನು ಹಾಗೂ ಇತರೆ ಕೆಲಸಗಳಿಗೆ ಬಂದರೆ ಪ್ರತಿಯೊಂದುಕ್ಕೂ ಇಂತಿಷ್ಟು ಎಂದು ಫಿಕ್ಸ�.
ಅಂತಹ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ನಿಷ್ಠಾವಂತ ಪ್ರಾಮಾಣಿಕವಾದ ಅಧಿಕಾರಿಗಳನ್ನು ನೇಮಿಸಬೇಕು. ಎಂದು ಒತ್ತಾಯಿಸಿದರು.
ಇದು ಹೀಗೆ ಮುಂದೆ ಬರುತ್ತಾರೆ ಮುಂದೊಂದು ದಿನ ಕಚೇರಿ ಮುಂಭಾಗ ಕರವೇ ವತಿಯಿಂದ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಸಲಾಗುವುದು ಎಂದರು.
ಎಚ್ಚರಿಕೆ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ಮೂಲಸೌಕರ್ಯಗಳು ಕೊರತೆಯಾಗಿದೆ ಇದನ್ನು ಸರಿಪಡಿಸಬೇಕೆಂದು ಈ ಮೂಲಕ ತಿಳಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
